ಕೆಜಿಎಫ್​-2 ಚಿತ್ರವನ್ನು ಹಾಡಿ ಹೊಗಳಿದ ಬಾಲಿವುಡ್​ ನಿರ್ಮಾಪಕ

ಸ್ಯಾಂಡಲ್​ವುಡ್ ನಟ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಶಾಂತ್​ ನೀಲ್​ ನಿರ್ದೇಶನದ 'ಕೆಜಿಎಫ್​' ಹಾಗೂ 'ಕೆಜಿಎಫ್​ ಚಾಪ್ಟರ್ 2' ಎರಡೂ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದಲ್ಲದೇ, ಬಾಕ್ಸ್​ ಆಫೀಸ್​ನಲ್ಲೂ ಧೂಳೆಬ್ಬಿಸಿತ್ತು. 'ಕೆಜಿಎಫ್​ ಚಾಪ್ಟರ್​ 2' ಚಿತ್ರ 1000 ಕೋಟಿಗೂ ಅಧಿಕ ಬಾಕ್ಸ್​ ಆಫೀಸ್​ ಕಲೆಕ್ಷನ್ ದೋಚುವ ಮೂಲಕ ಬಾಲಿವುಡ್​ ಸೇರಿದಂತೆ ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರ ಮೆಚ್ಚುಗೆ ಗಳಿಸಿತ್ತು.

ಕನ್ನಡ ಚಿತ್ರರಂಗವನ್ನು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡುತ್ತೇನೆ ಎಂದಿದ್ದ ನಟ ಯಶ್​ 'ಕೆಜಿಎಫ್'​ ಚಿತ್ರದ ಮೂಲಕ ತಾವಾಡಿದ ಮಾತನ್ನು ಸಾಬೀತು ಪಡಿಸಿದರು. 'ಕೆಜಿಎಫ್​ ಚಾಪ್ಟರ್​ 1' ಚಿತ್ರದ ಯಶಸ್ಸಿನ ಬೆನ್ನಲ್ಲೇ ಸತತ ಐದು ವರ್ಷಗಳ ಶ್ರಮದೊಂದಿಗೆ 'ಕೆಜಿಎಫ್​ ಚಾಪ್ಟರ್​ 2' ಚಿತ್ರ ಬಿಡುಗಡೆಗೊಳಿಸಿದ್ದ ಚಿತ್ರತಂಡ ನಿರೀಕ್ಷೆಗೂ ಮೀರಿ ಯಶಸ್ಸುಗಳಿಸಿದ್ದರು.

ಬಿರುಗಾಳಿಯಂತೆ ತೆರೆಗಪ್ಪಳ್ಳಿಸಿದ್ದ 'ಕೆಜಿಎಫ್ ಚಾಪ್ಟರ್​ 2' ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಸ್ಯಾಂಡಲ್​ವುಡ್​ ಖ್ಯಾತಿಯನ್ನು ಹೆಚ್ಚಿಸಿದೆ. ಇಂತಹ ಅದ್ಭುತ ಚಿತ್ರವನ್ನು ನೀಡಿದ ಯಶ್​ ಹಾಗೂ ಪ್ರಶಾಂತ್​ ನೀಲ್ ಅವರನ್ನು ​ಹೊಗಳದವರಿಲ್ಲ. ಇದೀಗ ಬಾಲಿವುಡ್​ ನಟ, ನಿರ್ಮಾಪಕ ಮಹೇಶ್​ ಮಂಜೇಕರ್​ 'ಕೆಜಿಎಫ್' ​ ಚಿತ್ರವನ್ನು ಹಾಡಿಹೊಗಳಿದ್ದಾರೆ.

 ಸಿನಿಮಾ ರಂಗದಲ್ಲಿ ಹೊಸ ಇತಿಹಾಸ 'ಕೆಜಿಎಫ್​'

ಸಿನಿಮಾ ರಂಗದಲ್ಲಿ ಹೊಸ ಇತಿಹಾಸ 'ಕೆಜಿಎಫ್​'

ಮರಾಠಿ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ ಮಹೇಶ್​ ಮಂಜೇಕರ್​ ಕನ್ನಡ ಚಿತ್ರರಂಗದ ಪ್ರಗತಿಯ ಬಗ್ಗೆ ಹೊಗಳಿದ್ದಾರೆ. ಕನ್ನಡ ಚಿತ್ರರಂಗ ಯಾವಾಗ ಬೇಕಾದರೂ ಮುಚ್ಚಬಹುದು ಎಂದು ಅಪಹಾಸ್ಯ ಮಾಡುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕನೊಬ್ಬ 'ಕೆಜಿಎಫ್​'ನಂತಹ ಚಿತ್ರವನ್ನು ಮಾಡಿ ಸಿನಿಮಾ ರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ. ಇಂತಹ ಬದಲಾವಣೆಗಳು ಬೇಕು ಎಂದು ಸ್ಯಾಂಡಲ್​ವುಡ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜೀವನದಲ್ಲಿ 'ಕೆಜಿಎಫ್'​ನಂತಹ ಸಾಧನೆ ಮಾಡಬೇಕು

ಜೀವನದಲ್ಲಿ 'ಕೆಜಿಎಫ್'​ನಂತಹ ಸಾಧನೆ ಮಾಡಬೇಕು

ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಪರಿಸ್ಥಿತಿ ಹೇಗಿತ್ತು ಎಂದರೆ ಯಾವಾಗ ಬೇಕಾದರೂ ಬಂದ್​ ಆಗಬಹುದು ಎನ್ನುವ ಪರಿಸ್ಥಿತಿ ಇತ್ತು. ಆದರೆ ಈಗ ಬಾಲಿವುಡ್​ ಅನ್ನೇ ಅದು ಮೀರಿಸಿದೆ. 'ಕೆಜಿಎಫ್'​ ಚಿತ್ರಗಳನ್ನು ಹಿಂದಿಯಲ್ಲಿ ಮಾಡದೇ ಇರುವುದು ನನಗೆ ಖುಷಿ ತಂದಿದೆ. ಕನ್ನಡದಲ್ಲೇ ಮಾಡಿದ ಚಿತ್ರವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರನ್ನು ನೋಡಿದರೆ ನನಗೆ ಹೆಮ್ಮೆ ಜೊತೆ ಅಸೂಯೆ ಆಗುತ್ತದೆ. ಜೀವನದಲ್ಲಿ ಇಂತಹ ಸಾಧನೆಯನ್ನು ಮಾಡಬೇಕು ಎಂದು ಮಹೇಶ್​ ಮಂಜೇಕರ್​ ಯಶ್​ ಹಾಗೂ ಪ್ರಶಾಂತ್​ ನೀಲ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಮರಾಠಿ ಚಿತ್ರರಂಗಕ್ಕೆ ಮಹೇಶ್​ ಮಂಜೇಕರ್ ಕಿವಿ ಮಾತು

ಮರಾಠಿ ಚಿತ್ರರಂಗಕ್ಕೆ ಮಹೇಶ್​ ಮಂಜೇಕರ್ ಕಿವಿ ಮಾತು

ಮರಾಠಿಯಲ್ಲೂ ಇಂತಹ ಪ್ರಯೋಗಗಳು ನಡೆಯಬೇಕು. ಮರಾಠಿ ಚಿತ್ರರಂಗದಲ್ಲೂ ಇಂತಹ ಅವಕಾಶಗಳು ಸೃಷ್ಟಿಯಾಗಬೇಕು. ಮರಾಠಿ ಚಿತ್ರರಂಗದಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ. ಚಿತ್ರಕಥೆ ವಿಚಾರಕ್ಕೆ ಬಂದರೆ ಮರಾಠಿ ಚಿತ್ರಗಳು ಅಗ್ರಸ್ಥಾನದಲ್ಲಿದೆ. ಹಾಗಾದರೆ ಎಲ್ಲಾ ಚಿತ್ರರಂಗಳ ಜೊತೆ ಸ್ಫರ್ಧಿಸಲು ಮರಾಠಿಗೆ ಏನು ಕೊರತೆ ಇದೆ ಎನ್ನುವುದನ್ನು ಅವಲೋಕಿಸಬೇಕು. ಆತ್ಮವಿಶ್ವಾಸದಿಂದ ಬಿಗ್​ ಬಜೆಟ್​ ಚಿತ್ರಗಳನ್ನು ಮಾಡಬೇಕು. ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಮರಾಠಿ ಚಿತ್ರರಂಗದಲ್ಲಿ ಪ್ರಮುಖ ಬದಲಾವಣೆಯಾಗಬೇಕು ಎಂದರು.

 ಕತ್ತಲು ನನಗೆ ಸ್ವಂತ ಎಂದಿದ್ದೇಕೆ ರಾಕಿಂಗ್​ ಸ್ಟಾರ್..?

ಕತ್ತಲು ನನಗೆ ಸ್ವಂತ ಎಂದಿದ್ದೇಕೆ ರಾಕಿಂಗ್​ ಸ್ಟಾರ್..?

ಇನ್ನು ಕೆಜಿಎಫ್​ ಚಾಪ್ಟರ್​-2 ಯಶಸ್ಸಿನ ಬಳಿಕ ಯಶ್​ ಮುಂದಿನ ಚಿತ್ರ ಯಾವುದು ಎನ್ನುವ ಪ್ರಶ್ನೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಯಶ್​ ಮುಂದಿನ ಚಿತ್ರಕ್ಕಾಗಿ ಸಿನಿ ಪ್ರಿಯರು ಕಾಯುತ್ತಿದ್ದು, ಈ ಬಗ್ಗೆ ಯಶ್​ ಯಾವುದೇ ವಿಚಾರ ಬಹಿರಂಗ ಪಡಿಸಿಲ್ಲ. ಆದರೆ ಇತ್ತೀಚಿಗೆ ಯಶ್​ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ಫೋಟೋ ಭಾರೀ ಕುತೂಹಲ ಹುಟ್ಟು ಹಾಕಿದೆ. ಯಶ್​ ಕತ್ತಲು ನನಗೆ ಸ್ವಂತ ಎಂದು ಖಡಕ್​ ಲುಕ್​ ಫೋಟೊ ಶೇರ್​ ಮಾಡಿದ್ದು, ಇದು ಮುಂದಿನ ಚಿತ್ರದ ಸುಳಿವು ಇರಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ.

More from Filmibeat

English summary
Mahesh manjrekar says a person made kgf and created history, adding that makers shot in kannada,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X