ಗಾಂಧಿನಗರದಲ್ಲಿ ಮಹೇಶ್ ಬಾಬು ಒಡೆತನದ ಎಎಂಬಿ ಕಪಾಲಿ ಥಿಯೇಟರ್‌ ಖಾಲಿ ಖಾಲಿ; ಕಾರಣವೇನು?

ತೆಲುಗು ನಟ ಮಹೇಶ್ ಬಾಬು ಬೆಂಗಳೂರಿನಲ್ಲಿ ಎಎಂಬಿ ಸಿನಿಮಾಸ್ ಕಪಾಲಿ ಹೆಸರಿನಲ್ಲಿ ಥಿಯೇಟರ್ ಮಲ್ಟಿಪ್ಲೆಕ್ಸ್ ಆರಂಭಿಸಿರುವುದು ಗೊತ್ತೆಯಿದೆ. ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಕಾಂಪ್ಲೆಕ್ಸ್ ಉದ್ಘಾಟನೆ ಆಗಿತ್ತು. ಈಗಾಗಲೇ ಕೆಲ ಸಿನಿಮಾಗಳ ಪ್ರದರ್ಶನ ಆರಂಭವಾಗಿದೆ. ಬಹಳ ಐಷಾರಾಮಿಯಾಗಿ 9 ಸ್ಕ್ರೀನ್‌ಗಳ ಕಾಂಪ್ಲೆಕ್ಸ್ ಎದ್ದು ನಿಂತಿದೆ.

ದಕ್ಷಿಣದಲ್ಲೇ ಮೊದಲ ಬಾರಿ ಎನ್ನುವಂತೆ ಡಾಲ್ಬಿ ಸ್ಕ್ರೀನ್‌ ಕೂಡ ಎಎಂಬಿ ಸಿನಿಮಾಸ್ ಕಪಾಲಿ ಕಾಂಪ್ಲೆಕ್ಸ್‌ನಲ್ಲಿದೆ. ಜನವರಿ 16ರಂದು ಥಿಯೇಟರ್ ಉದ್ಘಾಟನೆ ಆಗಿತ್ತು. 15 ದಿನ ಕಳೆದರೂ ಪ್ರೇಕ್ಷಕರ ರೆಸ್ಪಾನ್ಸ್ ಅಷ್ಟಾಗಿ ಕಂಡು ಬರುತ್ತಿಲ್ಲ. ಅದಕ್ಕೆ ಕೆಲವರು ನಾನಾ ಕಾರಣಗಳನ್ನು ಕೊಡುತ್ತಿದ್ದಾರೆ. ಮೆಜೆಸ್ಟಿಕ್ ಕಮರ್ಷಿಯಲ್ ಏರಿಯಾ. ಅಂತಹ ಸ್ಥಳಗಳಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಮುಂದಾಗುವುದಿಲ್ಲ. ಟ್ರಾಫಿಕ್ ಹೆಚ್ಚು ಎನ್ನುವ ಕಾರಣಕ್ಕೆ ದೂರದ ಪ್ರದೇಶಗಳಿಂದ ಯಾರೂ ಹೋಗಲ್ಲ ಎನ್ನುವ ಚರ್ಚೆ ಶುರುವಾಗಿದೆ.

Mahesh Babu s AMB Cinemas Kapali Opens in Bengaluru Faces Slow Start Despite Luxury Experience

ಕಳೆದ 15 ದಿನಗಳಲ್ಲಿ ಅಂತಹ ದೊಡ್ಡ ಸಿನಿಮಾಗಳು ಯಾವುದು ಕೂಡ ಬಿಡುಗಡೆ ಆಗಿಲ್ಲ. ಹಾಗಾಗಿ ಪ್ರೇಕ್ಷಕರ ರೆಸ್ಪಾನ್ಸ್ ಕಮ್ಮಿ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಖಂಡಿತ ಪ್ರೇಕ್ಷಕರು ಸಿನಿಮಾ ನೋಡಲು ಬರ್ತಾರೆ ಎನ್ನುವ ಲೆಕ್ಕಾಚಾರ ನಡೀತಿದೆ. ಗಾಂಧಿನಗರದ ಸುಬೇದಾರ್ ಛತ್ರಂ ರಸ್ತೆಯಲ್ಲಿದ್ದ ಐಕಾನಿಕ ಕಪಾಲಿ ಚಿತ್ರಮಂದಿರ ಕೆಲ ವರ್ಷ ಹಿಂದೆ ನೆಲಸಮವಾಗಿತ್ತು. ಅದೇ ಜಾಗದಲ್ಲಿ ಈಗ ಎಎಂಬಿ ಸಿನಿಮಾಸ್ ಕಟ್ಟದ ತಲೆ ಎತ್ತಿದೆ.

2ನೇ ಮಹಡಿಯಲ್ಲಿ 5 ಹಾಗೂ 4ನೇ ಮಹಡಿಯಲ್ಲಿ 4 ಸ್ಕ್ರೀನ್‌ಗಳಿಗೆ. 6ನೇ ಸ್ಕ್ರೀನ್ ಡಾಲ್ಬಿ ಎನ್ನುವುದು ವಿಶೇಷ. ಗಾಂಧಿನಗರದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತವೆ. ಥಿಯೇಟರ್ ಮುಂಭಾಗದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿ ನಡೆಯುತ್ತದೆ. ಕಪಾಲಿ ಪಕ್ಕದಲ್ಲೇ ಇದ್ದ ಮೂವಿಲ್ಯಾಂಡ್, ಅದೇ ರಸ್ತೆಯಲ್ಲಿರುವ ತ್ರಿವೇಣಿ ಹಾಗೂ ಅನುಪಮ ಚಿತ್ರಮಂದಿರಗಳಲ್ಲಿ ಕೂಡ ಫಸ್ಟ್ ವೀಕೆಂಡ್ ದೊಡ್ಡ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ ಸಿಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಪ್ರೇಕ್ಷಕರು ಬರ್ತಾರೆ ಎನ್ನುವ ನಿರೀಕ್ಷೆಯಿದೆ.

ಪ್ರೇಕ್ಷಕರನ್ನು ಸೆಳೆಯಲು ಒಂದು ತಿಂಗಳ ಕಾಲ ಮಾರ್ನಿಂಗ್ ಶೋಗಳಲ್ಲಿ ಪ್ರೇಕ್ಷಕರಿಗೆ ಉಚಿತವಾಗಿ ಒಂದೊಂದು ಸಮೋಸ ಕೊಡಲಾಗುತ್ತಿದೆ. ಜನವರಿ 27ರಿಂದ ಫೆಬ್ರವರಿ 27ರವರೆಗೆ ಈ ಆಫರ್ ಇರಲಿದೆ. ಜನವರಿ ಬದಲು ಡಿಸೆಂಬರ್‌ ಆರಂಭದಲ್ಲೇ ಚಿತ್ರಮಂದಿರ ಉದ್ಘಾಟನೆ ಆಗಿದ್ದರೆ ಪ್ರೇಕ್ಷಕರ ಪ್ರತಿಕ್ರಿಯೆ ಚೆನ್ನಾಗಿ ಇರ್ತಿತ್ತು ಎನ್ನುವ ವಾದ ಕೆಲವರದ್ದು. 'ಧುರಂಧರ್', 'ಅಖಂಡ- 2' ಸೇರಿದಂತೆ ಕನ್ನಡದ 'ಡೆವಿಲ್', 'ಮಾರ್ಕ್', '45' ಚಿತ್ರಗಳು ಬಿಡುಗಡೆ ಆಗಿದ್ದವು. ಬಳಿಕ ಸಂಕ್ರಾಂತಿಗೆ ಪ್ರಭಾಸ್ ನಟನೆಯ 'ದಿ ರಾಜಾಸಾಬ್', ಚಿರಂಜೀವಿ ನಟನೆಯ 'ಮನ ಶಂಕರವರಪ್ರಸಾದ್' ಚಿತ್ರಗಳು ಬಿಡುಗಡೆ ಆಗಿದ್ದವು. ಇಂತಹ ದೊಡ್ಡ ಸಿನಿಮಾಗಳನ್ನು ನೋಡಲು ಜನ ಖಂಡಿತ ಮುಗಿಬೀಳುತ್ತಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ.

ಏಷಿಯನ್ ಸಿನಿಮಾಸ್ ಜೊತೆ ಸೇರಿ ಮಹೇಶ್ ಬಾಬು ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಚೈನ್ ನಡೆಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಬಹಳ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಬೆಂಗಳೂರಿಗೆ ಅದನ್ನು ವಿಸ್ತರಿಸಲಾಗಿದೆ. ಐಟಿ ಉದ್ಯೋಗಿಗಳು ಹೆಚ್ಚು ಇರುವ ಪ್ರದೇಶಗಳಲ್ಲಿ ಪ್ರೀಮಿಯಮ್ ಮಲ್ಟಿಪ್ಲೆಕ್ಸ್‌ಗಳು ಗೆಲ್ಲುತ್ತವೆ. ಮೆಜೆಸ್ಟಿಕ್ ರೀತಿಯ ಕಮರ್ಷಿಯಲ್ ಪ್ರದೇಶಗಳಲ್ಲಿ ಕಷ್ಟ ಕಷ್ಟ ಎನ್ನುವುದು ಕೆಲವರ ವಾದ. ಮುಂದಿನ ದಿನಗಳಲ್ಲಿ 'ಟಾಕ್ಸಿಕ್', 'ಧುರಂಧರ್- 2' ರೀತಿಯ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆಗ ಖಂಡಿತ ಜನ ಎಎಂಬಿ ಸಿನಿಮಾಸ್‌ಗೆ ಬರ್ತಾರೆ ಎನ್ನುವ ಲೆಕ್ಕಾಚಾರ ಕೆಲವರದ್ದು.

9 ಸ್ಕ್ರೀನ್‌ಗಳ ಜೊತೆಗೆ ಕೆಲ ಮಳಿಗೆಗಳು ಅದೇ ಕಟ್ಟಡದಲ್ಲಿವೆ. ಕಪಾಲಿ ಎಂದು ಕಟ್ಟಡದ ಮೇಲ್ಭಾಗದಲ್ಲಿ ದೊಡ್ಡದಾಗಿ ಬೋರ್ಡ್ ಹಾಕಿದ್ದಾರೆ. 350ಕ್ಕೂ ಅಧಿಕ ಕಾರ್‌ಗಳನ್ನು ಪಾರ್ಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ನೂರಾರು ಕೋಟಿ ಸುರಿದು ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ. ಅಲ್ಲಿ ಸಿನಿಮಾ ನೋಡುವ ಅನುಭವ ಬಹಳ ಚೆನ್ನಾಗಿದೆ. ಆದರೆ ಸದ್ಯಕ್ಕೆ ಪ್ರೇಕ್ಷಕರ ಬರ ಎದುರಿಸುವಂತಾಗಿದೆ.

More from Filmibeat

Read more about: mahesh babu sandalwood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X