For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್ ಸಿನಿಮಾದಲ್ಲಿ ಕೆಲಸ ಮಾಡಲು ಇಲ್ಲಿದೆ ಸುವರ್ಣಾವಕಾಶ

  |

  ನಟ ಪುನೀತ್ ರಾಜ್‌ಕುಮಾರ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶವೊಂದು ಬಂದಿದೆ.

  ಪುನೀತ್ ರಾಜ್‌ಕುಮಾರ್ ನಟಿಸಲಿರುವ ಹೊಸ ಸಿನಿಮಾವನ್ನು 'ಲೂಸಿಯಾ', 'ಯು-ಟರ್ನ್' ಖ್ಯಾತಿಯ ಪವನ್ ಕುಮಾರ್ ನಿರ್ದೇಶಿಸುತ್ತಿದ್ದು, ಈ ಸಿನಿಮಾದ ನಿರ್ದೇಶಕ ತಂಡದಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡಿದ್ದಾರೆ ಪವನ್ ಕುಮಾರ್. ಆದರೆ ಸಿನಿಮಾ ತಂಡದ ಭಾಗವಾಗಲು ಸ್ಪರ್ಧೆಯೊಂದರಲ್ಲಿ ಜಯಶೀಲರಾಗಬೇಕಿದೆ.

  ಇಂದು ಫೇಸ್‌ಬುಕ್‌ನಲ್ಲಿ ವಿಡಿಯೋ ಪ್ರಕಟಿಸಿರುವ ಪವನ್ ಕುಮಾರ್, 'ಯಾರಿಗೆ ಪುನೀತ್ ಹಾಗೂ ತಮ್ಮ ಕಾಂಬಿನೇಶನ್‌ನ ಸಿನಿಮಾದ ಭಾಗವಾಗುವ ಆಸಕ್ತಿಯಿದೆಯೋ ಅವರು ಹಿಂದಿ ಹೇರಿಕೆ ಅಥವಾ ಬೇರೆ ಭಾಷೆ ಹೇರಿಕೆ ಕುರಿತಾಗಿ ಹತ್ತು ನಿಮಿಷದ ಕಿರು ಚಿತ್ರ ಮಾಡಿ ಕಳಿಸಿ' ಎಂದು ಸ್ಪರ್ಧೆಯೊಂದನ್ನು ಆಯೋಜಿಸಿದ್ದಾರೆ.

  'ಕೊರೊನಾ ಸಮಯ ಇರುವ ಕಾರಣ ಹೆಚ್ಚು ಹೊರಗೆ ಎಲ್ಲೂ ಹೋಗದೆ ಕಡಿಮೆ ಸಂಪನ್ಮೂಲ ಬಳಸಿಕೊಂಡು ಹೆಚ್ಚು ಸೃಜನಾತ್ಮಕವಾಗಿ ಹತ್ತು ನಿಮಿಷದ ಕಿರು ಚಿತ್ರ ಮಾಡಿ ಕಳಿಸಿ, ಒಟ್ಟು ಎಂಟು ಕಿರುಚಿತ್ರವನ್ನು ನಾವು ಆಯ್ಕೆ ಮಾಡಲಿದ್ದೇವೆ. ಮೊದಲ ನಾಲ್ಕು ಉತ್ತಮ ಕಿರುಚಿತ್ರ ಮಾಡಿದವರನ್ನು ನಮ್ಮ ನಿರ್ದೇಶಕ ತಂಡಕ್ಕೆ ಸೇರಿಸಿಕೊಳ್ಳಲಿದ್ದೇನೆ' ಎಂದಿದ್ದಾರೆ ಪವನ್.

  ನಾಲ್ಕು ಕಿರುಚಿತ್ರಕ್ಕೆ 25,000 ಬಹುಮಾನ

  ನಾಲ್ಕು ಕಿರುಚಿತ್ರಕ್ಕೆ 25,000 ಬಹುಮಾನ

  ಉಳಿದ ನಾಲ್ಕು ಕಿರು ಚಿತ್ರಕ್ಕೆ ತಲಾ 25,000 ಬಹುಮಾನವನ್ನೂ ಕೊಡುವುದಾಗಿ ಘೋಷಿಸಿದ್ದಾರೆ ಪವನ್ ಕುಮಾರ್. ಕಿರುಚಿತ್ರವನ್ನು ಯಾವ ವಿಳಾಸಕ್ಕೆ ಕಳುಹಿಸಬೇಕು ಎಂಬುದನ್ನು ಏಪ್ರಿಲ್ 28ರಂದು ಇದೇ ರೀತಿ ವಿಡಿಯೋ ಮಾಡಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ ಪವನ್.

  'ಕನ್ನಡದಲ್ಲಿ' ವಿಷಯ ಆಧರಿಸಿದ ಕಿರುಚಿತ್ರ ಕಡ್ಡಾಯ

  'ಕನ್ನಡದಲ್ಲಿ' ವಿಷಯ ಆಧರಿಸಿದ ಕಿರುಚಿತ್ರ ಕಡ್ಡಾಯ

  ಕಿರುಚಿತ್ರವು ಕಡ್ಡಾಯವಾಗಿ 'ಕನ್ನಡದಲ್ಲಿ' ಎಂಬ ವಿಷಯದ ಕುರಿತಾಗಿಯೇ ಇರಲಿ. ಕಿರುಚಿತ್ರಗಳಲ್ಲಿ ಯಾರಾದರು ನಟರು ಚೆನ್ನಾಗಿ ನಟಿಸಿದ್ದರೆ. ಒಳ್ಳೆಯ ಸಿನಿಮಾಟೊಗ್ರಫಿ ಮಾಡಿದ್ದರೆ, ಒಳ್ಳೆಯ ಹಿನ್ನೆಲೆ ಸಂಗೀತ ನೀಡಿದ್ದರೆ ಅವರನ್ನು ಸಹ ನಮ್ಮ ತಂಡದಲ್ಲಿ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ ಪವನ್.

  ಕಿರುಚಿತ್ರ ನಿರ್ಮಿಸಿದ್ದ ಪವನ್ ಕುಮಾರ್

  ಕಿರುಚಿತ್ರ ನಿರ್ಮಿಸಿದ್ದ ಪವನ್ ಕುಮಾರ್

  ಹಿಂದಿ ಹೇರಿಕೆ ವಿರೋಧಿಸಿ ಪವನ್ ಕುಮಾರ್ ಹಾಗೂ ಕೆಲವರು ಕಿರುಚಿತ್ರಗಳನ್ನು ನಿರ್ಮಿಸಿ ಎಫ್‌ಯುಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದರು. ಎಫ್‌ಯುಸಿ ವೆಬ್‌ಸೈಟ್‌ನಲ್ಲಿ ಈಗಲೂ ಕೆಲವು ಕಿರುಚಿತ್ರಗಳು ಲಭ್ಯವಿವೆ.

  ಪುನೀತ್ ನಟಿಸುವ ಹೊಸ ಸಿನಿಮಾದಲ್ಲಿ ನೀವು ಕೂಡ ನಟಿಸಬೇಕು ಅಂದ್ರೆ ಹೀಗ್ ಮಾಡಿ | Filmibeat Kannada
  ಪುನೀತ್-ಪವನ್ ಕಾಂಬಿನೇಷನ್‌ ಸಿನಿಮಾ

  ಪುನೀತ್-ಪವನ್ ಕಾಂಬಿನೇಷನ್‌ ಸಿನಿಮಾ

  ಪುನೀತ್ ನಟಿಸಲಿರುವ ಸಿನಿಮಾವನ್ನು ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಬಂಡವಾಳ ಹೂಡಲಿದ್ದು, ಸಿನಿಮಾವು ಹೊಂಬಾಳೆ ಫಿಲಮ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಲಿದೆ.

  English summary
  Director Pawan Kumar giving opportunity, Make video and get chance to work with Pawan Kumar Puneeth Rajkumar's Next Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X