For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ಕ್ರೇಜಿ ಬಾಯ್' ತೆರೆಮೇಲೆ ಬರೋದು ಯಾವಾಗ.?

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಕ್ರೇಝಿ ಕ್ವೀನ್ ರಕ್ಷಿತಾ ರಂತಹ ಸ್ಯಾಂಡಲ್ ವುಡ್ ಸ್ಟಾರ್ ಕಲಾವಿದರಿಗೆ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದ ನಿರ್ದೇಶಕ ಮಹೇಶ್ ಬಾಬು ಈಗ ಹೊಸ ಪ್ರತಿಭೆಗಳಿಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ.

  ದಿಲೀಪ್ ಪ್ರಕಾಶ್ ಮತ್ತು ಆಶಿಕಾ ರಂಗನಾಥ್ ಎಂಬ ನವ ಪ್ರತಿಭೆಗಳನ್ನ 'ಕ್ರೇಜಿ ಬಾಯ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಹೇಶ್ ಬಾಬು ಪರಿಚಯ ಮಾಡಿಕೊಡುತ್ತಿದ್ದಾರೆ.

  ಔಟ್ ಅಂಡ್ ಔಟ್ ಕಮರ್ಶಿಯಲ್ ಎಂಟರ್ ಟೇನರ್ ಸಿನಿಮಾ ಆಗಿರುವ 'ಕ್ರೇಜಿ ಬಾಯ್' ಸಿನಿಮಾ ಇದೇ ವಾರ ಸೆನ್ಸಾರ್ ಅಂಗಳಕ್ಕೆ ಕಾಲಿಡಲಿದೆ. ಸದಭಿರುಚಿಯ ಸಿನಿಮಾ 'ಕ್ರೇಜಿ ಬಾಯ್' ಸೆನ್ಸಾರ್ ಆಫೀಸ್ ನಿಂದ ಕ್ಲೀನ್ ಚಿಟ್ ಪಡೆದರೆ, ಆಗಸ್ಟ್ 19 ರಂದು ತೆರೆ ಕಾಣುವುದು ಪಕ್ಕಾ.[ಚೊಚ್ಚಲ ಪ್ರತಿಭೆಗಳಿಗೆ ಬೆನ್ನುಲುಬಾದ ಮಹೇಶ್ ಬಾಬು]

  Mahesh Babu directorial 'Crazy Boy' to release on Aug 19th

  ''ಕ್ರೇಜಿ ಬಾಯ್' ಹೊಸಬರ ಸಿನಿಮಾ. ದಿಲೀಪ್ ಮತ್ತು ಆಶಿಕಾ ತುಂಬಾ ಹಾರ್ಡ್ ವರ್ಕ್ ಮಾಡಿದ್ದಾರೆ. ಜನ ಇಷ್ಟ ಪಡುವ ಕಮರ್ಶಿಯಲ್ ಅಂಶಗಳು ಸಿನಿಮಾದಲ್ಲಿ ಇದೆ. ಈ ಹಿಂದೆ ನಾನು ಮಾಡಿದ 'ಆಕಾಶ್', 'ಅರಸು' ಸಿನಿಮಾಗಳಂತೆ ಇದು ಅಕ್ಷರಶಃ ಸದಭಿರುಚಿಯ ಸಿನಿಮಾ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ನಿರ್ದೇಶಕ ಮಹೇಶ್ ಬಾಬು ಹೇಳಿದರು.

  ಹೊಸ ಅಲೆ ಏದ್ದಿರುವ ಗಾಂಧಿನಗರದಲ್ಲಿ 'ಕ್ರೇಜಿ ಬಾಯ್' ಯಶಸ್ಸಿನ ದಡ ತಲುಪುತ್ತಾ ಅಂತ ನೋಡೋಣ...

  English summary
  If the censor process is complete by this week, then New comers Dilip Prakash and Ashika Ranganath starrer Mahesh Babu directorial 'Crazy Boy' will release on August 19th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X