ರಶ್ಮಿಕಾ ಅಭಿನಯವನ್ನು ಹಾಡಿ ಹೊಗಳಿದ 'ಪ್ರಿನ್ಸ್' ಮಹೇಶ್ ಬಾಬು
'ಕಿರಿಕ್ ಹುಡುಗಿ' ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅಭಿನಯದ ತೆಲುಗು ಸಿನಿಮಾ 'ಗೀತ ಗೋವಿಂದಂ' ನಿನ್ನೆಯಷ್ಟೇ ವಿಶ್ವದಾದ್ಯಂತ ಬಿಡುಗಡೆ ಆಗಿತ್ತು.
ರೋಮ್ಯಾಂಟಿಕ್ ಹಾಗೂ ಕಾಮಿಡಿ ಲವ್ ಸ್ಟೋರಿ ಆಗಿರುವ 'ಗೀತ ಗೋವಿಂದಂ' ಚಿತ್ರಕ್ಕೆ ಪ್ರೇಕ್ಷಕರ ವಲಯದಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಖುಷಿ ಕೊಟ್ಟಿದ್ದರೆ, ಹಲವರಿಗೆ 'ಬೋರಿಂಗ್' ಆಗಿದೆ.

ಸಿನಿಮಾದಲ್ಲಿ ಪಂಚಿಂಗ್ ಡೈಲಾಗ್ಸ್ ಇಲ್ಲ, ಕಳಪೆ ನಿರ್ದೇಶನ ಅಂತೆಲ್ಲಾ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. ಇವೆಲ್ಲದರ ನಡುವೆ 'ಗೀತ ಗೋವಿಂದಂ' ಚಿತ್ರವನ್ನ ಮಹೇಶ್ ಬಾಬು ಹಾಡಿ ಹೊಗಳಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಟನೆಗೆ 'ಪ್ರಿನ್ಸ್' ಮಹೇಶ್ ಬಾಬು ಭೇಷ್ ಎಂದಿದ್ದಾರೆ.
''ಗೀತ ಗೋವಿಂದಂ' ಜಯಗಳಿಸಿದೆ. ನಾನು ಈ ಚಿತ್ರವನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆ ಅತ್ಯದ್ಭುತವಾಗಿದೆ. ಇನ್ನೂ ನಟ ಸುಬ್ಬರಾಜು ಹಾಗೂ ವೆನ್ನಿಲ್ಲಾ ಕಿಶೋರ್ ವಿಶೇಷ ಮನ್ನಣೆಗೆ ಅರ್ಹರು. ಇಡೀ ತಂಡಕ್ಕೆ ನನ್ನ ಶುಭ ಹಾರೈಕೆಗಳು'' ಎಂದು ನಟ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ''ತುಂಬಾ ಧನ್ಯವಾದಗಳು ಸರ್. ನಿಮ್ಮಿಂದ ಈ ಮಾತುಗಳನ್ನು ಕೇಳಿ ನನಗೆ ಖುಷಿ ಆಗಿದೆ'' ಎಂದು ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮಿಶ್ರ ಪ್ರತಿಕ್ರಿಯೆಗಳ ನಡುವೆ 'ಗೀತ ಗೋವಿಂದಂ' ಸಿನಿಮಾಗೆ ಉತ್ತಮ ಓಪನ್ನಿಂಗ್ ಸಿಕ್ಕಿದೆ. ಬಹುತೇಕ ಕಡೆ 'ಗೀತ ಗೋವಿಂದಂ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











