For Quick Alerts
  ALLOW NOTIFICATIONS  
  For Daily Alerts

  ಶ್ರೀ ದುರ್ಗಾ ಕನಸಿನ ರಾಣಿ ಮಾಲಾಶ್ರೀಯಾದ ಕಥೆ!

  |

  ಕನ್ನಡ ಸಿನಿಮಾರಂಗದಲ್ಲಿ ಲೇಡಿ ಸೂಪರ್‌ಸ್ಟಾರ್ ಅಂತಲೇ ಹೆಸರುವಾಸಿಯಾಗಿರುವ ನಟಿ ಮಾಲಾಶ್ರೀಗೆ ಇಂದು (ಆಗಸ್ಟ್ 10) ವಿಶೇಷ ದಿನ. ಮಾಲಾಶ್ರೀಗೆ ಹುಟ್ಟುಹಬ್ಬದ ಸಂಭ್ರಮ. ಇವರ ಅಭಿಮಾನಿಗಳು ಇವರನ್ನು ಕನಸಿನ ರಾಣಿ ಅಂತಲೇ ಕರೆಯುತ್ತಾರೆ.

  ಮಾಲಾಶ್ರೀ ಅಂದಾಕ್ಷಣ ಅವರ ನಿಜ ರೂಪಕ್ಕಿಂತಲೂ ಹೆಚ್ಚಾಗಿ ಅವರ ಹತ್ತಾರು ಪಾತ್ರಗಳು ಕಣ್ಣಮುಂದೆ ಬಂದು ಹೋಗುತ್ತವೆ. ಯಾಕೆಂದರೆ ಅಂತಹ ಗಟ್ಟಿ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದಾರೆ ನಟಿ ಮಾಲಾಶ್ರೀ. ಮಾಲಾಶ್ರೀ ಅಭಿನಯದ ಸಿನಿಮಾಗಳಲ್ಲಿ ನಾಯಕನ ಪಾತ್ರದ ಜೊತೆಗೆ ಅವರ ಪಾತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇರುತ್ತಿತ್ತು.

  15ನೇ ವಯಸ್ಸಿಗೆ ಮಾಲಾಶ್ರೀ ಚಿತ್ರರಂಗ ಪ್ರವೇಶ: ಮಗಳ ವಯಸ್ಸು ಎಷ್ಟು?15ನೇ ವಯಸ್ಸಿಗೆ ಮಾಲಾಶ್ರೀ ಚಿತ್ರರಂಗ ಪ್ರವೇಶ: ಮಗಳ ವಯಸ್ಸು ಎಷ್ಟು?

  ಹಾಗಾಗಿಯೆ ಮಾಲಾಶ್ರೀ ಅಭಿನಯದ ಹಲವು ಪಾತ್ರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದು ಬಿಟ್ಟಿವೆ. ಇಂದು (ಆಗಸ್ಟ್ 10) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟಿ ಮಾಲಾಶ್ರೀ ಬಗ್ಗೆ ಒಂದಷ್ಟು ಕುತೂಹಲಕಾರಿ ಅಂಶಗಳು ಇಲ್ಲಿವೆ.

  ಶ್ರೀ ದುರ್ಗಾಳಿಂದ ಮಾಲಾಶ್ರೀ ಜರ್ನಿ!

  ಶ್ರೀ ದುರ್ಗಾಳಿಂದ ಮಾಲಾಶ್ರೀ ಜರ್ನಿ!

  ನಟಿ ಮಾಲಾಶ್ರೀ ಸಿನಿಮಾರಂಗದ ಜರ್ನಿ ತುಂಬಾ ದೊಡ್ಡದು. ಪುಟ್ಟ ಹುಡುಯಾಗಿದ್ದಾಗಲೇ ಮಾಲಾಶ್ರೀ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಲಾಶ್ರೀ ಹುಟ್ಟಿದ ಹೆಸರು 'ಶ್ರೀ ದುರ್ಗಾ'. ಬಳಿಕ ತಮ್ಮ ಹೆಸರನ್ನು ಮಾಲಾಶ್ರೀಯಾಗಿ ಬದಲಿಸಿಕೊಂಡರು. ಮಾಲಾಶ್ರೀ ಬಾಲನಟಿಯಾಗಿ ತಮಿಳು, ತೆಲುಗಿನಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಸುಮಾರು 35 ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರಂತೆ. ಅದರಲ್ಲಿ ಹುಡುಗನ ಪಾತ್ರಗಳೇ ಹೆಚ್ಚು.

  ಕನಸಿನ ರಾಣಿ ಮಾಲಾಶ್ರೀಗೆ ಸಿಕ್ತು ಮಕ್ಕಳಿಂದ ಸುಂದರ ಉಡುಗೊರೆಕನಸಿನ ರಾಣಿ ಮಾಲಾಶ್ರೀಗೆ ಸಿಕ್ತು ಮಕ್ಕಳಿಂದ ಸುಂದರ ಉಡುಗೊರೆ

  ಪಾರ್ವತಮ್ಮನ ಗರಡಿಯಲ್ಲಿ ಮಾಲಾಶ್ರೀ!

  ಪಾರ್ವತಮ್ಮನ ಗರಡಿಯಲ್ಲಿ ಮಾಲಾಶ್ರೀ!

  ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ ಶ್ರೀ ದುರ್ಗಾ, ಮಾಲಾಶ್ರೀಯಾಗಿ ಕನ್ನಡ ಚಿತ್ರರಂಗದಲ್ಲಿ ನಾಯಕನಟಿಯಾಗಿ ಬಂದರು. ಪಾರ್ವತಮ್ಮ ರಾಜ್‌ಕುಮಾರ್ ಮಾಲಾಶ್ರೀ ಅವ್ರಿಗೆ 'ನಂಜುಂಡಿ ಕಲ್ಯಾಣ' ಸಿನಿಮಾದಲ್ಲಿ ನಟಿಸುವ ಅವಕಾಶ ಕೊಟ್ಟರು. ಇದೇ ಚಿತ್ರದ ಮೂಲಕ ಶ್ರೀ ದುರ್ಗಾ ಮಾಲಾಶ್ರೀ ಆದರು. 1989ರಲ್ಲಿ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರ ಅವರಿಗೆ ಅಪಾರ ಮನ್ನಣೆ ತಂದುಕೊಟ್ಟಿತು. ಬಳಿಕ 'ಗಜಪತಿ ಗರ್ವಭಂಗ', 'ಪ್ರತಾಪ್', 'ಕಿತ್ತೂರಿನ ಹುಲಿ' ಮತ್ತು 'ತವರುಮನೆ', 'ಚಾಮುಂಡಿ', 'ಕಿರಣ್ ಬೇಡಿ, ಶಕ್ತಿ, ವೀರ, ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ಮಾಲಾಶ್ರೀ ಮಿಂಚಿನ ಅಭಿನಯ ಮಾಡಿ ಜನರ ಮನಗೆದ್ದಿದ್ದಾರೆ.

  ಕೋಟಿ ರಾಮು ಕೈಹಿಡಿದ ನಟಿ!

  ಕೋಟಿ ರಾಮು ಕೈಹಿಡಿದ ನಟಿ!

  ನಟಿ ಮಾಲಾಶ್ರೀ ಒಂದೆ ರೀತಿಯ ಪಾತ್ರಗಳಿಗೆ ಜೋತು ಬೀಳದೆ. ಹಲವು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಮಾಡಿ ಗೆದ್ದ ಕೀರ್ತಿ ಇವರಿಗೆ ಸಲ್ಲುತ್ತದೆ. ನಟಿಯರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಗೆಲ್ಲುವುದು ಸುಲಭವಲ್ಲ. ಆದರೆ ಮಾಲಾಶ್ರೀ ನಟಿಸಿದ ಬಹುತೇಕ ಮಹಿಳಾ ಪ್ರಧಾನ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಮಾಲಾಶ್ರೀ ನಿರ್ಮಾಪಕ ಕೋಟಿ ರಾಮು ಕೈ ಹಿಡಿದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದುರಾದೃಷ್ಟವಶಾತ್ ರಾಮು ಅವ್ರು ಕಳೆದ ವರ್ಷ ಕೊರೊನಾದಿಂದ ನಿಧನರಾಗಿದ್ದಾರೆ. ಹಾಗಾಗಿ ಮಾಲಾಶ್ರೀ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.

  ಮಾಲಾಶ್ರಿ ಮಗಳು ಚಿತ್ರರಂಗಕ್ಕೆ!

  ಮಾಲಾಶ್ರಿ ಮಗಳು ಚಿತ್ರರಂಗಕ್ಕೆ!

  ನಟಿ ಮಾಲಾಶ್ರೀ ಅವರ ಲೆಗೆಸಿಯನ್ನು ಅವರ ಮಗಳು ಉಳಿಸಿ, ಬೆಳೆಸಲು ಮುಂದಾಗಿದ್ದಾರೆ. ಮಾಲಾಶ್ರೀ, ರಾಮು ಪುತ್ರಿ ರಾಧನಾ ರಾಮ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ದರ್ಶನ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ ರಾಧನಾ ರಾಮ್. ಈಗಾಗಲೇ ಸಿನಿಮಾ ಲಾಂಚ್ ಆಗಿದ್ದು, ಅವರ ಅಭಿನಯ ಹೇಗಿರಲಿದೆ ಎನ್ನುವುದನ್ನು ತೆರೆಯ ಮೇಲೆ ನೋಡಬೇಕಿದೆ.

  Recommended Video

  Raj B Shetty and Ramya | ರಾಜ್ ಬಿ ಶೆಟ್ಟಿ ಕೊಟ್ರು ಸ್ಪಷ್ಟನೆ | Raj B Shetty new movie *Sandalwood
  English summary
  Malashri Celebrating 49th birthday, Unknown Facts About Malashri, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X