For Quick Alerts
  ALLOW NOTIFICATIONS  
  For Daily Alerts

  ಪ್ರಿನ್ಸ್ ಮಹೇಶ್ ಪುತ್ರ ಬೆಳ್ಳಿತೆರೆಗೆ ಎಂಟ್ರಿ

  By Mahesh
  |

  ತೆಲುಗು ಚಿತ್ರದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಕುಟುಂಬ ಮತ್ತೊಂದು ಕುಡಿ ಬೆಳ್ಳಿ ತೆರೆಗೆ ಇಳಿಯುತ್ತಿದೆ. ಸುಕುಮಾರ್ ನಿರ್ದೇಶನದ ಚಿತ್ರದ ಮೂಲಕ ಪ್ರಿನ್ಸ್ ಮಹೇಶ್ ಪುತ್ರ ಗೌತಮ್ ಕೃಷ್ಣ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಖಾತ್ರಿಯಾಗಿದೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಬಾಬು, ಸುಕುಮಾರ್ ನಿರ್ದೇಶನದಲ್ಲಿ ನನ್ನ ಮಗ ನಟಿಸುವುದು ನನ್ನ ಆಸೆಯಾಗಿತ್ತು. ಸುಕುಮಾರ್ ಕೂಡಾ ಪಾತ್ರಕ್ಕೆ ಗೌತಮ್ ತಕ್ಕನಾಗಿದ್ದಾನೆ ಎಂದು ಅವಕಾಶ ನೀಡಿದ್ದಾರೆ. ಈಗಾಗಲೇ ಟೆಸ್ಟ್ ಶೂಟಿಂಗ್ ಜಾರಿಯಲ್ಲಿದೆ. ಗೌತಮ್ ಗೆ ಉತ್ತಮ ನಟನೆ ಪಾಠ ಸಿಗುವ ಭರವಸೆ ಇದೆ ಎಂದಿದ್ದಾರೆ.

  ಅದರೂ ಗೌತಮ್ ಬಗ್ಗೆ ನನಗಿಂತ ನನ್ನ ಪತ್ನಿ ನಮ್ರತಾ ಹೆಚ್ಚಿನ ಕಾಳಜಿ ವಹಿಸುತ್ತಾಳೆ.ನಾನು ಮಗಳು ಸಿತಾರಾ ಜೊತೆ ಆಡವಾಡುವುದರಲ್ಲಿ ಹೆಚ್ಚು ಕಾಲ ಕಳೆಯುತ್ತೇನೆ. ನಮ್ರತಾ ಹೇಳಿಕೊಟ್ಟ ಪಾಠವೇ ಗೌತಮ್ ಗೆ ಶ್ರೀರಕ್ಷೆಯಾಗಲಿದೆ ಎಂದು ಮಹೇಶ್ ಬಾಬು ಹೇಳಿದ್ದಾರೆ. ಮಹೇಶ್ ಬಾಬು ಅವರು ಸದ್ಯಕ್ಕೆ ಸುಕುಮಾರ್ ಅವರ ಮಹತ್ವದ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಹೃತಿಕ್ ರೋಷನ್ ಗೆ ಟ್ರೈನಿಂಗ್ ನೀಡಿದ ಕ್ರಿಸ್ ಗೆಥಿನ್ ಈಗ ಮಹೇಶ್ ಬಾಬು ಗೆ ತರಬೇತಿ ನೀಡುತ್ತಿದ್ದು, ಮಹೇಶ್ ಬಾಬು ಕಟ್ಟು ಮಸ್ತಾದ ದೇಹ ಬೆಳೆಸುವುದರಲ್ಲಿ ನಿರತರಾಗಿದ್ದಾರೆ. ಟ್ರೈನಿಂಗ್ ಬಗ್ಗೆ ಟ್ವೀಟಿಸಿದ್ದರು. ಅಪ್ಪ ಮಗನ ಒಡನಾಟದ ಮುಂದಿನ ಕಥೆ ಚಿತ್ರ ಸರಣಿಯಲ್ಲಿ ನೋಡಿ

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಭಾರತದ ಸುಂದರಿ ಪಟ್ಟ ಗೆದ್ದ ನಮ್ರತಾ ಶಿರೋಡ್ಕರ್ ಜೊತೆ ಐದಾರು ವರ್ಷ ಡೇಟಿಂಗ್ ಮಾಡಿದ ನಂತರ 10, ಫೆಬ್ರವರಿ 2005 ರಲ್ಲಿ ಮುಂಬೈನಲ್ಲಿ ಮದುವೆಯಾದರು. ದಂಪತಿಗೆ ಗೌತಮ್ ಕೃಷ್ಣ(ಜನನ: 31 ಆಗಸ್ಟ್ 2006) ಹಾಗೂ ಪುತ್ರಿ ಸಿತಾರಾ ಇದ್ದಾರೆ.

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಪ್ರಿ ಮೆಚ್ಯೂರ್ ಬೇಬಿಯಾಗಿ ಜನಿಸಿದ್ದ ಗೌತಮ್ ಬಗ್ಗೆ ದಂಪತಿ ಹೆಚ್ಚಿನ ಕಾಳಜಿ ವಹಿಸಬೇಕಾಯಿತು. ಆದರೆ, ತಾರಾ ಜೋಡಿಯ ಪ್ರೀತಿ, ಆರೈಕೆಯಿಂದ ಗೌತಮ್ ಉತ್ತಮ ಆರೋಗ್ಯವಂತನಾಗಿ ಚಿತ್ರರಂಗಕ್ಕೆ ಎಂಟ್ರಿಕೊಡಲು ಸಿದ್ಧನಾಗಿದ್ದಾನೆ.

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಅಪ್ಪ ಮಹೇಶ್ ಬಾಬು ಜೊತೆ Nintendo or Wii ಆನ್ ಲೈನ್ ಗೇಮ್ಸ್ ಆಡುವುದೆಂದರೆ ಗೌತಮ್ ಗೆ ತುಂಬಾ ಇಷ್ಟ. ಇಬ್ಬರು ಒಟ್ಟಿಗೆ ಬಾತ್ ರೂಮ್ ಸೇರಿದರೆ ಜಲಕ್ರೀಡೆ ಮುಗಿಯುವುದೇ ಇಲ್ಲ ಎಂದು ನಮ್ರತಾ ಹೇಳಿದ್ದಾರೆ.

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಶೂಟಿಂಗ್ ನಲ್ಲಿ ಸಮಯ ಸಿಕ್ಕರೆ ಸಾಕು ಫ್ಯಾಮಿಲಿ ಜೊತೆ ಕಾಲ ಕಳೆಯಲು ಮಹೇಶ್ ಬಾಬು ಹಾತೊರೆಯುತ್ತಾರೆ. ಮಕ್ಕಳೊಂದಿಗೆ ಕಾಲ ಕಳೆಯುವುದು, ಸೈಕ್ಲಿಂಗ್ ಹೋಗುವುದು, ವಿಹಾರ ಯಾತ್ರೆ ನಡೆಸುವುದು ಪ್ರಿನ್ಸ್ ಗೆ ಸಕತ್ ಇಷ್ಟ

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಗೌತಮ್ ತುಂಟ ಹುಡುಗನಲ್ಲದಿದ್ದರೂ ಅಸಂಖ್ಯ ಪ್ರಶ್ನೆಗಳನ್ನು ಕೇಳುತ್ತಾನೆ. ಎಲ್ಲಾ ವಿಷ್ಯಗಳಲ್ಲೂ ಕುತೂಹಲ ಜಾಸ್ತಿ. ಅವರ ಪ್ರಶ್ನೆ ಕಾಟ ನಾನು ತಡೆಯಲಾರದೆ ಅಪ್ಪನ ಹತ್ತಿರ ಕಳಿಸುತ್ತೇನೆ. ಮಹೇಶ್ ಗೆ ತಾಳ್ಮೆ ಜಾಸ್ತಿ ಗೌತಮ್ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದು ಅಮ್ಮ ನಮ್ರತಾ ಹೇಳಿಕೆ

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಟಾಲಿವುಡ್ ಜ್ಯೂ. ಪ್ರಿನ್ಸ್ ಗೌತಮ್ ಕೃಷ್ಣ

  ಮಹೇಶ್ ಗೆ ಇರುವ ಎಲ್ಲಾ ಒಳ್ಳೆ ಗುಣ ಗೌತಮ್ ನಲ್ಲಿ ನಿರೀಕ್ಷಿಸಬಹುದು. ಆದರೆ, ಕೆಲವು ವಿಷಯಗಳಲ್ಲಿ ನನ್ನಂತೆ ಸೂಕ್ಷ್ಮ ಆದರೆ, ಆತ ಗಲಾಟೆ ಮಾಡಿದ ನೆನಪಿಲ್ಲ. ಆತ ಚಿತ್ರರಂಗದಲ್ಲಿ ಅಪ್ಪನಂತೆ ಸ್ಟಾರ್ ಆಗಬೇಕು ಎಂದು ನಾವು ಬಯಸುತ್ತಿಲ್ಲ. ಉತ್ತಮ ಕಲಾವಿದ ಎನಿಸಿಕೊಳ್ಳಬೇಕು ಎಂಬುದು ನಮ್ಮ ಬಯಕೆ

  English summary
  Superstar Mahesh Babu is all set to introduces his son Gautam Krishna to film industry. He would debut as a child artiste in Sukumar's much-hyped untitled project. Prince says that the director himself decided to cast him for the movie. He has already done a test shoot and the real filming is expected to be held very soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X