For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಫ್ಯಾಮಿಲಿಯಿಂದ ಮತ್ತೊಬ್ಬ ನಟ

  By ಅನಂತರಾಮು, ಹೈದರಾಬಾದ್
  |
  ಈಗಾಗಲೆ ಟಾಲಿವುಡ್ ನಲ್ಲಿ ಹಲವಾರು ಯುವ ನಟರು ಮಿಂಚುತ್ತಿದ್ದಾರೆ. ಈ ಸಾಲಿಗೆ ಈಗ ಮತ್ತೊಬ್ಬ ಯಂಗ್ ಸ್ಟಾರ್ ಆಗಮನವಾಗುತ್ತಿದೆ. ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಮಗ ಮಹೇಶ್ ಬಾಬು ಅವರ ಹತ್ತಿರದ ಸಂಬಂಧಿ ಕೃಷ್ಣ ಮಾಧನ್ ತೆಲುಗು ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

  'ಹೃದಯಂ ಎಕ್ಕಡುನ್ನದಿ' ಎಂಬ ಚಿತ್ರದ ಮೂಲಕ ಟಾಲಿವುಡ್ ಗೆ ಅಡಿಯಿಡುತ್ತಿದ್ದಾರೆ. ಆಂಧ್ರದ ಸಚಿವೆ ಅರುಣಾ ಕುಮಾರಿ ಅವರಿಗೂ ಈತ ಹತ್ತಿರದ ಸಂಬಂಧಿಯಂತೆ. ಈ ಹಿಂದೆ ಮಹೇಶ್ ಬಾಬು ಕುಟುಂಬದಿಂದ ಇಬ್ಬರು ಹೀರೋಗಳು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ

  'ಎಸ್ಎಂಎಸ್' ಎಂಬ ಚಿತ್ರದ ಮೂಲಕ ಸುಧೀರ್ ಬಾಬು ಎಂಬ ನಟ ಪರಿಚಯವಾಗಿದ್ದ. ಇನ್ನೊಬ್ಬ ಸಂಬಂಧಿ ಶಿವ ಎಂಬುವವರು 'ಜಗನ್' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಈಗ ಹೃದಯಂ ಎಕ್ಕಡುನ್ನದಿ ಚಿತ್ರದ ಮೂಲಕ ಕೃಷ್ಣ ಮಾಧವ್ ಪರಿಚಯವಾಗುತ್ತಿದ್ದಾರೆ.

  ಈಗಾಗಲೆ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಆನಂದ್ ಎಂಬುವವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ತೆಲುಗು ಚಿತ್ರರಂಗದಲ್ಲಿ ವಾರಸತ್ವ ಒಂದು ಕಡೆಯಾದರೆ ಬಂಧು ಬಳಗದ ಆಗಮನ ಇನ್ನೊಂದು ಕಡೆ ಆಗುತ್ತಿದೆ. ಕುಟುಂಬದ ಹೆಸರು ಹೇಳಿಕೊಂಡು ಹೀರೋ ಆಗಲು ಹೊರಟವರು ಕಡೆಗೆ ಜೀರೋ ಆಗಿದ್ದುಂಟು. ಕಾಳು ಕಾಳೇ ಜೊಳ್ಳು ಜೊಳ್ಳೇ.

  English summary
  Tollywood hero Mahesh babu's relative Krishna Madhav is making his debut as the hero with a film titled 'Hrudhayam Ekkadunnadhi'. He is also the nephew of minister Galla Aruna kumari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X