twitter
    For Quick Alerts
    ALLOW NOTIFICATIONS  
    For Daily Alerts

    ಒಂದ್ವೇಳೆ ಮಲ್ಟಿಪ್ಲೆಕ್ಸ್ ಒಳಗೆ ಹೊರಗಿನ ತಿಂಡಿ ಬಿಟ್ಟರೆ ಏನೇನೆಲ್ಲಾ ಆಗ್ಬಹುದು.?

    By Harshitha
    |

    ಮೊನ್ನೆಮೊನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ದೊಡ್ಡ ಶಾಕ್ ನೀಡಿತ್ತು. ಮಲ್ಟಿಪ್ಲೆಕ್ಸ್ ಒಳಗೆ ಹೊರಗಿನ ಆಹಾರ ಪ್ರವೇಶಕ್ಕೆ ನಿರ್ಬಂಧ ಹೇರುವಂತಿಲ್ಲ ಎಂಬ ನಿಯಮ ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ಮುಂದಾಗಿತ್ತು.

    ಮಹಾರಾಷ್ಟ್ರ ಸರ್ಕಾರದ ಈ ನಡೆಗೆ ಜನಸಾಮಾನ್ಯರು ಫುಲ್ ಖುಷಿಯಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬದವರಿಗೆ ನೂರು ರೂಪಾಯಿ ಉಳಿದರೂ ದೊಡ್ಡದೇ ಅಲ್ಲವೇ.? ಹೀಗಾಗಿ, ಸರ್ಕಾರಕ್ಕೆ ಜನ ಜೈಹೋ ಎನ್ನುತ್ತಿದ್ದಾರೆ.

    ಆದ್ರೆ, ಟ್ರೋಲಿಗರಿಗೆ ಇದೇ ಹಾಸ್ಯಾಸ್ಪದ ವಿಷಯವಾಗಿದೆ.! ಮಲ್ಟಿಪ್ಲೆಕ್ಸ್ ಗಳಲ್ಲಿ ಹೊರಗಿನ ತಿಂಡಿಗಳಿಗೆ ಅವಕಾಶ ನೀಡಿದರೆ ಏನೇನೆಲ್ಲಾ ಆಗಬಹುದು ಅಂತ ಟ್ರೋಲಿಗರು ಊಹಿಸಿ 'ಮೀಮ್ಸ್' ಸೃಷ್ಟಿಸಿದ್ದಾರೆ. ಅಂತಹ ಕೆಲ ಮೀಮ್ ಗಳ ಕಲೆಕ್ಷನ್ ಇಲ್ಲಿದೆ, ನೋಡಿರಿ...

    ಇಷ್ಟೊಂದು ವೆರೈಟಿ ತೆಗೆದುಕೊಂಡು ಹೋಗಬಹುದಾ.?

    ಮಲ್ಟಿಪ್ಲೆಕ್ಸ್ ಒಳಗೆ ಮನೆ ತಿಂಡಿಗೆ ಅವಕಾಶ ಕೊಟ್ಟರೆ, ಇಷ್ಟೊಂದು ವೆರೈಟಿ ಐಟಂಗಳನ್ನು ಒಳಗೆ ತೆಗೆದುಕೊಂಡು ಹೋಗಬಹುದಾ.?

    ಕರ್ನಾಟಕ ಮಲ್ಟಿಪ್ಲೆಕ್ಸ್ ಗಳಲ್ಲೂ ಮನೆ ಆಹಾರಕ್ಕೆ ಪ್ರವೇಶ ಕೊಡಲಿ ಕಣ್ರೀ.!ಕರ್ನಾಟಕ ಮಲ್ಟಿಪ್ಲೆಕ್ಸ್ ಗಳಲ್ಲೂ ಮನೆ ಆಹಾರಕ್ಕೆ ಪ್ರವೇಶ ಕೊಡಲಿ ಕಣ್ರೀ.!

    ಊಟದ ಬ್ಯಾಗ್ ಹೇಗಿರುತ್ತೆ ಗೊತ್ತಾ.?

    ಮಲ್ಟಿಪ್ಲೆಕ್ಸ್ ನವರಿಗೆ ಇದು ಲಗೇಜ್ ಬ್ಯಾಗೋ ಅಥವಾ ಊಟದ ಬ್ಯಾಗೋ ಅಂತ ಕನ್ಫ್ಯೂಸ್ ಆಗಬೇಕು.!

    ಮಹಾರಾಷ್ಟ್ರ ಸರ್ಕಾರ ಕೊಟ್ಟ ಹೊಡೆತ: ಮಲ್ಟಿಪ್ಲೆಕ್ಸ್ ಆದಾಯಕ್ಕೆ ಬೀಳಲಿದೆ ಗುನ್ನ.!ಮಹಾರಾಷ್ಟ್ರ ಸರ್ಕಾರ ಕೊಟ್ಟ ಹೊಡೆತ: ಮಲ್ಟಿಪ್ಲೆಕ್ಸ್ ಆದಾಯಕ್ಕೆ ಬೀಳಲಿದೆ ಗುನ್ನ.!

    ಪಿಕ್ನಿಕ್ ಆಗುತ್ತೆ ಮಾರ್ರೆ.!

    ಮಲ್ಟಿಪ್ಲೆಕ್ಸ್ ಒಳಗೆ ಮನೆ ತಿಂಡಿ ಬಿಟ್ಟರೆ, ಇಡೀ ಫ್ಯಾಮಿಲಿ ಅಲ್ಲೇ ಚಾಪೆ ಹಾಸಿಕೊಂಡು ಊಟ ಮಾಡಿ ಹೋಗುವುದು ಗ್ಯಾರೆಂಟಿ.!

    ಮಹಾರಾಷ್ಟ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಹೊಸ ಕಾನೂನು: ಅದು ಕರ್ನಾಟಕಕ್ಕೂ ಬರಬಾರದೇ.?ಮಹಾರಾಷ್ಟ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಹೊಸ ಕಾನೂನು: ಅದು ಕರ್ನಾಟಕಕ್ಕೂ ಬರಬಾರದೇ.?

    ಇಷ್ಟೊಂದು ದೊಡ್ಡ ಬ್ಯಾಗಾ.?

    ಸಿನಿಮಾ ನೋಡ್ತಾ ಊಟ ಮಾಡೋಕೆ ಎಷ್ಟೇ ದೊಡ್ಡ ಬ್ಯಾಗ್ ತಂದರೂ ಕೆಲವರಿಗೆ ಸಾಲಲ್ಲವೇನೋ.?

    ಇನ್ಮೇಲೆ ಬಾಕ್ಸ್ ಪಕ್ಕಾ.!

    ''ಸಿನಿಮಾಗೆ ಹೋಗ್ತಿದ್ದೀನಿ'' ಅಂತ ಹೇಳಿದ್ರೆ, ಅಮ್ಮ ಮಾಡುವ ಮೊದಲ ಕೆಲಸ ಲಂಚ್ ಬಾಕ್ಸ್ ಪ್ಯಾಕ್ ಮಾಡುವುದು.!

    ಮನೆ ಊಟದ ಪವರ್.!

    'ಬಾಹುಬಲಿ' ಹೇಗೆ ಶಿವಲಿಂಗವನ್ನ ಹೊತ್ತು ತಂದ್ನೋ, ಹಾಗೇ ಜನ ಮಲ್ಟಿಪ್ಲೆಕ್ಸ್ ಒಳಗೆ ಲಂಚ್ ಬಾಕ್ಸ್ ಹೊತ್ತು ತರ್ತಾರಂತೆ.!

    ಮನೆ ಊಟ ಆರೋಗ್ಯಕ್ಕೆ ಉತ್ತಮ

    ಇಡೀ ಫ್ಯಾಮಿಲಿ ಮಲ್ಟಿಪ್ಲೆಕ್ಸ್ ಗೆ ಹೊರಟರೆ ಟಿಫಿನ್ ಬಾಕ್ಸ್ ಪ್ಯಾಕಿಂಗ್ ಈ ತರಹ ಇರುತ್ತೆ. ಎಷ್ಟೇ ಆಗಲಿ ಮನೆ ಊಟ ಆರೋಗ್ಯಕ್ಕೆ ಒಳ್ಳೆಯದ್ದು ತಾನೇ.!

    English summary
    Maharashtra Govt allows outside food in Multiplexes: Have a look at Memes and Trolls based on the same issue.
    Tuesday, July 17, 2018, 13:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X