'ಅಂಬರೀಶ' ಬಳಿಕ ಮರಳಿ ಬಂದ ಮಹೇಶ್ ಸುಖಧರೆ

By Rajendra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ 'ಅಂಬರೀಶ' ಚಿತ್ರ ನಿರ್ದೇಶಿಸಿದ ಬಳಿಕ ಮಹೇಶ್ ಸುಖಧರೆ ಮತ್ತೊಂದು ಭರ್ಜರಿ ಚಿತ್ರದ ಮೂಲಕ ಮರಳಿದ್ದಾರೆ. ಈ ಭಾರಿ ಅವರು ಎರಡು ಚಿತ್ರಗಳನ್ನು ಕೈಗೆತ್ತಿಕೊಂಡಿರುವುದು ವಿಶೇಷ.

ಸುಖಧರೆ ನಿರ್ದೇಶನದ ಅಂಬರೀಶ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಆದರೂ ಫೀನಿಕ್ಸ್ ಪಕ್ಷಿಯಂತೆ ಎದ್ದುಬರುವ ಉತ್ಸಾಹದಲ್ಲಿದ್ದಾರೆ ಸುಖಧರೆ. ತಮ್ಮ ಹೊಸ ಚಿತ್ರಕ್ಕೆ ಅವರು 'ಶಕ್ತಿ ಐಎಎಸ್' ಎಂದು ಹೆಸರಿಟ್ಟಿದ್ದಾರೆ. [ಅಂಬರೀಶ ಚಿತ್ರ ವಿಮರ್ಶೆ]

Mahesh Sukhadhare next film titled as Shakti IAS

ಇದು ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಕುರಿತಾದ ಕಥೆಯೇ ಎಂಬ ಅನುಮಾನ ಬರುವುದು ಸಹಜ. ಆದರೆ ತಮ್ಮ ಚಿತ್ರದ ಕಥೆ ಡಿಕೆ ರವಿ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಸುಖಧರೆ ಸ್ಪಷ್ಟೀಕರಣ ನೀಡುತ್ತಾರೆ.

ಸೆಪ್ಟಂಬರ್ ನಲ್ಲಿ ಸೆಟ್ಟೇರಲಿರುವ ಶಕ್ತಿ ಐಎಎಸ್ ಚಿತ್ರ ಚರ್ತುಭಾಷಾ ಚಿತ್ರ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸೆಟ್ಟೇರಲಿದೆ. ಹಾಲಿವುಡ್ ಮಾದರಿಯಲ್ಲಿರುವ ಈ ಚಿತ್ರದ ಕಾಲಾವಧಿ ಕೇವಲ ಒಂದು ಗಂಟೆ ಹದಿನೆಂಟು ನಿಮಿಷಗಳಂತೆ.

ಇದಕ್ಕೂ ಮುನ್ನ 'ಜಸ್ಟ್ ಮದುವೇಲಿ' ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದಿದ್ದಾರೆ ಸುಖಧರೆ. ಹರೀಶ್ ಕುಮಾರ್ ನಾಯಕನಟನಾಗಿರುವ ಈ ಚಿತ್ರ ಏಪ್ರಿಲ್ 3ರಂದು ತೆರೆಗೆ ಅಪ್ಪಳಿಸುತ್ತಿದೆ. ಭಜರಂಗಿ ಹಾಗೂ ಅಂಬರೀಶ ಚಿತ್ರಗಳಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದ ಲೋಕಿ ಈ ಚಿತ್ರದಲ್ಲಿ ಪೂರ್ಣಪ್ರಮಾಣದ ವಿಲನ್ ಆಗಿ ಕಾಣಿಸುತ್ತಿದ್ದಾರೆ. (ಏಜೆನ್ಸೀಸ್)

More from Filmibeat

English summary
After 'Ambareesha' movie with Challenging Star Darshan now Mahesh Sukhadhare all set to say action cut. His next venture titled as 'Shakti IAS'. The movie is made in four languages including Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X