ಸ್ಟಾರ್ ನಟನ ಜೊತೆ ಸಂಕ್ರಾಂತಿಗೆ ಬರ್ತಿದ್ದಾರೆ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಸದ್ಯ 'ಡಿಯರ್ ಕಾಮ್ರೇಡ್' ಸಿನಿಮಾದ ಖುಷಿಯಲ್ಲಿ ತೇಲುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಶ್ಮಿಕಾ ಟಾಲಿವುಡ್ ಚಿತ್ರರಂಗದ ಟಾಪ್ ನಟಿಯರ ಸ್ಥಾನದಲ್ಲಿ ಮೆರೆಯುತಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಟಾಲಿವುಡ್ ಸ್ಟಾರ್ ನಟರ ಜೊತೆಯು ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು, ತಮಿಳಿನಲ್ಲಿ ನಟ ಕಾರ್ತಿಕ್ ಸೇರಿದಂತೆ ದೊಡ್ಡ ದೊಡ್ಡ ನಟರಿಗೆ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.

ಸಂಕ್ರಾಂತಿ ಬರ್ತಾರೆ ರಶ್ಮಿಕಾ

ಸಂಕ್ರಾಂತಿ ಬರ್ತಾರೆ ರಶ್ಮಿಕಾ

ಎಷ್ಟೇ ವಿವಾದಗಳ ಮೂಲಕ ಸದ್ದು ಸುದ್ದಿ ಮಾಡುತ್ತಿದ್ದರು ರಶ್ಮಿಕಾ ಖ್ಯಾತಿ ಮಾತ್ರ ಕಿಂಚಿತ್ತು ಕಮ್ಮಿ ಆಗಿಲ್ಲ. ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಸಂಕ್ರಾತಿಗೆ ಸ್ಟಾರ್ ನಟನ ಜೊತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಆ ಸ್ಟಾರ್ ಮತ್ಯಾರು ಅಲ್ಲ ಪ್ರಿನ್ಸ್ ಮಹೇಶ್ ಬಾಬು. ಈ ಜೋಡಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಸರಿಲೇರು ನೀಕೆವ್ವರು ಸಂಕ್ರಾಂತಿಗೆ ರಿಲೀಸ್

ಸರಿಲೇರು ನೀಕೆವ್ವರು ಸಂಕ್ರಾಂತಿಗೆ ರಿಲೀಸ್

ರಶ್ಮಿಕಾ ಮತ್ತು ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾ ಸಂಕ್ರಾಂತಿಗೆ ತೆರೆಗೆ ಬರಲಿದೆ. ಈ ಬಗ್ಗೆ ಚಿತ್ರತಂಡವೆ ಹೇಳಿಕೊಂಡಿದೆ. ಮಹೇಶ್ ಬಾಬು ಜೊತೆ ನಟಿಸುವುದು ರಶ್ಮಿಕಾ ಅವರ ಕನಸಾಗಿತ್ತು. ಈ ಸಿನಿಮಾ ಮೂಲಕ ಕನಸು ನನಸು ಮಾಡಿಕೊಂಡಿರುವ ರಶ್ಮಿಕಾ ಮುಂದಿನ ವರ್ಷ ಸಂಕ್ರಾಂತಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಮೊದಲ ಭಾಗದ ಚಿತ್ರೀಕರಣ ಮುಕ್ತಾಯ

ಮೊದಲ ಭಾಗದ ಚಿತ್ರೀಕರಣ ಮುಕ್ತಾಯ

ಅಂದ್ಹಾಗೆ 'ಸರಿಲೇರು ನೀಕೆವ್ವರು' ಸಿನಿಮಾ ಈಗಾಗಲೆ ಮೊದಲ ಭಾಗದ ಚಿತ್ರೀಕಮ ಮುಗಿಸಿ ಎರಡನೆ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಶೇಡ್ ನಲ್ಲಿ ಸೈನಿಕನಾಗಿ ಮಿಂಚಿದ್ರೆ ಮತ್ತೊಂದು ಶೇಡ್ ನಲ್ಲಿ ರಶ್ಮಿಕಾ ಕುಂಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್

ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್

ಅಂದ್ಹಾಗೆ ಚಿತ್ರದ ಫಸ್ಟ್ ಲುಕ್ ಅನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಅಂದ್ರೆ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದೆಯಂತೆ ಚಿತ್ರತಂಡ. ಚಿತ್ರಕ್ಕೆ ಅನೀಲ್ ರವಿ ಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಭರತ್ ಅನೆ ನೇನು' ಮತ್ತು 'ಮಹರ್ಷಿ' ಚಿತ್ರದ ಸಕ್ಸಸ್ ನಲ್ಲಿರುವ ಮಹೇಶ್ ಬಾಬು ಈಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

More from Filmibeat

English summary
Telugu star actor Mahesh Babu and Actress Rashmika Mandanna starrer Sarileru Neekevvaru film release in Sankranthi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X