ಈ ವಾರ ರೆಬಲ್ ಸ್ಟಾರ್ 'ಅಂತ' ಸಿನಿಮಾ ಸೇರಿದಂತೆ ಮೂರು ಸಿನಿಮಾಗಳು ರಿಲೀಸ್

ಶುಕ್ರವಾದ ಬಂದೇ ಬಿಡ್ತು. ಚಿತ್ರಾಭಿಮಾನಿಗಳಿಗೆ ಮತ್ತೆ ಹಬ್ಬ ಶುರುವಾಯ್ತು. ಈ ಶುಕ್ರವಾರದ ಸಿನಿ ಸಂತೆಯಲ್ಲಿ ನಾಲ್ಕು ಸಿನಿಮಾಗಳು ತೆರೆಗೆ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ರಿಲೀಸ್ ಸಂಖ್ಯೆ ತುಸು ಕಡಿಮೆ ಆಗಿದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಪ್ರತೀ ಬಾರಿ ಏನಲ್ಲ ಅಂದ್ರು ಐದಾರು ಸಿನಿಮಾಗಳು ತೆರೆಗೆ ಬರುತ್ತಿತ್ತು.

ಆದ್ರೆ ಈ ಬಾರಿ ನಾಲ್ಕು ಸಿನಿಮಾಗಳು ತೆರೆಗೆ ಬರುತ್ತಿದೆ. ವಿಶೇಷ ಅಂದ್ರೆ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಸೂಪರ್ ಹಿಟ್ 'ಅಂತ' ಸಿನಿಮಾ ಕೂಡ ರಿ ರಿಲೀಸ್ ಆಗುತ್ತಿದೆ. ಕಳೆದ ವಾರ ಅಂದ್ರೆ ಅಂಬರೀಶ್ ಹುಟ್ಟುಹಬ್ಬದ ಸಮಯದಲ್ಲೆ 'ಅಂತ' ಸಿನಿಮಾ ರಿರಿಲೀಸ್ ಆಗಬೇಕಿತ್ತು. ಆದ್ರೆ ಈ ವಾರ ತೆರೆಗೆ ಬರುತ್ತಿದೆ.

ಇನ್ನು 'ಮಜ್ಜಿಗಿ ಹುಳಿ', 'ವಿಜಯಧ್ವಜ' ಮತ್ತು 'ಕೃಷ್ಣ ಗಾರ್ಮೆಂಟ್ಸ್' ಈ ಮೂರು ಸಿನಿಮಾಗಳು ಚಿತ್ರಮಂದಿರದಲ್ಲಿ ರಾರಾಜಿಸಲಿವೆ. ಈ ಎಲ್ಲಾ ಸಿನಿಮಾಗಳು ಸಹ ಹೊಸಬರ ಸಿನಿಮಾಗಳಾಗಿದ್ದು ಸದ್ಯ ರಂಜಾನ್ ಮುಗಿಸಿಕೊಂಡು ಚಿತ್ರಮಂದಿರದ ಬಾಗಿಲು ತಟ್ಟುತ್ತಿವೆ. ಮುಂದೆ ಓದಿ..

ಈ ವಾರ ಚಿತ್ರಮಂದಿರಗಳಲ್ಲಿ 'ಮಜ್ಜಿಗೆ ಹುಳಿ'

ಈ ವಾರ ಚಿತ್ರಮಂದಿರಗಳಲ್ಲಿ 'ಮಜ್ಜಿಗೆ ಹುಳಿ'

ಮಜ್ಜಿಗೆ ಹುಳಿ ವಿಭಿನ್ನ ಟೈಟಲ್ ಮೂಲಕವೇ ಚಿತ್ರಾಭಿಮಾನಿಗಳ ಗಮನ ಸಳೆದಿರುವ ಚಿತ್ರ. ದೀಕ್ಷಿತ್ ನಾಯಕನಾಗಿ ಕಾಣಿಸಿಕೊಂಡರೆ ನಾಯಕಿಯಾಗಿ ರೂಪಿಕಾ ಮಿಂಚಿದ್ದಾರೆ. ರವೀಂದ್ರ ಕೊಟಕಿ ಆಕ್ಷನ್ ಕಟ್ ಹೇಳಿರುವ 'ಮಜ್ಜಿಗೆ ಹುಳಿ' ಜೂನ್ 7ಕ್ಕೆ ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ. ಪಕ್ಕ ಮನರಂಜನಾತ್ಮಕ ಚಿತ್ರವಾಗಿದ್ದು ಹಾಸ್ಯ, ಸೆಂಟಿಮೆಂಟ್ ಎಲ್ಲವು ಈ ಚಿತ್ರದಲ್ಲಿ ಇರುತ್ತಂತೆ. ಹೊಸದಾಗಿ ಮದುವೆಯಾದ ನವದಂಪತಿಗಳ ಕತೆ ಇದಾಗಿದೆಯಂತೆ.

ರಿಲೀಸ್ ಆಗ್ತಿದೆ 'ಕೃಷ್ಣ ಗಾರ್ಮೆಂಟ್ಸ್'

ರಿಲೀಸ್ ಆಗ್ತಿದೆ 'ಕೃಷ್ಣ ಗಾರ್ಮೆಂಟ್ಸ್'

ಕೃಷ್ಣ ಗಾರ್ಮೆಂಟ್ಸ್ ಟ್ರೈಲರ್ ಮೂಲಕ ಚಿತ್ರಾಭಿಮಾನಿಳ ಗಮನ ಸೆಳೆಯದಿರುವ ಚಿತ್ರ. ಸಿದ್ದು ಪೂರ್ಣಚಂದ್ರ ಸಾರಥ್ಯದಲ್ಲಿ ಮೂಡಿ ಬಂದಿರುವ 'ಕೃಷ್ಣ ಗಾರ್ಮೆಂಟ್ಸ್' ನಲ್ಲಿ ಬಾಸ್ಕರ್ ನೀನಾಸಂ ನಾಕಯಕನಾಗಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ನಿರ್ದೇಶನ ಮಾಡುತ್ತಿದ್ದ ಪೂರ್ಣಚಂದ್ರ

'ಕೃಷ್ಣ ಗಾರ್ಮೆಂಟ್ಸ್' ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಹುತೇಕ ಕಿರುತೆರೆಯ ಕಲಾವಿದರು ಕಾಣಿಸಿಕೊಂಡಿದ್ದಾರೆ.

ಮಕ್ಕಳ ಚಿತ್ರ 'ವಿಜಯಧ್ವಜ'

ಮಕ್ಕಳ ಚಿತ್ರ 'ವಿಜಯಧ್ವಜ'

ವಿಜಯಧ್ವಜ ಮಕ್ಕಳ ಸಿನಿಮಾ. ಶ್ರೀನಾಥ್ ವಸಿಷ್ಠ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ. ಶಿಕ್ಷಕರ ಜೊತ ಹಂಪಿಯೆ ಪ್ರವಾಸಕ್ಕೆಂದು ಹೋಗುವ ನಾಲ್ಕು ಮಕ್ಕಳ ಕಥೆ. ಹಂಪಿಗೆ ಹೋದವರಿಗೆ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಸೈನಿಕರ ಪರಿಚಯವಾಗಿ. ಅವರ ಕಥೆಗಳನ್ನು ಕೇಳಿಕೊಂಡು ರಾಷ್ಟ್ರ ರಕ್ಷಣೆಗೆ ಪಣ ತೊಡುವ ಮಕ್ಕಳ ಕಥೆ. ತನ್ಮಯಿ ಎಸ್, ವಸಿಷ್ಠ, ವಿಜಯ್ ಬಾಸ್ಕರ್, ಮಾಸ್ಟರ್ ಲೋಕೇಶ್, ಮಾಸ್ಟರ್ ಭುವನ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

ಮತ್ತೆ ಬರ್ತಿದೆ 'ಅಂತ'

ಮತ್ತೆ ಬರ್ತಿದೆ 'ಅಂತ'

ರೆಬೆಲ್ ಸ್ಟಾರ್ ಅಂಬರೀಶ್ ಅಬಿನಯದ ಸೂಪ್ ಹಿಟ್ ಅಂತ ಸಿನಿಮಾ ಮರು ಬಿಡಿಗಡೆಯಾಗುತ್ತಿದೆ. ಎಲ್ಲವು ಅಂದುಕೊಂಡತೆ ಆಗಿದ್ರೆ ಅಂತ ಕಳೆದ ತಿಂಗಳು ಅಂಬರೀಶ್ ಹುಟ್ಟುಹಬ್ಬದ ಸಮಯದಲ್ಲಿ ರಿಲೀಸ್ ಆಗಬೇಕಿತ್ತು. ಆದ್ರೀಗ ಜೂನ್ 7ಕ್ಕೆ ತೆರೆಗೆ ಬರುತ್ತಿದೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾ. ನಟಿ ಲಕ್ಷ್ಮಿ ಮತ್ತು ಲತಾ ನಾಯಕಿಯಾರಾಗಿ ಮಿಂಚಿದ್ದಾರೆ. ಈಗ ಹೊಸ ತಂತ್ರಜ್ಞಾನದೊಂದಿದೆ ಹೊಸ ರೂಪ ಪಡೆದು ಮತ್ತೆ ಚಿತ್ರಮಂದಿರಗಳಲ್ಲಿ ಆರ್ಭಟಿಸಲಿದೆ.

More from Filmibeat

English summary
Majjige Huli, Krishna Garments, Vijayadwaja movies all set to release in June 7th. Rebel star Ambarish starrer super hit Antha kannada movie release in june 7th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X