twitter
    For Quick Alerts
    ALLOW NOTIFICATIONS  
    For Daily Alerts

    ಜುಲೈ 30 ಕರ್ನಾಟಕ ಬಂದ್: ರಸ್ತೆಗಿಳಿಯಲಿರುವ ಕನ್ನಡ ಚಿತ್ರರಂಗ

    By Suneetha
    |

    ಬೆಳಗಾವಿಯಲ್ಲಿ ಹುಟ್ಟಿ, ಗೋವಾದಲ್ಲಿ ಜೀವನದಿಯಾಗಿ ಹರಿಯುತ್ತಿರುವ 'ಮಹದಾಯಿ' ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾದ ಹಿನ್ನಲೆಯಲ್ಲಿ, ಜುಲೈ 30 ರಂದು ಇಡೀ ಕರ್ನಾಟಕ ಬಂದ್ ಗೆ ಕನ್ನಡ ಚಿತ್ರರಂಗ ಕರೆ ನೀಡಿದೆ.

    ಈಗಾಗಲೇ ಈ ಕುರಿತು ಸಭೆ ನಡೆಸಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಜುಲೈ 30 ರಂದು ಬಂದ್ ಗೆ ಕರೆ ನೀಡಿದೆ. ಆದ್ದರಿಂದ ಜುಲೈ 30, ಶನಿವಾರದಂದು ಕನ್ನಡ ಚಿತ್ರರಂಗದ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳಲಿವೆ.[ಮಹದಾಯಿ ವಿವಾದದಲ್ಲಿ ಹೊಲಸು ರಾಜಕೀಯದ ವಾಸನೆ!]

    ಈ ಬಗ್ಗೆ ಬುಧವಾರ (ಜುಲೈ 27) ದಂದು ಕೆ.ಎಫ್.ಸಿ.ಸಿ ಕಛೇರಿಯಲ್ಲಿ ಸಭೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ತೀರ್ಪಿಗೆ ಭಾರಿ ವಿರೋದ ವ್ಯಕ್ತಪಡಿಸಿದರು. ಮುಂದೆ ಓದಿ....

    ಸಾರಾ ಗೋವಿಂದು ಏನಂತಾರೆ.?

    ಸಾರಾ ಗೋವಿಂದು ಏನಂತಾರೆ.?

    ಇದೇ ಸಂದರ್ಭದಲ್ಲಿ ಮಾತನಾಡಿದ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, 'ಈ ಮಹದಾಯಿ ತೀರ್ಪು ಕರ್ನಾಟಕದ ಜನರಿಗೆ ಮರಣ ಶಾಸನ ಬರೆದಂತೆ ಆಗಿದೆ. ಈ ತೀರ್ಪಿನಿಂದಾಗಿ ಯಾವುದೇ ಕಾರಣಕ್ಕೂ ರೈತರು ಹೆದರಬಾರದು. ರೈತರ ಹೋರಾಟಕ್ಕೆ ನಾವು ಜೊತೆಯಾಗುತ್ತೇವೆ. ಇಡೀ ಚಿತ್ರರಂಗವೇ ರೈತರ ಜೊತೆಗಿದೆ' ಎಂದರು.[ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]

    ರಸ್ತೆಗಿಳಿಯಲಿರುವ ಸ್ಯಾಂಡಲ್ ವುಡ್ ಸ್ಟಾರ್ಸ್

    ರಸ್ತೆಗಿಳಿಯಲಿರುವ ಸ್ಯಾಂಡಲ್ ವುಡ್ ಸ್ಟಾರ್ಸ್

    ಇನ್ನು ಈ ಹೋರಾಟಕ್ಕೆ ಇಡೀ ಚಿತ್ರರಂಗವೇ ಬೆಂಬಲ ಸೂಚಿಸಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ದರ್ಶನ್, ದುನಿಯಾ ವಿಜಯ್, ರಾಗಿಣಿ ದ್ವಿವೇದಿ, ರಿಯಲ್ ಸ್ಟಾರ್ ಉಪೇಂದ್ರ, ಶರಣ್ ಸೇರಿದಂತೆ ಹಲವರು ಈ ಹೋರಾಟದಲ್ಲಿ ಭಾಗವಹಿಸುವ ಸಂಭವವಿದ್ದು, ರಸ್ತೆಗಿಳಿದು ಹೋರಾಟ ಮಾಡಲಿದ್ದಾರೆ.[ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

    ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್ ಮಾಡಿದ ದರ್ಶನ್

    ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್ ಮಾಡಿದ ದರ್ಶನ್

    ಕಳಸಾ-ಬಂಡೂರಿ ಯೋಜನೆಗೆ ಬೆಂಬಲ ಸೂಚಿಸುತ್ತಿರುವ ಹಿನ್ನಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಸನ ಜಿಲ್ಲೆಗೆ 'ಜಗ್ಗುದಾದಾ' 50ನೇ ದಿನದ ಸಂಭ್ರಮಾಚರಣೆಗೆ ನೀಡಬೇಕಿದ್ದ ಭೇಟಿಯನ್ನು ರದ್ದು ಮಾಡಿದ್ದಾರೆ. ದರ್ಶನ್ ಅವರು ಕೂಡ ಬಂದ್ ಗೆ ಕೈ ಜೋಡಿಸಿದ್ದಾರೆ.[ನೀರು ಹಂಚಿಕೆ ವಿವಾದಕ್ಕೆ ರಿಯಲ್ ಸ್ಟಾರ್ ಉಪ್ಪಿಯಿಂದ ಪರಿಹಾರ]

    ಟ್ವಿಟ್ಟರ್ ನಲ್ಲಿ ವಿಷ್ಣು ಅಭಿಮಾನಿಗಳ ಕರೆ

    ಟ್ವಿಟ್ಟರ್ ನಲ್ಲಿ ವಿಷ್ಣು ಅಭಿಮಾನಿಗಳ ಕರೆ

    ಅಭಿನಯ ಭಾರ್ಗವ ವಿಷ್ಣುದಾದಾ ಅವರ ಅಭಿಮಾನಿಗಳು ಈ ಹೋರಾಟದಲ್ಲಿ ಕೈ ಜೋಡಿಸಲು ಟ್ವಿಟ್ಟರ್ ನಲ್ಲಿ ಕರೆ ನೀಡಿದ್ದಾರೆ.

    ಟ್ರೋಲ್ ನಲ್ಲಿ ರಾಜಕಾರಣಿಗಳ 'ತಿಥಿ'

    ಟ್ರೋಲ್ ನಲ್ಲಿ ರಾಜಕಾರಣಿಗಳ 'ತಿಥಿ'

    ಬಾರಿ ಸುದ್ದಿ ಮಾಡಿದ್ದ 'ತಿಥಿ' ಸಿನಿಮಾವನ್ನು ಇಟ್ಟಕೊಂಡು ಟ್ರೋಲ್ ಹೈಕಳು ಟ್ರೋಲ್ ಮಾಡಿ, ಟ್ವೀಟ್ ಮಾಡಿದ್ದು, ಟ್ವಿಟ್ಟರ್ ನಲ್ಲಿ ರಾಜಕಾರಣಿಗಳ ಭರ್ಜರಿ ತಿಥಿ ಮಾಡಿದ್ದಾರೆ.

    ತೂಗುದೀಪ ತಂಡದಿಂದ ಕರೆ

    ತೂಗುದೀಪ ತಂಡದಿಂದ ಕರೆ

    ಕಳಸಾ-ಬಂಡೂರಿ ಹೋರಾಟಕ್ಕೆ ದರ್ಶನ್ ಅಭಿಮಾನಿಗಳು ಕರೆ ನೀಡಿದ್ದಾರೆ.

    English summary
    Karnataka Chalanachitra Academy and Kannada film stars protest over Kalasa-Banduri Nala project (Mahadayi Verdict) on July 30th.
    Thursday, July 28, 2016, 16:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X