»   » ಸ್ವಾಭಿಮಾನಿ ಕನ್ನಡಿಗರ ಆಗ್ರಹಕ್ಕೆ ಮಣಿದ ಮಹೇಶ್ ಬಾಬು !

ಸ್ವಾಭಿಮಾನಿ ಕನ್ನಡಿಗರ ಆಗ್ರಹಕ್ಕೆ ಮಣಿದ ಮಹೇಶ್ ಬಾಬು !

Posted By:
Subscribe to Filmibeat Kannada

ತೆಲುಗು ನಟ ಮಹೇಶ್ ಬಾಬು ವಿರುದ್ಧ ಈಗ ಕನ್ನಡಿಗರು ಗರಂ ಆಗಿದ್ದರು. ಕನ್ನಡ ಮರೆತ ಮಹೇಶ್ ಬಾಬು ಬಗ್ಗೆ ಕೋಪಗೊಂಡಿದ್ದ ಅನೇಕರು ತಮ್ಮ ಸಿಟ್ಟನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರ ಹಾಕುತ್ತಿದ್ದರು. ಕನ್ನಡಿಗರ ಈ ಕೋಪಕ್ಕೂ ಒಂದು ಬಲವಾದ ಕಾರಣ ಇತ್ತು.

ಅಂದಹಾಗೆ, ನಿನ್ನೆ ಮಹೇಶ್ ಬಾಬು ಅಭಿನಯದ ತೆಲುಗು ಸಿನಿಮಾ 'ಭರತ್ ಅನೆ ನೇನು' ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಇದರಿಂದ ಖುಷಿ ಆದ ಮಹೇಶ್ ಬಾಬು ತಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಧನ್ಯವಾದ ಹೇಳಿದ್ದರು. ಸಿನಿಮಾ ನೋಡಿದವರಿಗೆ ಧನ್ಯವಾದ ಹೇಳಿದರೆ ಏನು ಸಮಸ್ಯೆ ಇರಲಿಲ್ಲ. ಆದರೆ ಮಹೇಶ್ ತಮ್ಮ ಧನ್ಯವಾದವನ್ನು ನಾಲ್ಕು ಭಾಷೆಗೆ ಮಾತ್ರ ಸೀಮಿತ ಗೊಳಿಸಿದ್ದರು. ಇದು ಕನ್ನಡರ ಕೋಪಕ್ಕೆ ಗುರಿ ಆಗಿತ್ತು. ಆದರೆ ಕನ್ನಡಿಗರ ಆಗ್ರಹಕ್ಕೆ ಈಗ ಮಹೇಶ್ ಮಣಿದಿದ್ದಾರೆ. ಮುಂದೆ ಓದಿ..

ಕನ್ನಡ ಕಡೆಗಣಿಸಿದ್ದ ಮಹೇಶ್ ಬಾಬು

ನಿನ್ನೆ 'ಭರತ್ ಅನೆ ನೇನು' ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಮಹೇಶ್ ಬಾಬು ತಮ್ಮ ಪೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಸಿನಿಮಾ ನೋಡಿದ ಜನರಿಗೆ ತೆಲುಗು, ತಮಿಳು, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಹೇಶ್ ಧನ್ಯವಾದ ಹೇಳಿದ್ದರು. ನಾಲ್ಕು ಭಾಷೆಯಲ್ಲಿ ಧನ್ಯವಾದ ಹೇಳಿದ ಮಹೇಶ್ ಕನ್ನಡವನ್ನು ಕಡೆಗಣಿಸಿದರು.

ಮಹೇಶ್ ಬಾಬು ಫೇಸ್ ಬುಕ್ ನಲ್ಲಿ

ನಟ ಮಹೇಶ್ ಬಾಬು ಅವರ ಈ ಪೋಸ್ಟ್ ಗೆ ನೂರಾರು ಕನ್ನಡಿಗರು ಕಮೆಂಟ್ ಮಾಡಿ ಕನ್ನಡ ಮರೆತಿದ್ದ ಮಹೇಶ್ ಗೆ ನೆನಪು ಮಾಡಿದರು. ಹಾಗೆ ನೋಡಿದರೆ ಮಹೇಶ್ ಬಾಬು ಫೇಸ್ ಬುಕ್ ಪೋಸ್ಟ್ ನಲ್ಲಿ ತೆಲುಗಿನವರಿಗಿಂತ ಕನ್ನಡದವರ ಕಮೆಂಟ್ ಗಳೆ ಜಾಸ್ತಿ ಇತ್ತು. ಮಹೇಶ್ ಬಾಬು ಅವರಿಗೆ ತಮ್ಮ ಮಾತನ್ನು ಅರ್ಥ ಮಾಡಿಸುವ ದೃಷ್ಟಿಯಿಂದ ಇಂಗ್ಲೀಷ್ ಭಾಷೆಯಲ್ಲಿ ತಮ್ಮ ಅಸಮಾಧಾನವನ್ನು ಹೇಳಿಕೊಂಡಿದ್ದರು.

ನಮಗೆ ಬೇಡವೇ ಧನ್ಯವಾದ

''ತೆಲುಗು ಚಿತ್ರ ಬಿಡುಗಡೆಯಾದಾಗ ಎಲ್ಲಾ ರಾಜ್ಯಗಳಿಗಿಂತ ಜಾಸ್ತಿ ನೋಡೋದು ಕರ್ನಾಟಕದ ಜನತೆ ನಮಗೆ ಬೇಡವೇ ಧನ್ಯವಾದ'' ಹಾಗೂ ''ಕರ್ನಾಟಕದಲ್ಲಿ ನಿಮ್ಮ ಅನೇಕ ಅಭಿಮಾನಿಗಳು ಇದ್ದರೆ ಯಾವತ್ತು ನೀವು ಕನ್ನಡಿಗರನ್ನು ಮರಯಬೇಡಿ'' ಈ ರೀತಿಯ ನೂರಾರು ಕಮೆಂಟ್ ಗಳ ಮೂಲಕ ಮಹೇಶ್ ಬಾಬು ಅವರನ್ನು ಕನ್ನಡಿಗರು ಕೇಳಿದ್ದರು.

ಸಿನಿಮಾ ನೋಡಿದವರಿಗೆ ನಿಂದನೆ

ಕರ್ನಾಟಕದಲ್ಲಿ ಎದ್ದು ಬಿದ್ದು ನಿನ್ನೆ ಬೆಳ್ಳಗೆಯೇ 'ಭರತ್ ಅನೆ ನೇನು' ಸಿನಿಮಾವನ್ನು ನೋಡಿದ ಪ್ರೇಕ್ಷಕರನ್ನು ಅನೇಕರು ನಿಂದಿಸಿದ್ದರು. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ನಿಮಗೆ ಮಹೇಶ್ ಬಾಬು ನೀಡಿದ ಗೌರವ ಇದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಮಾತಿನ ಸಮರ ಶುರು ಮಾಡಿದ್ದರು.

ಕೊನೆಗೂ ಕನ್ನಡದಲ್ಲಿ 'ಕೃತಜ್ಞತೆಗಳು' ಎಂದ ಮಹೇಶ್

ಫೇಸ್ ಬುಕ್ ನಲ್ಲಿ ಸಾಕಷ್ಟು ಕಮೆಂಟ್ ಗಳನ್ನು ಗಮನಿಸಿದ ಮಹೇಶ್ ಬಾಬು ಕೊನೆಗೆ ಇದೀಗ ತಾನೇ 'ಕೃತಜ್ಞತೆಗಳು' ಎಂದು ಕನ್ನಡದಲ್ಲಿ ಬರೆದು ಹಾಕಿದ್ದಾರೆ. ಮೊದಲು ನಾಲ್ಕು ಭಾಷೆಯಲ್ಲಿ ಮಾತ್ರ ಧನ್ಯವಾದ ಹೇಳಿದ ಮಹೇಶ್ ಕನ್ನಡಿಗರ ಮಾತು ಕೇಳಿದ ನಂತರ ಅದನ್ನು ಪಾಲಿಸಿದ್ದಾರೆ. ಫೇಸ್ ಬುಕ್ ನಲ್ಲಿ ಎಟಿಟ್ ಮಾಡಿ 'ಕೃತಜ್ಞತೆಗಳು' ಎಂದು ಸೇರಿಸಿರುವ ಮಹೇಶ್ ಟ್ವಿಟ್ಟರ್ ಖಾತೆಯಲ್ಲಿ ಇನ್ನೂ ಅದನ್ನು ಬದಲಿಸಿಲ್ಲ.

English summary
Telugu actor Mahesh Babu has taken his facebook account to thank kannada audience for watching 'Bharath Ane Nenu' movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X