ಪ್ಯಾರಿಸ್‌ನಲ್ಲಿ 'ಪಸಂದಾಗವನೆ' ಎಂದು ಕುಣಿದ ಅಮ್ಮ- ಮಗಳು: ಮಾಲಾಶ್ರೀ, ಆರಾಧನಾ ಡ್ಯಾನ್ಸ್ ವಿಡಿಯೋ ವೈರಲ್
ಕನ್ನಡದ 'ಕಾಟೇರ' ಸಿನಿಮಾ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿ ಹೊಸ ವರ್ಷಕ್ಕೆ ಸ್ಯಾಂಡಲ್‌ವುಡ್‌ಗೆ ಸಕತ್ ಓಪನಿಂಗೆ ನೀಡಿದೆ. ಸಿನಿಮಾ ಬಿಡುಗಡೆಯಾಗಿ ಐದು ದಿನಗಳಾಗಿದ್ದು, ಈವರೆಗೆ ಕನಿಷ್ಠ 86 ಕೋಟಿ ಸಂಗ್ರಹಿಸಿದೆ ಎಂದು ಹೇಳಲಾಗಿದೆ. ಇದರ ನಡುವೆ ಚಿತ್ರದ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ.
ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದಂತೆಯೇ, ಸೋಷಿಯಲ್ ಮೀಡಿಯಾದಲ್ಲಿ 'ಪಸಂದಾಗವನೆ' ಹಾಡು ಸಕತ್ ಟ್ರೆಂಡಿಂಗ್‌ನಲ್ಲಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಮಂದಿ ಹಾಡಿಗೆ ಡ್ಯಾನ್ಸ್ ಮಾಡಿ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹಾಡು ಬಿಡುಗಡೆಯಾಗಿ ನಾಲ್ಕು ವಾರಗಳಲ್ಲಿ ಹದಿನಾಲ್ಕು ಮಿಲಿಯನ್ ವೀವ್ಸ್ ಪಡೆದಿದ್ದು, ಒಳ್ಳೆ ಟ್ರೆಂಡ್ ಸೃಷ್ಟಿಸಿದೆ.

ಪ್ಯಾರಿಸ್‌ನಲ್ಲಿ 'ಪಸಂದಾಗವನೆ' ಎಂದು ಕುಣಿದ ಅಮ್ಮ- ಮಗಳು
ಡಿಸೆಂಬರ್ 29 ರಂದು 'ಕಾಟೇರ' ರಿಲೀಸ್ ಆಗಿ, ಒಳ್ಳೆ ಓಪನಿಂಗ್ ಜೊತೆಗೆ ಉತ್ತಮ ಕಲೆಕ್ಷನ್ ಕೂಡ ಮಾಡಿದೆ. ಈ ಸಿನಿಮಾ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಸಕ್ಸಸ್ ಬೆನ್ನಲ್ಲೇ ನಟಿ ಇದೀಗ ಪ್ಯಾರಿಸ್‌ಗೆ ಹೋಗಿದ್ದಾರೆ. ತಮ್ಮ ತಾಯಿ ಮಾಲಶ್ರೀ ಜೊತೆಗೆ ಪ್ಯಾರಿಸ್ ಪ್ರವಾಸ ಏಂಜಾಯ್ ಮಾಡುತ್ತಿದ್ದಾರೆ.
ನಟಿ ಆರಾಧನಾ ರಾಮ್ ಮತ್ತು ಮಾಲಾಶ್ರೀ ಹೊಸ ವರ್ಷವನ್ನು ಆಚರಿಸಲು ಪ್ಯಾರಿಸ್‌ಗೆ ಹಾರಿದ್ದಾರೆ. ಈ ವೇಳೆ ಇಲ್ಲಿನ ಸುಂದರ ತಾಣಗಳು ಮತ್ತು ಅಲ್ಲಿನ ಫುಡ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪ್ಯಾರಿಸ್‌ನ ದಿ ಅನಿಸೋ ಲೋಕಷನ್‌ನಲ್ಲಿ ನಿಂತು ಅಮ್ಮ ಮತ್ತು ಮಗಳು 'ಪಸಂದಾಗವನೆ' ಹಾಡಿಗೆ ರೀಲ್ಸ್ ಕೂಡ ಮಾಡಿದ್ದಾರೆ.
ಅಮ್ಮ- ಮಗಳ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ
'ಕಾಟೇರ' ಸಿನಿಮಾ ನೋಡಿದ ಹಲವು ಮಂದಿ ಆರಾಧನಾ ಅವರ ಡ್ಯಾನ್ಸ್‌ಗೆ ಫಿದಾ ಆಗಿದ್ದರು. ಅವರ ನಟನೆ ತುಂಬಾ ಚೆನ್ನಾಗಿದೆ. ಅದರ ಜೊತೆಗೆ ಅವರ ಡ್ಯಾನ್ಸ್ ಸಕತ್ ಆಗಿದೆ ಎಂದು ಹೇಳಿದ್ದರು. ಈಗ ಅಮ್ಮ- ಮಗಳ 'ಪಸಂದಾಗವನೆ' ಹಾಡಿಗೆ ಅಭಿಮಾನಿಗಳು ಸಕತ್ ಕಾಮೆಂಟ್ ಮಾಡುತ್ತಿದ್ದಾರೆ.
"ಮಾಲಾಶ್ರೀ ಮೇಡಂ ಆರಾಧನಾ ಮೇಡಂ ನಿಮಗೆ ಮತ್ತು ನಿಮ್ಮ ಅಭಿಮಾನಿಗಳಿಗೆ ಮತ್ತು ಕುಟುಂಬಗಳಿಗೆ 2024 ಹೊಸ ವರ್ಷದ ಶುಭಾಶಯಗಳು ಶುಭವಾಗಲಿ best wishes" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಕಾಟೇರ ಚಿತ್ರದಲ್ಲಿ ಅದ್ಭುತ ನಟನೆ. ನಿಮ್ಮ ಭವಿಷ್ಯದ ಯೋಜನೆಗಳಿಗೆ ಆಲ್ ದಿ ಬೆಸ್ಟ್. ಹೊಸ ವರ್ಷದ ಶುಭಾಶಯ" ಎಂದು ಹೇಳಿದ್ದಾರೆ.

"ನಾನು ಕಾಟೇರ ಸಿನಿಮಾ ನೋಡಿದೆ.... ಇದು ಅಪ್ಪಟ್ಟ ಕನ್ನಡ ಚಿತ್ರ.. ಎಲ್ಲಾ ಚೊಚ್ಚಲ ನಟಿಯರಲ್ಲಿ ಕನ್ನಡ ನಟಿ ಆರಾಧನಾ ಮೇಲೆ ಅಪಾರ ಗೌರವ... ಫಿಟ್ನೆಸ್, ನಟನಾ ಸಾಮರ್ಥ್ಯ, ಭಾವನಾತ್ಮಕ ದೃಶ್ಯಗಳು... ಎಲ್ಲವೂ ಅದ್ಭುತವಾಗಿದೆ. ಯಶಸ್ಸು ನಿಮ್ಮದಾಗಲಿ ಮೇಡಂ" ಎಂದು ಆರಾಧನಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಕಾಟೇರ
ಕಾಟೇರ ಹಾಡುಗಳಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಕಾಟೇರ ಸಿನಿಮಾದಲ್ಲಿ ನಟ ದರ್ಶನ್ ತಮ್ಮ ಸ್ಟಾರ್‌ಡಂ ಬದಿಗಿಟ್ಟು ಎರಡು ಶೇಡ್‌ನಲ್ಲಿ ನಟಿಸಿದ್ದಾರೆ. ನಟಿ ಆರಾಧನಾ ರಾಮ್, ಶ್ರುತಿ, ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ್, ಜಗಪತಿ ಬಾಬು, ವಿನೋದ್ ಆಳ್ವಾ, ಅಚ್ಯುತ್ ಕುಮಾರ್, ಅವಿನಾಶ್, ಧ್ರುವನ್, ಮಾ. ರೋಹಿತ್, ಪದ್ಮಾ ವಾಸಂತಿ ನಟಿಸಿದ್ದಾರೆ.


Click it and Unblock the Notifications











