ಸ್ವೀಟ್ ಸರ್‌ಪ್ರೈಸ್ ನೀಡಿದ ಚಾಲೆಂಜಿಂಗ್ ಸ್ಟಾರ್ ; ಇನ್ನು ಕೆಲವೇ ಗಂಟೆಯಲ್ಲಿ ಡೆವಿಲ್ ದರ್ಶನ...!

ಏನಾದರೂ ಮಾಡಿ ಧಮ್ ಕಟ್ಟಿಯಾದರೂ ಕೆಲಸ ಮಾಡೋಣ.. ಒಟ್ನಲ್ಲಿ ಡೆವಿಲ್ ಚಿತ್ರವನ್ನ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡೋಣ.. ಎಂದು ದರ್ಶನ್ ಈ ಹಿಂದೆ ಕಾಟೇರ ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಹೇಳಿದ್ದರು. ಆದರೆ ಇದು ಸಾಧ್ಯನಾ..? ಇಂತಹದ್ದೊಂದು ಪ್ರಶ್ನೆ ಕೆಲ ದಿನಗಳಿಂದ ದರ್ಶನ್ ಅವರ ಅಭಿಮಾನಿಗಳನ್ನ ಕಾಡ್ತಿದೆ. ಅದಕ್ಕೆ ಕಾರಣ.. ದರ್ಶನ್ ಅವರಿಗೆ ಆದ ಶಸ್ತ್ರ ಚಿಕಿತ್ಸೆ.

ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಪೆಟ್ಟು ಮಾಡಿಕೊಂಡ ದರ್ಶನ್, ಸದ್ಯಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಚೇತರಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ದರ್ಶನ್ ಅವರ ಕೈಯಲ್ಲಿದ್ದ ಹಿಂಗ್ಡ್ ರಾಮ್ ಎಲ್ಬೋ ಬ್ರೇಸ್ ಮಾಯವಾಗಿದೆ. ಆಪ್ತ ಸಚ್ಚಿದಾನಂದ ಜೊತೆ ದರ್ಶನ್ ಫೋಟೊ ಕ್ಲಿಕ್ಕಿಸಿಕೊಂಡಿದ್ದು ವೈರಲ್ ಆಗಿದೆ. ಬಾಸ್ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ 'ಡೆವಿಲ್' ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಸಹಜವಾಗಿ ಇದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಅವರ ಈ ಖುಷಿಯನ್ನ ಈಗ ಡೆವಿಲ್ ಚಿತ್ರದ ಮೇಕಿಂಗ್ ಇಮ್ಮಡಿಗೊಳಿಸಲಿದೆ.

Making Video Of DEVIL Starring Challenging Star Darshan To Release On May 10

ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಮಿಲನಾ ಪ್ರಕಾಶ್ ಮತ್ತು ತಂಡ ಸ್ವೀಟ್ ಸರ್‌ಪ್ರೈಸ್ ನೀಡಿದೆ. ಮೇ 10ಕ್ಕೆ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಲಿದೆ ಎಂದು ಪ್ರಕಟಣೆಯನ್ನ ಹೊರಡಿಸಿದೆ. ಸಹಜವಾಗಿಯೇ ಡೆವಿಲ್ ನ ಅಂಗಳ ನೋಡಲು ಡಿ ಕಂಪನಿ ಕಾತುರದಿಂದ ಕಾಯುತ್ತಿದ್ದು, ಚಿತ್ರದಲ್ಲಿರುವ ಉಳಿದ ತಾರೆಯರ ಲುಕ್ ಬಹಿರಂಗವಾಗುವ ಸಾಧ್ಯತೆ ಇದೆ. ಮೊದಲನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಹಾಕಿದ ಶ್ರಮದ ಕಥೆಯ ಜೊತೆ ಚಿತ್ರಕ್ಕೆಂದು ಹಾಕಲಾದ ಅದ್ಧೂರಿ ಸೆಟ್‌ ನ ಹಿಂದಿನ ಕಥೆ ಕೂಡ ಅನಾವರಣವಾಗುವ ಸಾಧ್ಯತೆ ಇದೆ.

ಇನ್ನೂ ಡೆವಿಲ್ ಚಿತ್ರದ ಮೂಲಕ ಹತ್ತೊಂಬತ್ತು ವರ್ಷದ ನಂತರ ಬಾಲಿವುಡ್ ಆಕ್ಟರ್ ಮಹೇಶ್ ಮಂಜ್ರೇಕರ್ ಕನ್ನಡಕ್ಕೆ ಬರುತ್ತಿದ್ದಾರೆ. ಚಿತ್ರದ ನಾಯಕಿ ಯಾರು ಅನ್ನುವ ಗುಟ್ಟನ್ನ ಚಿತ್ರತಂಡ ಇನ್ನೂ ರಟ್ಟು ಮಾಡಿಲ್ಲ. ಈ ಕಾರಣಕ್ಕೆ ಬಿಡುಗಡೆಯಾಗಲಿರುವ ಮೇಕಿಂಗ್ ನಲ್ಲಿ ನಾಯಕಿಯ ಸುಳಿವು ಸಿಗುತ್ತಾ ಎಂಬ ಕುತೂಹಲ ಕೂಡ ಅನೇಕರಲ್ಲಿದೆ.

Making Video Of DEVIL Starring Challenging Star Darshan To Release On May 10

ಅಜನೀಶ್ ಲೋಕನಾಥ್ ಸಂಗೀತ ಸುಧಾಕರ್ ಜೆ ರಾಜ್ ಛಾಯಾಗ್ರಹಣ ಇರುವ ಚಿತ್ರವನ್ನು ಜೈ ಮಠ ಕಂಬೈನ್ಸ್ ಪ್ರಸ್ತುತಪಡಿಸುತ್ತಿದ್ದು, ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಣ್ಣ ಮತ್ತು ಪ್ರಕಾಶ್ ವೀರ್ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಡೆವಿಲ್ ಚಿತ್ರದ ನಂತರ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. 'ರಾಬರ್ಟ್' ಹಾಗೂ 'ಕಾಟೇರ' ಬಳಿಕ ಮತ್ತೆ ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಸಿಂಧೂರ ಲಕ್ಷ್ಮಣ' ಚಿತ್ರವನ್ನು ತರುಣ್ ನಿರ್ದೇಶನ ಮಾಡಲಿದ್ದು ಶೈಲಜಾ ನಾಗ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

More from Filmibeat

English summary
Making Video Of Challening Star Darshan's Much Awaited Movie Devil To Be Unveiled On May 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X