twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಸಂಕಷ್ಟ; ನೆರವಿಗೆ ನಿಂತ 'ಮಜಾ ಟಾಕೀಸ್' ರೆಮೋ

    |

    ಕೊರೊನಾ ಭೀಕರ ಪರಿಸ್ಥಿತಿಗೆ ಇಡೀ ದೇಶ ತತ್ತರಿಸಿ ಹೋಗಿದೆ. ಲಾಕ್ ಡೌನ್ ನಿಂದ ಸಾಕಷ್ಟು ಜನರ ಬದುಕು ಬೀದಿಗೆ ಬಂದಿದೆ. ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಅನೇಕ ಮಂದಿ ಸಹಾಯ ಹಸ್ತ ಚಾಚಿದ್ದಾರೆ.

    ಅನೇಕ ಸಿನಿಮಾ ಗಣ್ಯರು ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರು ಆಕ್ಸಿಜನ್, ವೆಂಟಿಲೇಟರ್, ಆಹಾರ ಕಿಟ್ ವಿತರಣೆ ಸೇರಿದಂತೆ ಕಷ್ಟದಲ್ಲಿರೊರ ಸಹಾಯಕ್ಕೆ ನಿಂತಿದ್ದಾರೆ. ಸುದೀಪ್, ಉಪೇಂದ್ರ, ಕವಿರಾಜ್, ಸಂಚಾರಿ ವಿಜಯ್ ಹೀಗೆ ಸಾಕಷ್ಟು ಮಂದಿ ಸಂಕಷ್ಟದಲ್ಲಿರೋರಿಗೆ ನೆರವಾಗಿದ್ದಾರೆ.

    Maja Talkies fame Singer Remo Distribute ration kit for Musicians, hairstylist

    ಇದೀಗ ಮಜಾ ಟಾಕೀಸ್ ಖ್ಯಾತಿಯ ಗಾಯಕಿ ರೆಮೋ ಕೂಡ ಕೈ ಜೋಡಿಸಿದ್ದು, ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂಗೀತಗಾರರು, ಕೇಶ ವಿನ್ಯಾಸಕರು ಸೇರಿದಂತೆ ತೀರ ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ್ದಾರೆ.

    ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಡೆಸಿಕೊಡುವ ಪ್ರಸಿದ್ಧ ಕಾಮಿಡಿ ಶೋ ಮಜಾ ಟಾಕೀಸ್ ನಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿರುವ ರೆಮೋ ಈಗ ಜನರ ಸಹಾಯಕ್ಕೆ ಬಂದಿದ್ದಾರೆ. ರೆಮೋ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    Maja Talkies fame Singer Remo Distribute ration kit for Musicians, hairstylist

    ಕಿಟ್ ವಿತರಣೆಯ ಫೋಟೋಗಳನ್ನು ರೆಮೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ಸಂಗೀತಗಾರರು, ಕೇಶ ವಿನ್ಯಾಸಕರು ಮತ್ತು ತೀವ್ರ ಅಗತ್ಯವಿರುವ ಜನರಿಗೆ ರೇಷನ್ ಕಿಟ್ ವಿತರಿಸಲಾಯಿತು. ಇಂಥ ಸಮಯದಲ್ಲಿ ಸಹಾಯ ಮಾಡೋಣ, ಅವರ ತಟ್ಟೆಯಲ್ಲಿ ಒಂದು ತಿಂಗಳು ಆಹಾರ ಇರಬೇಕು' ಎಂದು ಬರೆದುಕೊಂಡಿದ್ದಾರೆ.

    Recommended Video

    ಹಿರಿಯ ಕಲಾವಿದರನ್ನೂ‌ ಬಿಡ್ಲಿಲ್ಲ ಉಪ್ಪಿ | Filmibeat Kannada

    ಅಂದಹಾಗೆ ಕಳೆದ ತಿಂಗಳು ಏಪ್ರಿಲ್ ನಲ್ಲಿ ರೆಮೋ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಗುಣಮುಖರಾಗಿ ಚೇತರಿಸಿಕೊಂಡಿರುವ ರೆಮೋ ಸದ್ ಕಷ್ಟದಲ್ಲಿರೋರಿಗೆ ನೆರವಾಗುತ್ತಿದ್ದಾರೆ.

    English summary
    Maja Talkies fame singer Remo Distribute ration kit for Musicians, hairstylist, mason workers and people in dire need.
    Monday, May 24, 2021, 9:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X