»   » ಲಂಬೋರ್ಗಿನಿ ಇದ್ದರೂ ಮಾರುತಿ 800 ಮರೆಯಲಿಲ್ಲ ಡಿ ಬಾಸ್

ಲಂಬೋರ್ಗಿನಿ ಇದ್ದರೂ ಮಾರುತಿ 800 ಮರೆಯಲಿಲ್ಲ ಡಿ ಬಾಸ್

Posted By:
Subscribe to Filmibeat Kannada
ದರ್ಶನ ಅವರು ಲಂಬೋರ್ಗಿನಿ ಇದ್ದರೂ ಕೂಡ ಮಾರುತಿ 800 ಮರೆತಿಲ್ಲ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುಬಾರಿ ಕಾರುಗಳ ಒಡೆಯ. ಎಲ್ಲರಿಗೂ ತಿಳಿದಿರುವಂತೆ ವಿಶೇಷ ಎನ್ನಿಸುವ ಹಾಗೂ ವರ್ಲ್ಡ್ ಕ್ಲಾಸ್ ಕಾರುಗಳುಗನ್ನ ಡಿ ಬಾಸ್ ಕೊಂಡುಕೊಂಡಿದ್ದಾರೆ. ಅದೆಷ್ಟೇ ದುಬಾರಿ ಕಾರುಗಳನ್ನ ಖರೀದಿ ಮಾಡಿದ್ದರು ಕೂಡ ಲಕ್ಕಿ ಕಾರ್ ಗಳನ್ನ ಎಂದಿಗೂ ಮರೆಯೋದಕ್ಕೆ ಸಾಧ್ಯವಿಲ್ಲ ಎನ್ನುವುದು ದರ್ಶನ್ ಅವರಿಂದ ಮತ್ತೊಮ್ಮೆ ಸಾಭೀತಾಗಿದೆ.

ದರ್ಶನ್ ಅಭಿನಯದ ಮೊದಲ ಸಿನಿಮಾದ ಚಿತ್ರೀಕರಣದಲ್ಲಿ ಒಂದು ಕಾರನ್ನ ಬಳಸಲಾಗಿತ್ತು. ಸಿನಿಮಾದ ಬಹುತೇಕ ಭಾಗ ನಾಯಕ ಅದರಲ್ಲೇ ಓಡಾಡುತ್ತಿರುತ್ತಾನೆ. 16 ವರ್ಷಗಳ ಹಿಂದೆ ಮಾರುತಿ 800 ಕಾರ್ ಅಂದರೆ ತುಂಬಾನೇ ಫೇಮಸ್ ಆಗಿತ್ತು.

'ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು.!

ಮೆಜೆಸ್ಟಿಕ್ ಚಿತ್ರದಲ್ಲಿ ಬಳಕೆಯಾದ ಆ ಮಾರುತಿ ಕಾರ್ ಅನ್ನು ದರ್ಶನ್ ಇಂದಿಗೂ ಮರೆತಿಲ್ಲ. ಇತ್ತಿಚಿಗಷ್ಟೆ ಮೆಜೆಸ್ಟಿಕ್ ಚಿತ್ರ 16 ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಿರ್ಮಾಪಕರು ಅಭಿನಂದನಾ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದರು. ಆ ಸಂದರ್ಭದಲ್ಲಿ ದರ್ಶನ್ ಮತ್ತೆ ಮಾರುತಿ ಕಾರ್ ಓಡಿಸಿ ಹಳೆ ನೆನಪಿಗೆ ಜಾರಿದರು. ನಂತರ ಆ ಕಾರ್ ಏನಾಯ್ತು? ಮುಂದೆ ಓದಿ

ಡಿ ಬಾಸ್ ಗೆ 800 ಕಾರ್ ಮೇಲೆ ಆಸೆ

ದರ್ಶನ್ ಅಭಿನಯದ ಚೊಚ್ಚಲ ಸಿನಿಮಾದಲ್ಲಿ ಮಾರುತಿ 800 ಕಾರ್ ಅನ್ನು ಚಿತ್ರೀಕರಣಕ್ಕಾಗಿ ಬಳಕೆ ಮಾಡಲಾಗಿತ್ತು. ಆ ಕಾರ್ ಎಂದರೆ ದರ್ಶನ್ ಅವರಿಗೆ ಎಲ್ಲಿಲ್ಲದ ಪ್ರೀತಿ ಅಂತೆ. ಮೆಜೆಸ್ಟಿಕ್ ಸಿನಿಮಾದ 16 ವರ್ಷದ ಸಂಭ್ರಮದ ಕಾರ್ಯಕ್ರಮದಲ್ಲಿ ಮಾರುತಿ 800 ಕಾರ್ ಅನ್ನು ಮತ್ತೆ ಓಡಿಸಿ ಖುಷಿ ಪಟ್ಟಿದ್ದಾರೆ.

ದರ್ಶನ್ ಬಳಿ ಇದೆ ಮೆಜೆಸ್ಟಿಕ್ ಮಾರುತಿ ಕಾರ್

ಅಭಿನಂದನಾ ಕಾರ್ಯಕ್ರಮದಲ್ಲಿ ದರ್ಶನ್ ನಿರ್ಮಾಪಕ ರಾಮಮೂರ್ತಿ ಅವರಿಂದ ಬಳಿ ಮಾರುತಿ 800 ಕಾರನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಹಿಂದೊಮ್ಮೆ ದರ್ಶನ್ ಮಾರುತಿ 800 ಕಾರಿನ ಮಾತನಾಡಿದ್ದರಂತೆ ಅದಕ್ಕಾಗಿ ಈಗ ರಾಮಮೂರ್ತಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಮೆಜೆಸ್ಟಿಕ್ ಮಾರುತಿ ಕಾರ್ ಓಡಿಸಿದ ನಟ

ದರ್ಶನ್ ಅಭಿನಂದನಾ ಕಾರ್ಯಕ್ರಮದಲ್ಲಿ ಮಾರುತಿ 800 ಕಾರ್ ನೊಡಿ ತುಂಬಾ ಸಂತಸ ವ್ಯಕ್ತ ಪಡಿಸಿದ್ದಾರೆ. ಅದೃಷ್ಟ ಬದಲಾಯಿಸಿದ ಕಾರ್ ಎಂದು ತಾವೇ ಕಾರ್ ಹತ್ತಿ ಒಂದು ರೌಂಡ್ ಓಡಿಸಿದ್ದಾರೆ.

ದರ್ಶನ್ ಬಳಿ ಇದೆ ಐಶಾರಾಮಿ ಕಾರ್ ಗಳು

ದರ್ಶನ್ ಬಳಿ ಲಂಬೋರ್ಗಿನಿ, ಹಮ್ಮರ್, ಮಿನಿ ಕೂಪರ್, ಫಾರ್ಚೂನರ್, ಬೆಂಜ್, ರೇಂಜ್ ರೋವರ್, ಐ - 20, ಆಡಿ ಕ್ಯೂ 7 ,Porsche ಹಾಗೂ ಜಾಗ್ವಾರ್ ಕಾರ್ ಗಳಿವೆ. ಇವುಗಳ ಮಧ್ಯೆ ದರ್ಶನ್ ಹಳೆಯ ಕಾರ್ ನೆನಪನ್ನ ಮರೆತಿಲ್ಲ ಎನ್ನುವುದು ವಿಶೇಷ.

English summary
Majestic film turns 16 year. To celebrate this occasion film producer gifts Maruti 800 car to Challenging star Darshan. This is the same car which used during the film shooting.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X