For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್‌ಗೆ ಅನುಮತಿ?

  |

  ಕೊರೊನಾ ಲಾಕ್‌ಡೌನ್ ಕಾರಣದಿಂದ ಸಿನಿಮಾ ಚಿತ್ರೀಕರಣ ಹಾಗೂ ಧಾರಾವಾಹಿ ಚಿತ್ರೀಕರಣ ಸ್ಥಗಿತಗೊಂಡಿತ್ತು. ಮುಂಬೈನಲ್ಲಿ ಸಂಪೂರ್ಣವಾಗಿ ಶೂಟಿಂಗ್ ನಿಲ್ಲಿಸಲಾಗಿತ್ತು. ಇದೀಗ, ಚಿತ್ರರಂಗ ಹಾಗೂ ಟಿವಿ ಇಂಡಸ್ಟ್ರಿಗೆ ಮಹಾರಾಷ್ಟ್ರ ಸರ್ಕಾರ ರಿಲೀಫ್ ನೀಡಲು ಮುಂದಾಗಿದೆ.

  ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡುವ ಸಲುವಾಗಿ ಭಾನುವಾರ (ಜೂನ್ 6) ನಡೆದ ವಿಶೇಷ ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಶೂಟಿಂಗ್ ಆರಂಭಿಸಲು ಅನುವು ಮಾಡಿಕೊಡಲು ಸಮ್ಮತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

  ಸಿನಿಮಾ ಕಾರ್ಮಿಕರ ನೆರವಿಗೆ 10 ಲಕ್ಷ ನೀಡಿದ ಪುನೀತ್ ರಾಜ್‌ಕುಮಾರ್ಸಿನಿಮಾ ಕಾರ್ಮಿಕರ ನೆರವಿಗೆ 10 ಲಕ್ಷ ನೀಡಿದ ಪುನೀತ್ ರಾಜ್‌ಕುಮಾರ್

  ಮುಂಬೈನಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಆದರೆ ಮೊದಲಿನಂತೆ ಚಿತ್ರೀಕರಣ ಮಾಡಲು ಈ ಸಮಯದಲ್ಲಿ ಸಾಧ್ಯವಿಲ್ಲ. ಕೆಲವು ನಿರ್ಬಂಧನೆಗಳ ಅಡಿಯಲ್ಲಿ ಶೂಟಿಂಗ್ ಮಾಡಬಹುದು ಎಂದು ತಿಳಿಸಲಾಗಿದೆ. ಕಡಿಮೆ ಸಿಬ್ಬಂದಿಯೊಂದಿಗೆ, ನಿಗದಿತ ಸಮಯದಲ್ಲಿ ಮಾತ್ರ ಚಿತ್ರೀಕರಣ ಮಾಡಲು ಹೊಸ ಮಾರ್ಗಸೂಚಿಯಲ್ಲಿ ರೂಪಿಸಲಾಗಿವುದು ಎಂದು ತಿಳಿದು ಬಂದಿದೆ.

  ಸೀಮಿತ ಸಮಯದಲ್ಲಿ ಚಿತ್ರೀಕರಣ ಮಾಡಬೇಕು ಅಂದ್ರೆ ಟಿವಿ ಶೋಗಳಿಗೆ ಸವಾಲು ಆಗುತ್ತದೆ. ಒಂದು ವೇಳೆ ನಿಗದಿತ ಸಮಯಕ್ಕೆ ಅವಕಾಶ ನೀಡುವುದಾದರೆ ಬೆಳಗ್ಗೆ 7 ರಿಂದ ರಾತ್ರಿ 7 ಗಂಟೆಯವರೆಗೂ ಕಾರ್ಯನಿರ್ವಹಿಸಲು ಅವಕಾಶ ಕೊಡಿ ಎಂದು ಮನವಿ ಮಾಡಲಾಗಿದೆ.

  ಇನ್ನು ವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ''ಮುಂದಿನ ಎರಡು ತಿಂಗಳೊಳಗೆ ಮಾಧ್ಯಮ ಮತ್ತು ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದ ಎಲ್ಲರಿಗೂ ವ್ಯಾಕ್ಸಿನೇಷನ್ ಆಗಬೇಕು'' ಎಂದಿದ್ದಾರೆ.

  ಎಲ್ಲಾ ಮುಗಿದು ಹೋದ ಕಥೆ, ಇದನ್ನೆಲ್ಲಾ ನೋಡಿದ್ರೆ ನೋವಾಗುತ್ತೆ | Filmibeat Kannada

  ಹೊಸ ಮಾರ್ಗಸೂಚಿಯಂತೆ ಮುಂಬೈ ಹೊರಗೆ ಚಿತ್ರೀಕರಣಗೊಳ್ಳುತ್ತಿರುವ ಟಿವಿ ಕಾರ್ಯಕ್ರಮಗಳು ಮುಂದಿನ ವಾರದಿಂದ ಮುಂಬೈನಲ್ಲಿ ಪುನರಾರಂಭಗೊಳ್ಳುವ ಸಾಧ್ಯತೆಯಿದೆ. ಈ ಕುರಿತು ಅಧಿಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗುವುದು ಎಂದು ಇಂಡಿಯಾ ಟುಡೇ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  English summary
  maharashtra government allows film and Tv shootings resume with lockdown restrictions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X