For Quick Alerts
  ALLOW NOTIFICATIONS  
  For Daily Alerts

  ಫ್ಯಾಂಟಮ್ ಅಪ್‌ಡೇಟ್: ಕಿಚ್ಚನ ಅಭಿಮಾನಿಗಳಿಗೆ ಕಾದಿದೆ ಭರ್ಜರಿ ಸುದ್ದಿ

  |

  ಕಿಚ್ಚ ಸುದೀಪ್ ಅಭಿನಯದ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ಮುಗಿಸಿದೆ ಎನ್ನುವ ವಿಚಾರ ಬಿಟ್ಟು ಬಿಡುಗಡೆ, ಟೀಸರ್, ಫಸ್ಟ್ ಲುಕ್ ಇದ್ಯಾವುದರ ಕುರಿತು ಅಪ್‌ಡೇಟ್‌ ಸಿಕ್ಕಿರಲಿಲ್ಲ. ಇದೀಗ, ಕಿಚ್ಚನ ಅಭಿಮಾನಿಗಳಿಗೆ ಫ್ಯಾಂಟಮ್ ಚಿತ್ರತಂಡ ಭರ್ಜರಿ ಸುದ್ದಿ ನೀಡಿದೆ.

  ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ | Filmibeat Kannada

  ಜನವರಿ 21 ರಂದು ಫ್ಯಾಂಟಮ್ ಸಿನಿಮಾಗೆ ಸಂಬಂಧಿಸಿದಂತೆ ಬಹುಮುಖ್ಯವಾದ ಪ್ರಕಟಣೆಯೊಂದನ್ನು ಮಾಡಲಿದೆ. ಈ ಕುರಿತು ನಿರ್ದೇಶಕ ಅನೂಪ್ ಭಂಡಾರಿ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಜನವರಿ 21ರ ಸಂಜೆ 4.03 ಗಂಟೆಗೆ ಫ್ಯಾಂಟಮ್ ಚಿತ್ರದ ಮುಖ್ಯವಾದ ಪ್ರಕಟಣೆ ಇದೆ ಎಂದು ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. #PHANTOMUPDATEJAN21 ಎಂಬ ಹ್ಯಾಷ್‌ಟ್ಯಾಗ್ ಸಹ ಪ್ರಮೋಟ್ ಮಾಡಿದ್ದಾರೆ. ಮುಂದೆ ಓದಿ....

  ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್

  ಏನಿರಬಹುದು ಅಪ್‌ಡೇಟ್?

  ಏನಿರಬಹುದು ಅಪ್‌ಡೇಟ್?

  ಫ್ಯಾಂಟಮ್ ಚಿತ್ರದ ಯಾವ ವಿಚಾರವನ್ನು ನಿರ್ದೇಶಕರು ಹೇಳಲಿದ್ದಾರೆ ಎಂಬ ಕುತೂಹಲ, ಕಾತುರ ಅಭಿಮಾನಿಗಳಲ್ಲಿ ಕಾಡ್ತಿದೆ. ಸಹಜವಾಗಿ ಚಿತ್ರದ ರಿಲೀಸ್ ದಿನಾಂಕ ಹೇಳಬಹುದಾ ಎಂಬ ನಿರೀಕ್ಷೆ ಹೆಚ್ಚಿದೆ. ಏಕಂದ್ರೆ ಸ್ಟಾರ್ ನಟರ ಸಿನಿಮಾಗಳು ಒಂದೊಂದೆ ಬಿಡುಗಡೆ ದಿನಾಂಕ ಘೋಷಿಸಿ ಡೇಟ್ ಲಾಕ್ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಫ್ಯಾಂಟಮ್ ಸಹ ರಿಲೀಸ್ ದಿನಾಂಕ ಘೋಷಿಸಬಹುದು ಎಂಬ ನಿರೀಕ್ಷೆ ಇದೆ.

  ಪ್ಯಾನ್ ಇಂಡಿಯಾ ಕುರಿತು ಮಾಹಿತಿ

  ಪ್ಯಾನ್ ಇಂಡಿಯಾ ಕುರಿತು ಮಾಹಿತಿ

  ಕನ್ನಡ ಸಿನಿಮಾಗಳು ಫ್ಯಾನ್ ಇಂಡಿಯಾ ಭಾಷೆಗಳಲ್ಲಿ ರಿಲೀಸ್ ಆಗುವ ಟ್ರೆಂಡ್ ಹೆಚ್ಚಾಗಿದೆ. ಪೊಗರು, ಯುವರತ್ನ, ರಾಬರ್ಟ್, ಕೆಜಿಎಫ್ ಎಲ್ಲವೂ ಬಹುಭಾಷೆಯಲ್ಲಿ ಬರ್ತಿದೆ. ಈ ನಿಟ್ಟಿನಲ್ಲಿ ಫ್ಯಾಂಟಮ್ ಸಿನಿಮಾ ಸಹ ಬಹುಭಾಷೆಯಲ್ಲಿ ತೆರೆಗೆ ಬರಬಹುದಾ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

  51ನೇ ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್

  ಟೈಟಲ್ ಬದಲಾವಣೆ ಇರಬಹುದಾ?

  ಟೈಟಲ್ ಬದಲಾವಣೆ ಇರಬಹುದಾ?

  ಫ್ಯಾಂಟಮ್ ಚಿತ್ರದ ಶೀರ್ಷಿಕೆ ವಿವಾದದಲ್ಲಿದೆ ಎಂಬ ಸುದ್ದಿ ಇದೆ. ಫ್ಯಾಂಟಮ್ ಟೈಟಲ್ ಹಕ್ಕು ಬೇರೆ ನಿರ್ಮಾಣ ಸಂಸ್ಥೆ ಬಳಿಯಿದೆ. ಇದು ಅನೂಪ್ ಭಂಡಾರಿಗೆ ಸಿಕ್ಕಿಲ್ಲ. ಹಾಗಾಗಿ, ಚಿತ್ರದ ಟೈಟಲ್ ಬದಲಾವಣೆ ಮಾಡುವ ಕುರಿತು ಚಿತ್ರತಂಡ ನಿರ್ಧರಿಸಿದೆ. ಬಹುಶಃ ಹೊಸ ಟೈಟಲ್ ಘೋಷಣೆ ಮಾಡಬಹುದು ಎನ್ನಲಾಗಿದೆ.

  ಫ್ಯಾಂಟಮ್ ಚಿತ್ರದ ಕುರಿತು

  ಫ್ಯಾಂಟಮ್ ಚಿತ್ರದ ಕುರಿತು

  ಫ್ಯಾಂಟಮ್ ಸಿನಿಮಾದಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ನಿರೂಪ್ ಭಂಡಾರಿ ಸಹ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕ್ ಮಂಜು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  English summary
  A biggest announcement coming from team Phantom team on Jan 21st. what's your best guess?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X