ಮಹೇಶ್ ಬಾಬು ಲಿಪ್ ಲಾಕ್ ಫೋಟೋ ಸಂಚಲನ: ಯಾರು ಆ ನಟಿ.?
Recommended Video

ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಇಂಡಸ್ಟ್ರಿಯಲ್ಲಿ ತುಂಬಾ ಖಾಸಗಿ ವ್ಯಕ್ತಿ. ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಮಾತನಾಡಲ್ಲ. ಮತ್ತು ಯಾವುದೇ ಖಾಸಗಿ ವಿವಾದಗಳಲ್ಲಿಯೂ ಸಿಲುಕದ ಸೂಪರ್ ಸ್ಟಾರ್ ನಟ.
ಆದ್ರೀಗ, ಮಹೇಶ್ ಬಾಬು, ಹುಡುಗಿಯೊಬ್ಬಳ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ಈ ಫೋಟೋ ನೋಡಿದ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದು, ತಲೆಯಲ್ಲಿ ಹುಳ ಬಿಟ್ಕೊಂಡು ಯೋಚನೆ ಮಾಡುವಂತಾಗಿದೆ. ಈ ಫೋಟೋ 'ಭರತ್ ಅನೆ ನೇನು' ಚಿತ್ರದ್ದು ಇರಬೇಕು ಎಂದುಕೊಂಡಿದ್ದರೇ ಅದು ನಿಜವಲ್ಲ. ಯಾಕಂದ್ರೆ, ಈ ಸಿನಿಮಾದಲ್ಲಿ ಈ ರೀತಿ ಯಾವುದೇ ದೃಶ್ಯವಿಲ್ಲ. ಹಾಗಿದ್ರೆ, ಈ ಫೋಟೋ ಯಾವುದು.? ಮಹೇಶ್ ಬಾಬು ಕಿಸ್ ಮಾಡಿರುವ ಆ ಹುಡುಗಿ ಯಾರು.? ಎಂಬುದು ಟಾಲಿವುಡ್ ಸೆನ್ಸೆಷ್ನಲ್....ಮುಂದೆ ಓದಿ.....

'ಥ್ಯಾಂಕ್ ಯೂ ಮೈ ಲವ್' ಎಂದಿದ್ದು ಯಾರಿಗೆ.?
ಹುಡುಗಿಯೊಬ್ಬಳಿಗೆ ಲಿಪ್ ಲಾಕ್ ಮಾಡಿರುವ ಮಹೇಶ್ ಬಾಬು ಈ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ''ಥ್ಯಾಂಕ್ ಯೂ ಮೈ ಲವ್'' ಎಂದು ಅಡಿ ಬರಹ ನೀಡಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳಿಗೆ ಇದು ಯಾರು ಎಂಬುದು ಗೊತ್ತೇ ಆಗಿಲ್ಲ. ಇದರಿಂದ ಆಶ್ಚರ್ಯಕ್ಕೆ ಒಳಗಾಗಿದ್ದರು.

ಮಹೇಶ್ ಚುಂಬಿಸಿದ್ದು ಪತ್ನಿಗೆ
ನಂತರ ಇದೇ ಫೋಟೋಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಬಾಬು ಅವರ ಪತ್ನಿ ನಮ್ರತಾ ''ಥ್ಯಾಂಕ್ ಯೂ ಮೈ ಲವ್'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಆ ಫೋಟೋದಲ್ಲಿರುವುದು ಪ್ರಿನ್ಸ್ ಮಹೇಶ್ ಬಾಬು ಅವರ ಮಡದಿ ನಮ್ರತಾ ಎಂಬುದು ಖಾತ್ರಿಯಾಯಿತು.

'ಭರತ್' ಸಿನಿಮಾ ಗೆದ್ದ ಸಂಭ್ರಮ
ಮಹೇಶ್ ಬಾಬು ಅಭಿನಯದ 'ಭರತ್ ಅನೆ ನೇನು' ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಸ್ವತಃ ಮಹೇಶ್ ಬಾಬು ಕೂಡ ರೆಸ್ಪಾನ್ಸ್ ನೋಡಿ ಖುಷಿಯಾಗಿದ್ದಾರೆ. ಹೀಗಾಗಿ, ತಮ್ಮ ಪತ್ನಿ ಜೊತೆಗಿನ ಫೋಟೋ ಪೋಸ್ಟ್ ಮಾಡಿ ತಮ್ಮ ಖುಷಿಯನ್ನ ಸಂಭ್ರಮಿಸಿದ್ದಾರೆ.

ಕನ್ನಡಿಗರಿಗೆ ಕೃತಜ್ಞತೆ ಹೇಳಿದ್ದ ಪ್ರಿನ್ಸ್
ಇನ್ನು 'ಭರತ್ ಅನೆ ನೇನು' ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಎಲ್ಲ ಅಭಿಮಾನಿಗಳಿಗೂ ಪ್ರಾದೇಶಿಕ ಭಾಷೆಗಳಲ್ಲಿ ಧನ್ಯವಾದಗಳನ್ನ ತಿಳಿಸಿದ್ದಾರೆ. ತಮಿಳು, ಮಲಯಾಳಂ, ಹಿಂದಿಯಲ್ಲಿ ಥ್ಯಾಂಕ್ಸ್ ಹೇಳಿದ್ದ ಪ್ರಿನ್ಸ್ ಕನ್ನಡ ಭಾಷೆಯಲ್ಲಿ 'ಕೃತಜ್ಞತೆ'ಗಳನ್ನ ಅರ್ಪಿಸಿದ್ದರು.


Click it and Unblock the Notifications











