For Quick Alerts
  ALLOW NOTIFICATIONS  
  For Daily Alerts

  ರಾಮು ಹುಟ್ಟುಹಬ್ಬಕ್ಕೆ ಮಾಲಾಶ್ರಿ ಬರೆದ ಭಾವುಕ ಪತ್ರ

  |

  ನಿರ್ಮಾಪಕ ರಾಮು ಕೋವಿಡ್‌ನಿಂದ ನಿಧನರಾಗಿ ಎರಡು ತಿಂಗಳು ಸಹ ಆಗಿಲ್ಲ. ಇಂದು ಅವರ ಹುಟ್ಟುಹಬ್ಬ. ಪತಿಯ ಹುಟ್ಟುಹಬ್ಬದಂದು ನಟಿ ಮಾಲಾಶ್ರಿ ಭಾವುಕವಾದ ಪತ್ರವೊಂದನ್ನು ಬರೆದಿದ್ದಾರೆ.

  ಮಾಲಾಶ್ರೀ ಹಾಗೂ ರಾಮು ಅವರದ್ದು ಸುಮಾರು 23 ವರ್ಷಗಳ ದಾಂಪತ್ಯ. ಈ 23 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಮು ಹುಟ್ಟುಹಬ್ಬದಂದು ಅವರಿಲ್ಲ. ಈ ನೋವಿನ ಸಂದರ್ಭದಲ್ಲಿ ಮಾಲಾಶ್ರಿ ಪತ್ರದ ಮೂಲಕ ರಾಮುಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಲುಪಿಸಿದ್ದಾರೆ.

  ಪತಿಯನ್ನು ಕಳೆದುಕೊಂಡ ದುಃಖದಲ್ಲೇ ಭಾವುಕ ಪತ್ರ ಬರೆದ ನಟಿ ಮಾಲಾಶ್ರೀಪತಿಯನ್ನು ಕಳೆದುಕೊಂಡ ದುಃಖದಲ್ಲೇ ಭಾವುಕ ಪತ್ರ ಬರೆದ ನಟಿ ಮಾಲಾಶ್ರೀ

  ''ನನ್ನ ಆತ್ಮವೇ ನಿನಗೆ ಹುಟ್ಟುಹಬ್ಬದ ಶುಭಾಶಯ (Happy Birthday to My Soul). ನೀವು ನನಗೆ ದೇವರಾಗಿ ಬಂದಿರಿ. ನನಗೆ ವರಗಳನ್ನು ಕೊಡುವ ದೇವರೇ ಆದಿರಿ. ಈ ದಿನ ನನ್ನ ದೇವರ ಹುಟ್ಟುಹಬ್ಬ. 23 ವರ್ಷಗಳಿಂದ ನಿಮ್ಮ ಹುಟ್ಟುಹಬ್ಬವನ್ನು ನನ್ನ ಹುಟ್ಟುಹಬ್ಬವಾಗಿ ಆಚರಿಸುತ್ತಾ ಬಂದಿದ್ದೇನೆ. ನನ್ನ ಉಸಿರಲ್ಲಿ ಉಸಿರಾಗುತ್ತಾ ಬಂದ್ರಿ''

  ''ನನ್ನ ದಿನವೇ ನೀಗಾವಿದ್ದಿರಿ, ನನ್ನ ನಡೆ, ನುಡಿ, ನಗು, ನೆಮ್ಮದಿ ನೀವಾಗಿದ್ರಿ, ನನ್ನ ಹೆಸರಿಗೆ ಬೆಳಕಾಗಿದ್ರಿ. ದಿನ ರಾತ್ರಿ ನನ್ನ ಆಗು-ಹೋಗುಗಳನ್ನು ಆಲಿಸಿ ಬದುಕಲು ಕಲಿಸಿಕೊಟ್ಟ ಗುರುಗಳಾಗಿದ್ರಿ. ಮಕ್ಕಳ ಬದುಕನ್ನು ಅವರ ಭವಿಷ್ಯವನ್ನು ರೂಪಿಸುವ ಅತ್ಯುತ್ತಮ ತಂದೆಯಾಗಿದ್ರಿ''

  ''ಹಲವು ಆಯಾಮಗಳುಳ್ಳ, ಸದಾ ಪ್ರೀತಿತೋರುತ್ತಿದ್ದ, ಕೇರ್ ಮಾಡುತ್ತಿದ್ದ, ಧೃಡ ಸಂಕಲ್ಪದ, ಬುದ್ಧಿವಂತ, ಶ್ರಮಜೀವಿ ವ್ಯಕ್ತಿಯಾಗಿದ್ದಿರಿ. ನೀವು ಅಗಲಿದ ಕ್ಷಣದಿಂದ ಈ ಪತ್ರವನ್ನು ಬರೆಯುತ್ತಿರುವ ಈ ಕ್ಷಣದ ವರೆಗೆ ಕಣ್ಣಲ್ಲಿ ನೀರು ತುಂಬಿ ದೃಷ್ಟಿ ಮಂದವಾಗುತ್ತಿದೆ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ''

  ''ನನಗಾಗಿಯೇ ಜನ್ಮ ಪಡೆದು ಬಂದ ನನ್ನ ಹೃದಯ ನೀವು. ನನಗೆ ಏನೇನೋ ಬೇಕೊ ಎಲ್ಲವನ್ನೂ ನಿಮಗೆ ಕೊಟ್ಟೆ. ಆ ಇಡೀ ಸ್ವರ್ಗ ನಿಮ್ಮದಾಗಿರಲಿ. ಅಂತ ಇವತ್ತು ಇಲ್ಲಿಂದಲೇ ಹಾರೈಸುತ್ತಿದ್ದೇನೆ. ನಾವು ನಿಮ್ಮನ್ನು ಸದಾ ಮಿಸ್ ಮಾಡಿಕೊಳ್ಳುತ್ತೇವೆ ಹಾಗೂ ಸದಾ ಪ್ರೀತಿಸುತ್ತೇವೆ'' ಎಂದು ಭಾರವಾದ ಹೃದಯದಿಂದ ಪತ್ರ ಬರೆದಿದ್ದಾರೆ ನಟಿ ಮಾಲಾಶ್ರಿ.

  Recommended Video

  ಅಪ್ಪ ಸಾಂಗ್ ನೋಡಿ ಎಂಜಾಯ್ ಮಾಡುತ್ತಿದ್ದಾನೆ Junior Chiru | Filmibeat Kannada

  ನಿರ್ಮಾಪಕ ರಾಮು ಅವರು, ಕೋವಿಡ್‌ಗೆ ತುತ್ತಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಏಪ್ರಿಲ್ 26 ರಂದು ರಾಮು ನಿಧನರಾದರು. ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ರಾಮು ನಿರ್ಮಾಣ ಮಾಡಿದ್ದರು.

  English summary
  Actress Malashri wrote letter in remember of her late husband Ramu on his birthday. Ramy passed away due to COVID on April 26 this year.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X