ಜೂನ್ 7ರಿಂದ ಮಜ್ಜಿಗೆಹುಳಿ ಮೊದಲ ರಾತ್ರಿ ಶುರು ಗುರೂ!

ಒಂದೇ ಕೋಣೆಯಲ್ಲಿ 28 ಪಾತ್ರಗಳೊಂದಿಗೆ ಚಿತ್ರಿಕರಿಸಲಾಗಿರುವ 'ಮಜ್ಜಿಗೆಹುಳಿ' ಚಿತ್ರದ ಸೆನ್ಸಾರ್ ಕಾರ್ಯ ಮುಕ್ತಾಯವಾಗಿದೆ. ಯಾವುದೇ ಕಟ್ಸ್-ಮ್ಯೂಟ್ ಇಲ್ಲದೇ U/A ಸರ್ಟಿಫಿಕೇಟ್ ಪಡೆದುಕೊಂಡಿದೆ. ಹೊಸದಾಗಿ ಮದುವೆಯಾದ ಜೋಡಿಯೊಂದು ಮೊದಲರಾತ್ರಿಗೆಂದು ಗೋವಾಗೆ ಹೋದಾಗ ಆ ರಾತ್ರಿ ಅವರ ಜೀವನದಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯುತ್ತದೆ ಎಂಬುವುದೇ ಒಂದು ಸಾಲಿನ ಕಥೆ.

'ಇದು ಯಾರ ಜೀವನದ ಮೊದಲರಾತ್ರಿಯ ಕಥೆಯೂ ಆಗಿರಬಹುದು. ಮೊದಲರಾತ್ರಿ ಮೂಲತಃ ಒಂದು ಬೆಚ್ಚನೆಯ ಕನಸು, ಜೀವನದಲ್ಲಿ ಅದೊಂದು ಮರೆಯಲಾಗದ ಮಧುರವಾದ ರಾತ್ರಿ. ಮದುವೆಯಾಗುವ ಪ್ರತಿ ಜೋಡಿಗೂ ಅದೊಂದು ನಿರೀಕ್ಷೆಯ ರಾತ್ರಿ. ಮದುವೆಯ ನಂತರವೂ ಅದು ಎಂದು ಮರೆಯದೇ ನೆನಪಿನಲ್ಲಿ ಉಳಿದುಬಿಡುವ ರಾತ್ರಿ. ಇಂತಹ ಒಂದು ರಾತ್ರಿಯ ಸುತ್ತಲ್ಲೂ ಮಜ್ಜಿಗೆಹುಳಿಯ ಕಥೆ ನಡೆಯುತ್ತದೆ. ಇಲ್ಲಿ ಹಾಸ್ಯವಿದೆ, ಹಾಗಂತ ಯಾವುದೇ ಆಶ್ಲೀಲವಾದ ದೃಶ್ಯಗಳಿಲ್ಲ. ಮೊದಲರಾತ್ರಿಯ ಬೆಚ್ಚನೆಯ ಭಾವೆನಗಳನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ' ಎನ್ನುತ್ತಾರೆ ನಿರ್ದೇಶಕ ರವೀಂದ್ರ ಕೊಟಕಿ.

Majjigehuli film set to release on June 07

ಮೊದಲರಾತ್ರಿಯ ಕೋಣೆಯೊಂದರಲ್ಲೇ ಒಟ್ಟು 28 ಪಾತ್ರಗಳೊಂದಿಗೆ ಮಜ್ಜಿಗೆಹುಳಿಯನ್ನು ನಿರ್ದೇಶಕರ ರವೀಂದ್ರ ಕೊಟಕಿ ಸಿದ್ದಪಡಿಸಿದ್ದಾರೆ. ಮಜ್ಜಿಗೆಹುಳಿಯ ಸವಿರುಚಿಯನ್ನು ಕೆಲವೇ ದಿನಗಳಲ್ಲಿ ಸಿನಿಪ್ರೇಕ್ಷಕರು ಸವಿಯಬಹುದು. ಜೂನ್ 7ರಂದು ಮಜ್ಜಿಗೆಹುಳಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಾಯಕನಾಗಿ ದಿಕ್ಷಿತ್ ವೆಂಕಟೇಶ್ ನಟಿಸಿದ್ದು, ನಾಯಕಿಯಾಗಿ ರೂಪಿಕಾ ಜೊತೆಯಾಗಿದ್ದಾರೆ. ಇನ್ನು ಸುಚೇಂದ್ರ ಪ್ರಸಾದ್, ಮೋಹನ್‍ಜುನೇಜಾ, ಮಿಮಿಕ್ರಿ ದಯಾನಂದ್, ರಮೇಶ್‍ಭಟ್, ತರಂಗ ವಿಶ್ವ, ಕೆಂಪೇಗೌಡ, ಕುರಿಸುನೀಲ್, ಯತಿರಾಜ್, ಶಂಕರ್ ನಾರಾಯಣ್‍ರಂತ ನುರಿತ ಕಲಾವಿದರ ದಂಡು ಈ ಸಿನಿಮಾದಲ್ಲಿದ್ದು. ಈ ಚಿತ್ರವನ್ನು ರಾಮಚಂದ್ರ ಎಸ್ ನಿರ್ಮಿಸಿದ್ದು, ರಾಘುರಾಜು ವೈ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

More from Filmibeat

English summary
Roopika, Deekshith Venkatesh starrer Majjigehuli Kannada film is set to release on June 07.This comedy film directed by Ravindra Kotaki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X