For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸಿನಿರಸಿಕರಿಗೆ ಮತ್ತೊಂದು ಸಿಹಿಸುದ್ದಿ: 'ಲಕ್ಕಿಮ್ಯಾನ್' ಸ್ವಾಗತಕ್ಕೆ 'ನರ್ತಕಿ' ಸಿದ್ಧ!

  |

  ಪುನೀತ್‌ ರಾಜ್‌ಕುಮಾರ್ ನಟನೆಯ 'ಲಕ್ಕಿಮ್ಯಾನ್' ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಇರೋದು. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕೊನೆಯ ಚಿತ್ರದಲ್ಲಿ ನೆಚ್ಚಿನ ನಟನನ್ನು ದೇವರ ಅವತಾರದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 'ಲಕ್ಕಿಮ್ಯಾನ್' ಸ್ವಾಗತಕ್ಕೆ ಕೆಜಿ ರಸ್ತೆಯ ನರ್ತಕಿ ಥಿಯೇಟರ್ ಸಿದ್ಧವಾಗಿದೆ.

  ಹೌದು ಕಳೆದ 10 ತಿಂಗಳಿನಿಂದ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದ ಕೆ. ಜಿ ರಸ್ತೆಯ ಸಂತೋಷ್ ಥಿಯೇಟರ್ ಕಳೆದ ವಾರವಷ್ಟೆ ಬಾಗಿಲು ತೆರೆದಿದೆ. ಧೀರೇನ್ ರಾಮ್‌ಕುಮಾರ್ ನಟನೆಯ 'ಶಿವ 143' ಸಿನಿಮಾ ಅಲ್ಲಿ ಪ್ರದರ್ಶನ ಕಾಣುತ್ತಿದೆ. ಮುಂದಿನ ವಾರದಿಂದ ಸಂತೋಷ್ ಥಿಯೇಟರ್ ಪಕ್ಕದಲ್ಲಿರುವ ನರ್ತಕಿ ಥಿಯೇಟರ್‌ ಕೂಡ ಮತ್ತೆ ಕಾರ್ಯಾರಂಭ ಮಾಡಲಿದೆ. 'ಲಕ್ಕಿಮ್ಯಾನ್' ಸಿನಿಮಾ ನರ್ತಕಿ ಥಿಯೇಟರ್‌ನಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ.

  ತೆರೆಮೇಲೆ ರಾಕಿಭಾಯ್ ದರ್ಬಾರ್, ಟಿವಿಯಲ್ಲಿ ಸುಮಾರ್: ಕನ್ನಡ & ತೆಲುಗು TRP ಎಷ್ಟು?ತೆರೆಮೇಲೆ ರಾಕಿಭಾಯ್ ದರ್ಬಾರ್, ಟಿವಿಯಲ್ಲಿ ಸುಮಾರ್: ಕನ್ನಡ & ತೆಲುಗು TRP ಎಷ್ಟು?

  ಕಾರಣಾಂತರಗಳಿಂದ ಕೆಜಿ ರಸ್ತೆಯ ಸಂತೋಷ್ ಹಾಗೂ ನರ್ತಕಿ ಥಿಯೇಟರ್‌ಗಳು ಸಿನಿಮಾ ಪ್ರದರ್ಶನ ನಿಲ್ಲಿಸಿದ್ದವು. ಶಾಶ್ವತವಾಗಿ ಎರಡೂ ಥಿಯೇಟರ್‌ಗಳು ಸ್ತಬ್ದವಾಗಿವೆ. ಇನ್ನು ಮುಂದೆ ಅಲ್ಲಿ ಸಿನಿಮಾ ಪ್ರದರ್ಶನ ಆಗುವುದಿಲ್ಲ. ಎರಡು ಥಿಯೇಟರ್‌ಗಳನ್ನು ನೆಲಸಮ ಮಾಡಿ ಕಾಂಪ್ಲೆಕ್ಸ್ ಕಟ್ಟುತ್ತಾರೆ ಎನ್ನುವ ವದಂತಿ ಹರಿದಾಡಿತ್ತು. ಆದರೆ ಆ ವದಂತಿಗಳೆಲ್ಲಾ ಈಗ ಸುಳ್ಳಾಗಿದೆ. ಈ ವಿಷಯ ಕನ್ನಡ ಸಿನಿರಸಿಕರು ಹಾಗೂ ಕನ್ನಡ ಚಿತ್ರರಂಗಕ್ಕೆ ಸಂತಸ ತಂದಿದೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಾಕ್ಷಿಯಾಗಿದ್ದ ಅವಳಿ ಥಿಯೇಟರ್‌ಗಳು ಮತ್ತೆ ಸಿನಿರಸಿಕರನ್ನು ಕೈ ಬೀಸಿ ಕರೆಯುತ್ತಿವೆ.

  ಏನೇ ಮಲ್ಟಿಪ್ಲೆಕ್ಸ್‌ಗಳ ಆರ್ಭಟ ಇದ್ದರೂ ದೊಡ್ಡ ದೊಡ್ಡ ಸಿನಿಮಾಗಳನ್ನು ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿ ಕುಣಿದು ಕುಪ್ಪಳಿಸಿ ನೋಡುವ ಮಜಾನೇ ಬೇರೆ. ಅದರಲ್ಲೂ ಸಂತೋಷ್ ಹಾಗೂ ನರ್ತಕಿ ಥಿಯೇಟರ್‌ಗಳು ಕನ್ನಡ ಚಿತ್ರರಂಗದ ಕೇಂದ್ರ ಬಿಂದು ರೀತಿ ಇದ್ದವು. ಈ ಥಿಯೇಟರ್‌ಗಳ ಅಂಗಳದಲ್ಲಿ ಕಟೌಟ್‌ಗಳನ್ನು ನಿಲ್ಲಿಸಿ, ಹೂವಿನ ಅಲಂಕಾರ ಮಾಡಿ, ತಮಟೆ ಸದ್ದಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸುವುದನ್ನು ನೋಡುವುದೇ ಚೆಂದ. ದಶಕಗಳ ಹಿಂದೆ ಗಾಂಧಿನಗರದ ಸುತ್ತಾಮುತ್ತಾ 12ಕ್ಕೂ ಹೆಚ್ಚು ಥಿಯೇಟರ್‌ಗಳು ಇದ್ದವು. ಆದರೆ ಈಗ ಇರುವುದು ಕೇವಲ ನಾಲ್ಕು ಮಾತ್ರ. ಸಂತೋಷ್, ನರ್ತಕಿ ಬಾಗಿಲು ಮುಚ್ಚಿ ಅ ಸಂಖ್ಯೆ ಎರಡಕ್ಕೆ ಇಳಿದಿತ್ತು.

  Majestic KG Road Narthaki Theatre to Reopen With Puneeth Rajkumarss Lucky Man Movie

  ಈ ಎರಡು ಥಿಯೇಟರ್‌ ಮುಚ್ಚಿದ ಮೇಲೆ ಮೇನ್ ಥಿಯೇಟರ್‌ ಕಾನ್ಸೆಪ್ಟೆ ಹೊರಟು ಹೋಗಿತ್ತು. ಕೆಜಿ ರಸ್ತೆ ಬದಲು ಮಾಗಡಿ ರಸ್ತೆಯ ವೀರೇಶ್, ಪ್ರಸನ್ನ ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಸೆಲೆಬ್ರೇಷನ್ ಮಾಡುವಂತಾಗಿತ್ತು. ಮತ್ತೆ ಸಂತೋಷ್ ಹಾಗೂ ನರ್ತಕಿಯಲ್ಲಿ ಸಿನಿಮಾ ಪ್ರದರ್ಶನ ಶುರುವಾಗುತ್ತಿರುವುದು ಚಿತ್ರರಂಗಕ್ಕೆ ಸಂತಸ ತಂದಿದೆ. ಸಂತೋಷ್ ಥಿಯೇಟರ್‌ನಲ್ಲಿ ಅಣ್ಣಾವ್ರ ಮೊಮ್ಮಗನ ಸಿನಿಮಾ ಪ್ರದರ್ಶನ ಕಾಣುತ್ತಿದ್ದರೆ ಪಕ್ಕದಲ್ಲೇ ಇರುವ ನರ್ತಕಿ ಥಿಯೇಟರ್‌ನಲ್ಲಿ ಮುಂದಿನ ವಾರ ಅಣ್ಣಾವ್ರ ಮಗನ ಅಪ್ಪು ನಟನೆಯ 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್ ಆಗುತ್ತಿದೆ. ಅಪ್ಪು ನಟನೆಯ ಹಲವು ಸಿನಿಮಾಗಳು ಇದೇ ಥಿಯೇಟರ್‌ನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದೆ.

  English summary
  Majestic KG Road Narthaki Theatre to Reopen With Puneeth Rajkumars's Lucky Man Movie. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X