ಖಾಲಿ ಹೊಡೀತಿದ್ದ AMB ಸಿನಿಮಾಸ್ ಕಪಾಲಿ ಈಗ ಹೌಸ್‌ಫುಲ್; 'ಧುರಂಧರ್'-2 ಕಲೆಕ್ಷನ್ ಲೆಕ್ಕ ಬಹಿರಂಗ

ತೆಲುಗು ನಟ ಮಹೇಶ್ ಬಾಬು ಬೆಂಗಳೂರಿನ ಗಾಂಧಿನಗರದಲ್ಲಿ AMB ಸಿನಿಮಾಸ್ ಕಪಾಲಿ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ನಿರ್ಮಿಸಿದ್ದಾರೆ. ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಚಿತ್ರಮಂದಿರ ಉದ್ಘಾಟನೆ ಆಗಿತ್ತು. ಆದರೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದೊಡ್ಡ ಸಿನಿಮಾಗಳು ಬಿಡುಗಡೆ ಆಗದೇ ಥಿಯೇಟರ್ ಬಿಕೋ ಎನ್ನುತ್ತಿತ್ತು. ಆದರೆ 'ಧುರಂಧರ್'-2 ಸಿನಿಮಾ ಸಂಚಲನ ಸೃಷ್ಟಿಸಿದೆ. ಥಿಯೇಟರ್ ಭರ್ತಿ ಆಗುವಂತೆ ಮಾಡ್ತಿದೆ.

ಕಳೆದೆರಡು ತಿಂಗಳಿಂದ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಜನ ಸ್ಟಾರ್ ನಟರ ದೊಡ್ಡ ಸಿನಿಮಾಗಳನ್ನು ಮಾತ್ರ ಚಿತ್ರಮಂದಿರಗಳಲ್ಲಿ ನೋಡ್ತೀವಿ ಎಂದು ಪಟ್ಟು ಹಿಡಿದಂತೆ ಕಾಣ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡುವುದು ಬಹಳ ದುಬಾರಿಯೇ ಸರಿ. ಇನ್ನು ಎಎಂಬಿ ಸಿನಿಮಾಸ್‌ನಲ್ಲಿ ಕೂಡ ಟಿಕೆಟ್ ದರ ಜಾಸ್ತಿದೆ. ಒಂದು ಡಾಲ್ಬಿ ಸ್ಕ್ರೀನ್ ಸೇರಿ ಒಟ್ಟು 9 ಸ್ಕ್ರೀನ್‌ಗಳು ಈ ಕಾಂಪ್ಲೆಕ್ಸ್‌ನಲ್ಲಿದೆ. ಜೊತೆಗೆ ಒಂದಷ್ಟು ಮಳಿಗೆಗಳು ಈ ಕಟ್ಟಡದಲ್ಲಿದೆ.

Mahesh Babu s AMB Cinemas Kapali Gets Boost as Dhurandhar-2 Draws Crowds After Slow Start

ಥಿಯೇಟರ್ ಉದ್ಘಾಟನೆಯಾಗಿ ತಿಂಗಳು ಕಳೆದರೂ ಒಂದೇ ಒಂದು ಶೋ ಹೌಸ್‌ಫುಲ್ ಆಗಿರಲಿಲ್ಲ. ಇದನ್ನು ನೋಡಿ ಮಹೇಶ್ ಬಾಬು ಲೆಕ್ಕಾಚಾರ ತಪ್ಪಾಯ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಗಾಂಧಿನಗರದಲ್ಲಿ ಇಂತಹ ಮಲ್ಟಿಪ್ಲೆಕ್ಸ್ ಥಿಯೇಟರ್ ನಿರ್ಮಿಸಿದ ಮಹೇಶ್ ಬಾಬು ನಿರ್ಧಾರವೇ ತಪ್ಪಾಗಿದೆ. ಅಲ್ಲಿ ಏರಿಯಾದಲ್ಲಿ ಸಿಂಗಲ್ ಸ್ಕ್ರೀನ್‌ಗಳಿಗೆ ಒಳ್ಳೆ ರೆಸ್ಪಾನ್ಸ್ ಇದೆ. ಮಲ್ಟಿಪ್ಲೆಕ್ಸ್ ಬೇಡವಾಗಿತ್ತು ಎಂದಿದ್ದರು. ಆದರೆ 'ಧುರಂಧರ್' ಸಿನಿಮಾ ಆ ಮಾತನ್ನು ಸುಳ್ಳಾಗಿಸಿದೆ. ಒಳ್ಳೆ ಸಿನಿಮಾ ಬಂದರೆ ಜನ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವ ಮಾತನ್ನು ಸಾಬೀತು ಮಾಡಿದೆ.

5 ದಿನಕ್ಕೆ 'ಧುರಂಧರ್-2' ಸಿನಿಮಾ ಎಎಂಬಿ ಸಿನಿಮಾಸ್ ಕಪಾಲಿ ಚಿತ್ರಮಂದಿರದಲ್ಲಿ 1 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಡಾಲ್ಬಿ ಸೇರಿ ಒಟ್ಟು 4 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗ್ತಿದೆ. ಎರಡು ಸ್ಕ್ರೀನ್‌ಗಳಲ್ಲಿ ಹಿಂದಿ, ಒಂದು ಸ್ಕ್ರೀನ್‌ನಲ್ಲಿ ಕನ್ನಡ ಹಾಗೂ ಮತ್ತೊಂದು ಸ್ಕ್ರೀನ್‌ನಲ್ಲಿ ತೆಲುಗು ವರ್ಷನ್ ಬಿಡುಗಡೆಯಾಗಿದೆ. ಎಎಂಬಿ ಸಿನಿಮಾಸ್ ಕಪಾಲಿ ಮಲ್ಟಿಪ್ಲೆಕ್ಸ್‌ಗೆ ಇಂತಾದೊಂದು ಬೂಸ್ಟ್ ಬೇಕಿತ್ತು.

ಪ್ರೇಕ್ಷಕರನ್ನು ಸೆಳೆಯಲು ಸಮೋಸ ಹಾಗೂ ಪಾಪ್‌ಕಾರ್ನ್ ಉಚಿತವಾಗಿ ಕೊಡುವ ಪ್ರಯತ್ನ ಕೂಡ ಮಾಡಲಾಗಿತ್ತು. ಅಂತಿಮವಾಗಿ ದೊಡ್ಡ ಸಿನಿಮಾವೊಂದು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿದೆ. ಇನ್ನು ಟಿಕೆಟ್ ದರ 300 ರೂ.ಗೂ ಹೆಚ್ಚಿದೆ. ಡಾಲ್ಬಿ ಸ್ಕ್ರೀನ್‌ನಲ್ಲಿ 400 ರೂ. ದಾಟಿದೆ. ಇನ್ನುಳಿದಂತೆ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್', ಕನ್ನಡದ 'ಲವ್ ಮಾಕ್ಟೇಲ್- 3' ಸಿನಿಮಾಗಳು ಅಲ್ಲಿ ಪ್ರದರ್ಶನವಾಗುತ್ತಿದೆ.

ಐಕಾನಿಕ್ ಕಪಾಲಿ ಚಿತ್ರಮಂದಿರ ಇದ್ದ ಜಾಗದಲ್ಲೇ ಎಎಂಬಿ ಸಿನಿಮಾಸ್ ಕಪಾಲಿ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ಎದ್ದು ನಿಂತಿದೆ. ನೂರಾರು ಕೋಟಿ ಸುರಿದ ಏಷಿಯನ್ ಸಿನಿಮಾಸ್ ಜೊತೆ ಸೇರಿ ಮಹೇಶ್ ಬಾಬು ಕಾಂಪ್ಲೆಕ್ಸ್ ನಿರ್ಮಿಸಿದ್ದಾರೆ. ಉದ್ಘಾಟನೆಗೆ ಬರದೇ ಹೋದರೂ ಬಳಿಕ ಒಮ್ಮೆ ಭೇಟಿ ನೀಡಿದ್ದರು. ಹೈದರಾಬಾದ್‌ನಲ್ಲಿ ಎಎಂಬಿ ಸಿನಿಮಾಸ್ ಯಶಸ್ಸು ಕಂಡಿದೆ. ಹಾಗಾಗಿ ಬೆಂಗಳೂರಿನಲ್ಲಿ ಅದನ್ನು ವಿಸ್ತರಿಸಲಾಗಿದೆ.

ಮುಂದೆ 'ಪೆದ್ದಿ', 'ಟಾಕ್ಸಿಕ್', 'ವಾರಣಾಸಿ' ರೀತಿಯ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಎಎಂಬಿ ಸಿನಿಮಾಸ್ ಕಪಾಲಿ ಚಿತ್ರಮಂದಿರಕ್ಕೆ ಪ್ರೇಕ್ಷಕರು ನುಗ್ಗಿ ಬರಲಿದ್ದಾರೆ. ಆದರೆ ದೊಡ್ಡ ಸಿನಿಮಾಗಳು ಮಾತ್ರ ಜನರನ್ನು ಸೆಳೆಯುತ್ತವೆ. ಎಲ್ಲಾ ಸಿನಿಮಾಗಳಿಗೆ ಇದೇ ರೀತಿ ರೆಸ್ಪಾನ್ಸ್ ಸಿಗಲ್ಲ. ಹಾಗಾಗಿ ಮಹೇಶ್ ಬಾಬು ಲೆಕ್ಕಾಚಾರ ಸರಿಯೋ ತಪ್ಪೋ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

Read more about: mahesh babu theater
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X