ನವಜೋಡಿಯ ಫಸ್ಟ್ ನೈಟ್ ರೂಮಲ್ಲಿ 'ಮಜ್ಜಿಗೆಹುಳಿ' ಒಳ್ಳೆ ಬಾಡೂಟ ಗುರೂ

ಮಜ್ಜಿಗೆಹುಳಿ ಎಂಬ ಖಾದ್ಯ ಸಿನಿಮಾ ಮುಂದಿಯ ಕೈಗೆ ಸಿಕ್ಕು ಒಳ್ಳೆ ಬಾಡೂಟ ಗುರೂ! ಅಂತ ಕರೆಸಿಕೊಳ್ಳಲು ಸಿದ್ದವಾಗಿದೆ. ಹೌದು, ಮಜ್ಜಿಗೆಹುಳಿ ಎಂಬ ಸಿನಿಮಾಗೆ ಟ್ಯಾಗ್ ಲೈನ್ ಬಂದು ಒಳ್ಳೆ ಬಾಡೂಟ ಗುರೂ!

ಇಡೀ ಸಿನಿಮಾ ಕೇವಲ ಒಂದೇ ಕೋಣೆಯಲ್ಲಿ ಇಪ್ಪತ್ತೆಂಟು ಪಾತ್ರಧಾರಿಗಳೊಂದಿಗೆ ಈ ಚಿತ್ರವನ್ನು ಚಿತ್ರಕರಿಸಲಾಗಿದೆ. ಸಂಪೂರ್ಣ ಹೊಸತನದೊಂದಿಗೆ ಪ್ರಯೋಗತ್ಮಾಕವಾದ ಮಜ್ಜಿಗೆಹುಳಿ-ಒಳ್ಳೆ ಬಾಡೂಟವಾಗಿ ಜನರ ಎದುರಿಗೆ ಬರಲು ಸಿದ್ದವಾಗುತ್ತಿದೆ. ಡಿಸೆಂಬರ್‍ನಲ್ಲಿ ಮಜ್ಜಿಗೆಹುಳಿಯ ರುಚಿಯನ್ನು ಕನ್ನಡ ಪ್ರೇಕ್ಷ್ಷಕರು ಸವಿಯಬಹುದು.

ಮಜ್ಜಿಗೆಹುಳಿ ವಿಶೇಷತೆಗಳನ್ನು ಫಿಲ್ಮಿಬಿಟ್ ಜೊತೆಗೆ ಹಂಚಿಕೊಂಡ ನಿರ್ದೇಶಕ ರವೀಂದ್ರ ಕೊಟಕಿ ವಿವರಿಸಿದ್ದು ಹೀಗೆ 'ಮೊದಲರಾತ್ರಿ ಅದನ್ನು ಎರಡು ರೀತಿಯಲ್ಲಿ ನೋಡಬೇಕಾಗುತ್ತದೆ. ಅದು ಮದುವೆಯಾಗದವರಿಗೆ ಅದು ನಾಳೆ ನನಸಾಗಲಿರುವ ಕನಸು, ಅದೇ ಮದುವೆಯಾದವರಿಗೆ ಅದು ಅವಿಸ್ಮರಣೀಯ ರಾತ್ರಿ.

ಹೊಸದಾಗಿ ಮದುವೆಯಾದ ನವಜೋಡಿಯೊಂದು ಮೊದಲರಾತ್ರಿಯನ್ನು ಜೀವನದ ಅತ್ಯಂತ ಮಧುರರಾತ್ರಿಯಾಗಿಸಿಕೊಳ್ಳಲು ಮದುವೆ ಮನೆಯ ಗದ್ದಲದಿಂದ ದೂರವಾಗಿ ಗೋವಾದಲ್ಲಿ ಆ ರಾತ್ರಿಯನ್ನು ಕಳೆಯುವುದ್ದಕ್ಕೆ ಮುಂದಾಗುತ್ತಾರೆ. ಹೀಗೆ ಮುಂದಾದ ಆ ಜೋಡಿಯ ಜೀವನದಲ್ಲಿ ಆ ರಾತ್ರಿ ಏನೆಲ್ಲಾ ಘಟನಾವಳಿಗೂ ನಡೆಯುತ್ತದೆ ಎಂಬುವುದೇ ಮಜ್ಜಿಗೆಹುಳಿಯ ಒನ್‍ಲೈನ್ ಕಥೆ' ಎನ್ನುತ್ತಾರೆ.

ಕಥಾನಿರೂಪಕ ನಿರ್ದೇಶಕ ಯೋಗರಾಜ್‍ ಭಟ್‍

ಕಥಾನಿರೂಪಕ ನಿರ್ದೇಶಕ ಯೋಗರಾಜ್‍ ಭಟ್‍

ಕಥಾನಿರೂಪಕನ ಪಾತ್ರಕ್ಕೆ ಖ್ಯಾತ ನಿರ್ದೇಶಕರಾದ ಯೋಗರಾಜ್‍ ಭಟ್‍ ಅವರು ವಾಯಿಸ್‍ ಓವರ್ ನೀಡಿದ್ದಾರೆ. ಚಿತ್ರದ ಆರಂಭದಲ್ಲಿ ಹಾಗೇ ಕೊನೆಯಲ್ಲಿ ನಿರೂಪಕನಿಂದಲ್ಲೇ ಸಿನಿಮಾದ ಮುನ್ನುಡಿ, ಬೆನ್ನುಡಿಗಳ ಧ್ವನಿಸುತ್ತದೆ. ಇನ್ನು ಈ ಚಿತ್ರದಲ್ಲಿ ಟಗುರು ಖ್ಯಾತಿಯ ಅಂಥೋಣಿ ದಾಸ್ ಮೊದಲಬಾರಿಗೆ ಡ್ಯುಯೆಟ್ ಹಾಡಿದ್ದಾರೆ. ಜೋಗಿ ಸುನಿತಾ ಜೊತೆಗೂಡಿ 'ಮಚ್ಚಿ ಮಚ್ಚಿ...' ಎಂಬ ಟಂಪ್ಪಾಂಗುಚ್ಚಿ ಹಾಡಿಗೆ ಧ್ವನಿಯಾಗಿದ್ದಾರೆ.

ತಂಡಕ್ಕೆ ಶುಭ ಕೋರಿ ನಟ, ನಿರ್ದೇಶಕ ಜೆಡಿ ಚಕ್ರವರ್ತಿ

ತಂಡಕ್ಕೆ ಶುಭ ಕೋರಿ ನಟ, ನಿರ್ದೇಶಕ ಜೆಡಿ ಚಕ್ರವರ್ತಿ

ಇನ್ನು ಈ ಚಿತ್ರದ ಬಗ್ಗೆ ತಿಳಿದು ಖ್ಯಾತ ನಟ-ನಿರ್ದೇಶಕ ಜೆ.ಡಿ. ಚಕ್ರವರ್ತಿ ಒಂದು ದಿನ ನೇರವಾಗಿ ಚಿತ್ರಿಕರಣ ಸ್ಥಳಕ್ಕೆ ಭೇಟಿ ಕೊಟ್ಟು ಸುಮಾರು ಒಂದು ಗಂಟೆ ಕಾಲ ಚಿತ್ರತಂಡದೊಂದಿಗೆ ಕಳೆದು, ಕೆಲವು ದೃಶ್ಯಗಳನ್ನು ವೀಕ್ಷಿಸಿ ಮೆಚ್ಚಿಗೆಹುಳಿ ತಂಡಕ್ಕೆ ಶುಭ ಕೋರಿದ್ದಾರೆ. ಸದ್ಯಕ್ಕೆ ಇಷ್ಟ ವಿಶೇಷಗಳನ್ನು ಹೊರಹಾಕಿರುವ ನಿರ್ದೇಶಕರು ಮತ್ತಷ್ಟು ವಿಶೇಷಗಳನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ.

ಮೊದಲರಾತ್ರಿಯಲ್ಲಿ ತಾರಾಗಣ

ಮೊದಲರಾತ್ರಿಯಲ್ಲಿ ತಾರಾಗಣ

ಖ್ಯಾತ ನಟಿ ರೂಪಿಕಾ ಹಾಗೂ ಯುವನಟ ದಿಕ್ಷಿತ್ ವೆಂಕಟೇಶ್ ಜೋಡಿಯ ಮಜ್ಜಿಗೆಹುಳಿಯಂತ ಮೊದಲರಾತ್ರಿಯಲ್ಲಿ ರಮೇಶ್‍ಭಟ್, ಮಿಮಿಕ್ರಿ ದಯಾನಂದ್, ಸುಚೇಂದ್ರ ಪ್ರಸಾದ್, ಮೋಹನ್‍ಜುನೇಜಾ, ತರಂಗ ವಿಶ್ವ, ಕೆಂಪೇಗೌಡ, ಕುರಿಸುನೀಲ, ಯತಿರಾಜ್, ಕುರಿಸುನೀಲ, ಶಂಕರ್ ನಾರಾಯಣ್‍ರಂತ ನುರಿತ ಕಲಾವಿದರು ಬಾಡೂಟದ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ

ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ

ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಎಸ್.ಎಲ್.ವಿ ಬ್ಯಾನರ್ ಅಡಿಯಲ್ಲಿ ಎಸ್. ರಾಮಚಂದ್ರ ನಿರ್ಮಿಸುತ್ತಿದ್ದು. ಎಂ ಸಂಜೀವ್‍ ರಾವ್‍ ರವರ ಸಂಗೀತ, ಸಂಜೀವ್‍ರೆಡ್ಡಿಯವರ ಸಂಕಲನವಿದ್ದು. ಮಹದೇವ್ ಹಾಗೂ ಶ್ಯಾಮ್ ಸಿಂಧುನೂರು ಛಾಯಾಗ್ರಾಕರಿಗೆ ಕೆಲಸ ಮಾಡಿದ್ದಾರೆ. ವೈ ರಘುರಾಜು ಕಾರ್ಯಕಾರಿ ನಿರ್ಮಾಪಕರಾಗಿ ವ್ಯವಹಾರಿಸಿದ್ದಾರೆ. ಒಟ್ಟಲ್ಲಿ ಕೆಲವೇ ವಾರಗಳಲ್ಲಿ ಮಜ್ಜಿಗೆಹುಳಿ ಸಿನಿರಸಿಕರಿಗೆ ಬಾಡೂಟದ ಅನುಭವ ನೀಡಲು ಬರುತ್ತಿದೆ.

More from Filmibeat

English summary
Majjigehuli Kannada Comedy Film directed by Ravi Kotaki is set to release soon. Film has Roopika and Dikkshit Venkatesh in the lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X