ರಿಯಲ್ ಸ್ಟಾರ್ ಸಿನಿಮಾದ ಆಡಿಯೋ ರಿಲೀಸ್ ಮಾಡಲಿದ್ದಾರೆ ಮಹೇಶ್ ಬಾಬು?

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸದ್ಯ ಮಹರ್ಷಿ ಚಿತ್ರದ ಸಕ್ಸಸ್ ನಲ್ಲಿ ಇದ್ದಾರೆ. ಜೊತೆಗೆ ಮುಂದಿನ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನ ಮೋಸ್ಟ್ ಹ್ಯಾಂಡ್ ಸಮ್ ಅಂಡ್ ಬ್ಯುಸಿಯಸ್ಟ್ ನಟ ಮಹೇಶ್ ಬಾಬು ರಿಲಯ್ ಸ್ಟಾರ್ ಉಪೇಂದ್ರ ಜೊತೆ ವೇದಿಕೆ ಹಂಚಿಕೊಳ್ಳುವ ಸಮಯ ಬಂದಿದೆ.

ಹೌದು, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕನ್ನಡದ ಬುಹುನಿರೀಕ್ಷೆಯ ಐ ಲವ್ ಯು ಚಿತ್ರದ ಆಡಿಯೋವನ್ನು ಮಹೇಶ್ ಬಾಬು ರಿಲೀಸ್ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಐ ಲವ್ ಯು ಸಿನಿಮಾ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲೂ ತೆರೆಗೆ ಬರುತ್ತಿದೆ.

ತೆಲುಗು ಭಾಷೆಯ ಆಡಿಯೋವನ್ನು ಪ್ರಿನ್ಸ್ ಮಹೇಶ್ ಬಾಬು ಕೈಯಲ್ಲಿ ರಿಲೀಸ್ ಮಾಡಿಸುವ ಪ್ಲಾನ್ ಮಾಡಿದೆ ಚಿತ್ರತಂಡ. ಉಪೇಂದ್ರ ಅವರಿಗೆ ತೆಲುಗು ಚಿತ್ರರಂಗವು ಚೆನ್ನಾಗಿ ಗೊತ್ತು. ಮಹೇಶ್ ಬಾಬು ಜೊತೆ ಉತ್ತಮ ಒಡನಾಟವಿದೆ. ಇದೆ ವಿಶ್ವಾಸಕ್ಕೆ ಮಹೇಶ್ ಬಾಬು ಐ ಲವ್ ಯು ಸಿನಿಮಾದ ಆಡಿಯೋವನ್ನು ರಿಲೀಸ್ ಮಾಡಿಕೊಡಲಿದ್ದಾರಂತೆ.

Mahesh Babu will release the audio from I Love You kannada movie

ಮಹೇಶ್ ಬಾಬು ಮತ್ತ ಉಪೇಂದ್ರ ಅವರನ್ನು ಒಂದೇ ವೇದಿಕೆಯಲ್ಲಿ ನೋಡಿ ಕಣ್ತುಂಬಿಕೊಳ್ಳುವ ಸದಾವಕಾಶ ಸಿಕ್ಕಂತಾಗುತ್ತೆ. ಐ ಲವ್ ಯು ಆರ್ ಚಂದ್ರು ನಿರ್ದೇಶನದ ಸಿನಿಮಾ. ಆರ್ ಚಂದ್ರು ಅವರಿಗೂ ತೆಲುಗು ಚಿತ್ರರಂಗದ ಒಡನಾಟವಿದೆ. ಹಾಗಾಗಿ ಮಹೇಶ್ ಬಾಬು ಆಡಿಯೋ ರಿಲೀಸ್ ಮಾಡಿಕೊಡುವುದರಲ್ಲಿ ಅಚ್ಚರಿ ಏನು ಇಲ್ಲ. ಸದ್ಯದಲ್ಲೆ ಚಿತ್ರದ ಆಡಿಯೋ ರಿಲೀಸ್ ಆಗಲಿದ್ದು ಚಿತ್ರ ಜೂನ್ 14ಕ್ಕೆ ತೆರೆಗೆ ಬರಲಿದೆ.

More from Filmibeat

English summary
Tollywood actor Mahesh Babu will release the audio from I Love You kannada movie. Real star upendra starrer I Love U film is directed by R Chandru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X