ಮಗಳನ್ನು ಅನುಕರಿಸಿದ 'ಕನಸಿನ ರಾಣಿ' ಮಾಲಾಶ್ರೀ: ಟ್ಯಾಟೂ ವೈರಲ್
ಸಹಜವಾಗಿ ಮಕ್ಕಳು ತಾಯಿಯನ್ನು ಅನುಕರಿಸುತ್ತಾರೆ. ಅಮ್ಮನ ಜೀವನ ಶೈಲಿಯಲ್ಲಿ ಪಾಲನೆ ಮಾಡ್ತಾರೆ. ಆದ್ರೆ, ಕನಸಿನ ರಾಣಿ ಮಾಲಾಶ್ರೀ ಅವರು ತಮ್ಮ ಮಗಳನ್ನು ಅನುಕರಿಸಿದ್ದಾರೆ.
ಹೌದು, ತಮ್ಮ ಮಗಳು ಹಾಕಿಸಿಕೊಂಡಿರುವ ಟ್ಯಾಟೂವನ್ನು ಮಾಲಾಶ್ರೀ ಅವರ ಸಹ ಹಾಕಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.
ವಿಶೇಷ ಅಂದ್ರೆ ಇದು ಮಾಲಾಶ್ರೀ ಅವರ ಮೊದಲ ಟ್ಯಾಟೂ. ಮೊದಲ ಟ್ಯಾಟೂ ಹಾಕಿಕೊಂಡ ಖುಷಿ ಒಂದು ಕಡೆಯಾದರೆ, ತಮ್ಮ ಮಗಳ ಕೈಯಲ್ಲಿರುವಂತಹ ಟ್ಯಾಟೂ ಎನ್ನುವುದು ಇನ್ನೊಂದು ಖುಷಿ.

ಅಂದ್ಹಾಗೆ, ಮಾಲಾಶ್ರೀ ಮತ್ತು ನಿರ್ಮಾಪಕ ರಾಮು ದಂಪತಿಗೆ ಇಬ್ಬರು ಮಕ್ಕಳು. ಒಂದು ಹೆಣ್ಣು ಹಾಗೂ ಒಂದು ಗಂಡು. ಡಿಸೆಂಬರ್ 10 ರಂದು ಮಾಲಾಶ್ರೀ ಅವರ ಮಗನ ಹುಟ್ಟುಹಬ್ಬವಿತ್ತು. ಮಗನ ಬರ್ತಡೇಯನ್ನು ಆಚರಿಸಿದ್ದ ನಟಿ, ಟ್ವಿಟ್ಟರ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.
2017ರಲ್ಲಿ ತೆರೆಕಂಡಿದ್ದ 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿ ಕೊನೆಯದಾಗಿ ಮಾಲಾಶ್ರೀ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಮಾಲಾಶ್ರೀ ಅಭಿನಯದಲ್ಲಿ ಮೂಡಿ ಬಂದ ಯಾವ ಚಿತ್ರವೂ ಇನ್ನು ಬಿಡುಗಡೆಯಾಗಿಲ್ಲ.
ತಮಿಳು ಹಾಗೂ ತೆಲುಗಿನಲ್ಲಿ ಸಿನಿ ಜರ್ನಿ ಆರಂಭಿಸಿದ್ದ ನಟಿ ಮಾಲಾಶ್ರೀ, 1989ರಲ್ಲಿ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು.


Click it and Unblock the Notifications











