ತೆರೆಮೇಲೆ ಯೋಧ ಸಂದೀಪ್ ಉನ್ನಿಕೃಷ್ಣನ್ ಜೀವನ: 'ಮೇಜರ್' ಫಸ್ಟ್ ಲುಕ್
Recommended Video

2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ ಎನ್ ಎಸ್ ಜಿ ಕಮಾಂಡೋ ಆಗಿದ್ದ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾಗಿದ್ದರು. ವೀರ ಯೋಧ ಸಂದೀಪ್ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಹನ್ನೊಂದು ವರ್ಷ ಆಗಿವೆ.
ಇದೀಗ, ಸಂದೀಪ್ ಅವರ ಬಗ್ಗೆ ಸಿನಿಮಾ ಬರ್ತಿದೆ. ತೆಲುಗು ಮತ್ತು ಹಿಂದಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಕುರಿತು, ಅವರ ಜೀವನವನ್ನ ಸ್ಫೂರ್ತಿಯಾಗಿಸಿಕೊಂಡು 'ಮೇಜರ್' ಎಂಬ ಸಿನಿಮಾ ಮಾಡಲಾಗುತ್ತಿದೆ.

'ಕ್ಷಣಂ' ಮತ್ತು 'ಗೂಢಚಾರಿ' ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಅದ್ವಿ ಶೇಶಾ 'ಮೇಜರ್' ಹೆಸರಿನಲ್ಲಿ ಈ ಸಿನಿಮಾ ಮಾಡ್ತಿದ್ದು, ಇಂದು ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲಾಗಿದೆ.
ಸಂದೀಪ್ ಉನ್ನಿಕೃಷ್ಣನ್ ಸ್ಮಾರಕಫಲಕ ಧ್ವಂಸ: ಸಂಸದ ರಾಜೀವ್ ಆಕ್ರೋಶ
ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಬರ್ತಿದ್ದು, ಸೋನಿ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಜೊತೆಗೆ ತೆಲುಗು ನಟ ಮಹೇಶ್ ಬಾಬು ಸಹ ನಿರ್ಮಾಪಕರಾಗಿ ಹಣ ಹೂಡುತ್ತಿದ್ದಾರೆ. ಈಗಾಗಲೇ ಹಿಂದಿಯಲ್ಲಿ 26/11 ಹೆಸರಿನಲ್ಲೇ ಸಿನಿಮಾ ಬಂದಿದೆ.

ಕೋಲ್ಕತ್ತಾದಲ್ಲಿ 1977 ಮಾರ್ಚ್ 15 ರಂದು ಜನಿಸಿದ ಸಂದೀಪ್ ಬೆಂಗಳೂರಿನ ಹೆಬ್ಬಾಳ ಸೇನಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು. 31 ನೇ ವಯಸ್ಸಿನಲ್ಲಿ ಪ್ರಾಣ ತ್ಯಾಗ ಮಾಡಿದ ಸಂದೀಪ್ 9 ವರ್ಷಗಳ ಕಾಲ ಭಾರತದ ಸೇನೆಯ ಭಾಗವಾಗಿ ದುಡಿದಿದ್ದರು. ಅವರ ಸೇವೆಗೆ ಅಶೋಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


Click it and Unblock the Notifications











