98ನೇ ಆಸ್ಕರ್ ಅರ್ಹತಾ ಪಟ್ಟಿ ಪ್ರವೇಶಿಸಿದ ಹೊಂಬಾಳೆ ಫಿಲ್ಮ್ಸ್ 'ಮಹಾವತಾರ್ ನರಸಿಂಹ'

ಬ್ಲಾಕ್‌ಬಸ್ಟರ್ ಅನಿಮೇಟೆಡ್ ಚಿತ್ರ 'ಮಹಾವತಾರ್ ನರಸಿಂಹ', 98ನೇ ಅಕಾಡೆಮಿ ಪ್ರಶಸ್ತಿಗಳ ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ಪರ್ಧೆಗೆ ಪ್ರವೇಶಿಸಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬೆಂಬಲವಾಗಿ ನಿಂತಿತ್ತು. ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ವಿಷ್ಣುವಿನ ನರಸಿಂಹ ಅವತಾರದ ಕಥೆಯನ್ನು 3D ಅನಿಮೇಷನ್‌ ರೂಪದಲ್ಲಿ ತೆರೆಗೆ ತರಲಾಗಿತ್ತು. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ದಾಖಲ ಬರೆದಿತ್ತು. ಭಾರತದಲ್ಲಿ ಆನಿಮೇಷನ್ ಸಿನಿಮಾ ಅಂದ್ರೆ ಕಾರ್ಟೂನ್ ಸಿನಿಮಾ ಎನ್ನುವ ಅಭಿಪ್ರಾಯ ಇದೆ. ಅದನ್ನೆಲ್ಲಾ ಮೀರಿ ನೋಡುಗರಿಗೆ ಅದ್ಭುತ ಅನುಭವ ಕೊಟ್ಟ 'ಮಹಾವತಾರ್ ನರಸಿಂಹ' ಸಿನಿಮಾ ಗೆದ್ದಿತ್ತು.

Mahavatar Narasimha Enters Oscar Race in Best Animated Feature Category

ಆಸ್ಕರ್ ಸ್ಪರ್ಧೆಗೆ ಭಾರತದ ಸಿನಿಮಾಗಳು ಆಯ್ಕೆ ಆಗುವುದೇ ವಿರಳ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತದೆ. ಈ ಹಿಂದೆ 'RRR' ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಗೌರವ ಲಭಿಸಿತ್ತು. ಅದಕ್ಕೂ ಮುನ್ನ ಎ. ಆರ್ ರೆಹಮಾನ್ ಸೇರಿ ಕೆಲವರು ಆಸ್ಕರ್ ಎತ್ತಿ ಹಿಡಿದಿದ್ದರು. 'ಮಹಾವತಾರ್ ನರಸಿಂಹ' ಈ ಬಾರಿ ದಾಖಲೆ ಬರೆಯುವ ಸಾಧ್ಯತೆ ದಟ್ಟವಾಗಿದೆ.

ಆನಿಮೇಟೆಡ್ ಫೀಚರ್ ಫಿಲ್ಮ್ ವಿಭಾಗದಲ್ಲಿ 'ಮಹಾವತಾರ್ ನರಸಿಂಹ' ಸ್ಪರ್ಧೆ ಹೋಗುತ್ತಿದೆ. ನಾಮಿನೇಟ್ ಆಗುತ್ತಾ? ಪ್ರಶಸ್ತಿಯನ್ನೇ ಗೆಲ್ಲುತ್ತಾ ಕಾದು ನೋಡಬೇಕಿದೆ. ಒಟ್ಟಾರೆ ಪ್ರೇಕ್ಷಕರ ಮೆಚ್ಚುಗೆ ಪಡೆದ ಸಿನಿಮಾ ಇದೀಗ ಆಸ್ಕರ್ ರೇಸ್‌ನಲ್ಲಿರುವುದು ವಿಶೇಷ.

Mahavatar Narasimha Enters Oscar Race in Best Animated Feature Category

'ಆರ್ಕೊ', 'ದಿ ಬ್ಯಾಡ್ ಗೈಸ್ -2', 'ಬ್ಲ್ಯಾಕ್ ಬಟರ್‌ಫ್ಲೈಸ್', 'ಚೈನ್ಸಾ ಮ್ಯಾನ್', 'ಡಾಗ್ ಮ್ಯಾನ್', 'ಡಾಗ್ ಆಫ್ ಗಾಡ್', 'ಎಂಡ್ಲೆಸ್ ಕುಕೀ' ಹೀಗೆ ಸಾಕಷ್ಟು ಸಿನಿಮಾಗಳು ಈ ವಿಭಾಗದಲ್ಲಿ ಆಸ್ಕರ್ ಮೇಲೆ ಕಣ್ಣಿಟ್ಟಿವೆ. 5 ಭಾಷೆಗಳಲ್ಲಿ ಜುಲೈ 25ರಂದು 'ಮಹಾವತಾರ್ ನರಸಿಂಹ' ಸಿನಿಮಾ ಬಿಡುಗಡೆ ಆಗಿತ್ತು. ಫಸ್ಟ್ ವೀಕೆಂಡ್‌ನಲ್ಲೇ 15 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ಬಳಿಕ ದಾಖಲೆ ಬರೆದಿತ್ತು.

ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿ ಎಲ್ಲೆಲ್ಲೂ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಉತ್ತರ ಭಾರತದಲ್ಲಿ ಚಿತ್ರದಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಪ್ರೇಕ್ಷಕರು ಚಿತ್ರಮಂದಿರಗಳ ಬಾಗಿಲಲ್ಲೇ ಚಪ್ಪಲಿ ಬಿಟ್ಟು ಹೋಗಿ ಸಿನಿಮಾ ನೋಡಿ ಭಕ್ತಿಪರವಶರಾಗಿದ್ದರು. ಆನಿಮೇಟೆಡ್ ಸಿನಿಮಾಗಳ ವಿಭಾಗದಲ್ಲಿ 'ಮಹಾವತಾರ್ ನರಸಿಂಹ' ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಆನಿಮೇಟೆಡ್ ಸಿನಿಮಾ ಎನ್ನುವ ದಾಖಲೆ 'ಮಹಾವತಾರ್ ನರಸಿಂಹ' ಪಾಲಾಗಿದೆ. ಮಹಾವತಾರ್ ಸರಣಿಯಲ್ಲಿ ಇನ್ನು 7 ಸಿನಿಮಾಗಳನ್ನು ಕ್ಲೀಮ್ ಪ್ರೊಡಕ್ಷನ್ಸ್ ಸಂಸ್ಥೆ ಘೋಷಿಸಿದೆ. ಹೊಂಬಾಳೆ ಫಿಲ್ಮ್ಸ್ ಕೂಡ ಕೈ ಜೋಡಿಸಿದೆ. ಮುಂದೆ ಹಲವು ಆನಿಮೇಟೆಡ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಕೆಲವರು ಇಂತಹ ಸಿನಿಮಾ ನಿರ್ಮಾಣ ಆರಂಭಿಸಿದ್ದಾರೆ.

'ಕಾಂತಾರ- 1' ಚಿತ್ರವನ್ನು ಕೂಡ ಆಸ್ಕರ್ ರೇಸ್‌ಗೆ ತೆಗೆದುಕೊಂಡು ಹೋಗಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಈ ಸಿನಿಮಾ 800 ಕೋಟಿ ರೂ, ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

More from Filmibeat

Read more about: oscar sandalwood hombale films
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X