»   » ಚಲುವರಾಯಸ್ವಾಮಿ ಪುತ್ರ ಸಚಿನ್ ಸ್ಯಾಂಡಲ್‌ವುಡ್‌ಗೆ

ಚಲುವರಾಯಸ್ವಾಮಿ ಪುತ್ರ ಸಚಿನ್ ಸ್ಯಾಂಡಲ್‌ವುಡ್‌ಗೆ

Posted By:
Subscribe to Filmibeat Kannada

ರಾಜಕೀಯ ನಾಯಕರ ಮಕ್ಕಳ ಕಣ್ಣು ಸಿನಿಮಾ ರಂಗದ ಮೇಲೆ ಬಿದ್ದಿದೆ. ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಮತ್ತು ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರ ಪುತ್ರ ಅನೂಪ್ ನಂತರ ಮಾಜಿ ಸಂಸದ ಚಲುವರಾಯಸ್ವಾಮಿ ಪುತ್ರ ಸಚಿನ್ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

ದರ್ಶನ್ ಅಭಿನಯದ ಅಂಬರೀಶ ಚಿತ್ರ ನಿರ್ದೇಶಿಸಿದ್ದ ಮಹೇಶ್ ಸುಖಧಾರೆ ಅವರು ಸಚಿನ್‌ ಅವರ ಮೊದಲ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸಚಿನ್ ಅಭಿಯನದ ಮೊದಲ ಚಿತ್ರದ ಟೈಟಲ್ 'ಹ್ಯಾಪಿ ಬರ್ತ್‌ಡೇ'. ಮುಂದೆ ಇದು ಬದಲಾದರೂ ಆಗಬಹುದು. [ಆರ್.ಚಂದ್ರು ನಿರ್ದೇಶನದಲ್ಲಿ ಎಚ್.ಎಂ.ರೇವಣ್ಣ ಪುತ್ರ ಅನೂಪ್ ಎಂಟ್ರಿ]

Cheluvaraya Swamy

ಹ್ಯಾಪಿ ಬರ್ತಡೇ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಜೂ.12ರಂದು ಚಿತ್ರ ಸೆಟ್ಟೇರಲಿದೆ. ಸಚಿನ್‌ಗೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.

2009ರ ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದ ಚಲುವರಾಯಸ್ವಾಮಿ, 2013ರ ವಿಧಾನಸಭೆ ಚುನಾವಣೆಗೆ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಚಲುವರಾಯಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಪರಮಾಪ್ತರು ಹೌದು. ಕುಮಾರಸ್ವಾಮಿ ಪುತ್ರ ಮತ್ತು ಚಲುವರಾಯ ಸ್ವಾಮಿ ಪುತ್ರರಿಬ್ಬರು ಒಟ್ಟಿಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ.

English summary
Former minister and JDS leader N. Cheluvaraya Swamy son Sachin is all set to enter Sandalwood. Director Mahesh Sukadhare will direct Sachin first film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada