For Quick Alerts
  ALLOW NOTIFICATIONS  
  For Daily Alerts

  ಯಶ್ ದಂಪತಿಗೆ ಒಲವಿನ ಉಡುಗೊರೆ ನೀಡಿದ ಮೇಕಪ್ ಮ್ಯಾನ್

  |
  ಪ್ರಶಾಂತ್ ಕೊಟ್ಟ ಗಿಫ್ಟ್ ನೋಡಿ ಯಶ್, ರಾಧಿಕ ಫುಲ್ ಶಾಕ್..? | Yash | FILMIBEAT KANNADA

  ನ್ಯಾಷನಲ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಎರಡನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್ ನಲ್ಲಿ ರಾಧಿಕಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಯಶ್ ದಂಪತಿ ಮುದ್ದಾದ ಹೆಣ್ಣು ಮಗುವಿಗೆ ಅಯಿರಾ ಎಂದು ನಾಮಕರಣ ಮಾಡಿದ್ದಾರೆ.

  'ಕೆಜಿಎಫ್ ಚಾಪ್ಟರ್-2' ರಿಲೀಸ್ ಡೇಟ್ ಬಹಿರಂಗ 'ಕೆಜಿಎಫ್ ಚಾಪ್ಟರ್-2' ರಿಲೀಸ್ ಡೇಟ್ ಬಹಿರಂಗ

  ಮಗಳು ಅಯಿರಾಗೆ ಈಗ ಎಂಟು ತಿಂಗಳು. ಈ ಸಂದರ್ಭದಲ್ಲಿ ಯಶ್ ದಂಪತಿಗೆ ಒಂದು ವಿಶೇಷವಾದ ಉಡುಗೊರೆ ಸಿಕ್ಕಿದೆ. ಹೌದು, ರಾಧಿಕಾ ಪಂಡಿತ್ ಮೇಕಪ್ ಮ್ಯಾನ್ ಪ್ರಶಾಂತ್, ಯಶ್ ಮತ್ತು ರಾಧಿಕಾ ಅವರಿಗೆ ಆಯಿರಾ ಪುಟ್ಟ ಕಾಲು ಮತ್ತು ಕೈ ನ ಆರ್ಟ್ ಅನ್ನು ಒಲವಿನ ಉಡುಗೊರೆ ನೀಡಿದ್ದಾರೆ.

  ಪುಟ್ಟ ಪುಟ್ಟ ಕೈ, ಪುಟ್ಟ ಪುಟ್ಟ ಕಾಲು

  ಪುಟ್ಟ ಪುಟ್ಟ ಕೈ, ಪುಟ್ಟ ಪುಟ್ಟ ಕಾಲು

  ಆಯಿರಾಳ ಪುಟ್ಟ ಪುಟ್ಟ ಕೈ ಮತ್ತು ಪುಟ್ಟ ಪುಟ್ಟ ಕಾಲಿನ ಆರ್ಟ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಪುಟ್ಟ ಕಾಲು ಮತ್ತು ಕೈಗಳನ್ನು ಮಾಡಿಸಿ ಅದಕ್ಕೆ ಸುಂದರವಾದ ಫ್ರೇಮ್ ಹಾಕಿಸಿದ್ದಾರೆ. ಫೊಟೊದ ಮೇಲೆ ಅಯಿರಾ ಹುಟ್ಟಿದ್ದ ದಿನಾಂಕವನ್ನು ಬರೆದು ಗಿಫ್ಟ್ ಮಾಡಿದ್ದಾರೆ.

  ಕನ್ನಡದಲ್ಲಿ ಸೈರಾ ಟೀಸರ್ ಅಬ್ಬರ: ನಿರಾಸೆಯಾದ ಯಶ್ ಅಭಿಮಾನಿಗಳುಕನ್ನಡದಲ್ಲಿ ಸೈರಾ ಟೀಸರ್ ಅಬ್ಬರ: ನಿರಾಸೆಯಾದ ಯಶ್ ಅಭಿಮಾನಿಗಳು

  ಯಶ್ ದಂಪತಿ ಫುಲ್ ಖುಷ್

  ಯಶ್ ದಂಪತಿ ಫುಲ್ ಖುಷ್

  ಗಿಫ್ಟ್ ನೋಡಿದ ಯಶ್ ದಂಪತಿ ಫುಲ್ ಖುಷ್ ಆಗಿದ್ದಾರೆ. ಇಂತಹ ಅದ್ಭುತವಾದ ಗಿಫ್ಟ್ ಮಗಳಿಗೆ ಸಿಕ್ಕಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಶೇಷವಾದ ಗಿಫ್ಟ್ ಅನ್ನು ಅಭಿಮಾನಿಗಳಿಗೊ ತೋರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲಾತಣದಲ್ಲಿ ಯಶ್ ಮತ್ತು ರಾಧಿಕಾ ಒಂದು ವಿಡಿಯೋ ಮಾಡಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

  ಪ್ರಶಾಂತ್ ಗೆ ಧನ್ಯವಾದ

  ಪ್ರಶಾಂತ್ ಗೆ ಧನ್ಯವಾದ

  "ವಿಶೇಷವಾದ ಗಿಫ್ಟ್ ನೀಡಿರುವ ಮೇಕಪ್ ಮ್ಯಾನ್ ಪ್ರಶಾಂತ್ ಗೆ ಯಶ್ ದಂಪತಿ ವಿಶೇಷವಾದ ಧನ್ಯವಾದ ತಿಳಿಸಿದ್ದಾರೆ. ದೊಡ್ಡವಳಾದ ಮೇಲೆ ಅಯಿರಾ ಈ ಗಿಫ್ಟ್ ನೋಡಿದ್ರೆ ನಿಜಕ್ಕು ಸಂತಸ ಪಡುತ್ತಾಳೆ" ಎಂದು ಯಶ್ ದಂಪತಿ ಹೇಳಿದ್ದಾರೆ. ಫೊಟೋ ಫ್ರೇಮ್ ಒಳಗೆ ಅಯಿರಾಳ ಕೈ ಮತ್ತು ಕಾಲು ಇರುವ ಬ್ಯಾಕ್ ಡ್ರಾಪ್ ನೀಲಿ ಬಣ್ಣದಲ್ಲಿದೆ. "ಇದನ್ನ ಮಾಡಲು ತುಂಬಾ ಕಷ್ಟ ಆಗಿದೆ ಎನ್ನುವುದು ಗೊತ್ತು. ಇಂತಹ ಅದ್ಭುತ ಗಿಫ್ಟ್ ನೀಡಿದ ಪ್ರಶಾಂತ್ ಗೆ ತುಂಬಾ ಧನ್ಯವಾದಗಳು" ಎಂದು ಯಶ್ ದಂಪತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  'ಕೆಜಿಎಫ್-2' ಶೂಟಿಂಗಲ್ಲಿ ಸಂಜು ಬಾಬಾ: ಅಧೀರನಿಗೆ ಟೈಟ್ ಸೆಕ್ಯೂರಿಟಿ 'ಕೆಜಿಎಫ್-2' ಶೂಟಿಂಗಲ್ಲಿ ಸಂಜು ಬಾಬಾ: ಅಧೀರನಿಗೆ ಟೈಟ್ ಸೆಕ್ಯೂರಿಟಿ

  ಕನ್ನಡ ಬರಲ್ಲವಾ ಎನ್ನುತ್ತಿದ್ದಾರೆ ನೆಟ್ಟಿಗರು

  ಕನ್ನಡ ಬರಲ್ಲವಾ ಎನ್ನುತ್ತಿದ್ದಾರೆ ನೆಟ್ಟಿಗರು

  ವಿಶೇಷವಾದ ಉಡುಗೊರೆ ಸಿಕ್ಕಿರುವ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ಯಶ್ ದಂಪತಿಗೆ ನೆಟ್ಟಿಗರು ಕನ್ನಡ ಬರುವುದಿಲ್ಲವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ವಿಡಿಯೋ ಪೂರ್ತಿ ಇಂಗ್ಲೀಷ್ ನಲ್ಲಿಯೆ ಮಾತನಾಡಿರುವ ಯಶ್ ಮತ್ತು ರಾಧಿಕಾ ಎಲ್ಲಿಯೂ ಒಂದು ಪದವನ್ನು ಕನ್ನಡ ಬಳಸಿಲ್ಲ. ಹಾಗಾಗಿ ನೀವೇನು ಇಂಗ್ಲೀಂಡ್ ಇಂದ ಬಂದಿದ್ದ. ನಿಮಗೆ ಕನ್ನಡ ಅಭಿಮಾನಿಗಳೆ ಜಾಸ್ತಿ ಇರುವುದು ಕನ್ನಡದಲ್ಲಿ ಹೇಳಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

  English summary
  Kannada actress Radhika Pandit makeup man gifted Ayra feet and hand art to Yash and Radhika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X