ತರುಣ್​ - ಸೋನಲ್​ ಮದುವೆ ? ಭಾವಿ ಸೊಸೆ ಬಗ್ಗೆ ಹೇಳಿದ್ದೇನು ಕಾಟೇರ ಡೈರೆಕ್ಟರ್ ಅಮ್ಮ?

ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂಥ ಪ್ರೀತಿ ಅನ್ನೋದು ಹೇಗೆ ಎಲ್ಲಿ ಯಾವಾಗ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ. ಇದಕ್ಕೆ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಅತ್ಯುತ್ತಮ ಉದಾಹರಣೆ.

ಹೌದು, ಕಳೆದ ಕೆಲ ದಿನಗಳಿಂದ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಮದ್ವೆ ವಿಚಾರ ಚರ್ಚೆಯಾಗುತ್ತಿದೆ. ರಾಬರ್ಟ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅರಳಿದ ಪ್ರೀತಿ ಈಗ ಮದುವೆಯ ಹಂತಕ್ಕೆ ಬಂದಿದೆ ಎಂಬ ಮಾತು ಕೇಳಿ ಬರುತ್ತಿದೆ. ಆಗಸ್ಟ್ ನಲ್ಲಿ ಈ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ ಅನ್ನುವ ಸುದ್ದಿಯೂ ಇದೆ. ಈ ನಡುವೆ ತರುಣ್ ಸುಧೀರ್ ಅವರ ತಾಯಿ ಮಾಲತಿ ಸುಧೀರ್ ತಮ್ಮ ಮುದ್ದು ಮಗನ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಹರಿದಾಡುತ್ತಿರುವ ಸುದ್ದಿಯ ಮೇಲೆ ಅಧಿಕೃತ ಮುದ್ರೆಯನ್ನೂ ಒತ್ತಿದ್ದಾರೆ.

malathi-sudhir-reacts-to-the-wedding-rumors-involving-her-son-tarun-sudhir-and-sonal-monteiro

ನ್ಯೂಸ್ ಫಸ್ಟ್‌ಗೆ ನೀಡಿರುವ ಚಿಕ್ಕ ಸಂದರ್ಶನದಲ್ಲಿ ಮಾತನಾಡಿರುವ ಮಾಲತಿ ಸುಧೀರ್, ತಮ್ಮ ಮಗ ತರುಣ್ ಮದುವೆಯಾಗುತ್ತಿರುವ ವಿಚಾರ ನಿಜ ಎಂದಿದ್ದಾರೆ. ಆದರೆ ಮದುವೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದಿದ್ದಾರೆ. ಈಗ ಆಷಾಢ ಬಂತು. ಮಾತಾಡಲು ಆಗಲ್ಲ. ಆಷಾಢ ಮುಗಿದ್ಮೇಲೆ ಮಾತುಕತೆ ಮಾಡಬೇಕು ಅಂದಿದ್ದಾರೆ. ಇನ್ನೂ.. ಅವರ ಸಂಬಂಧಿಕರು ದುಬೈನಿಂದ ಬರಬೇಕು. ಎಲ್ಲರೂ ಇನ್ನೂ ಮಾತಾಡಬೇಕು. ಎಲ್ಲಾ ಆದ್ಮೇಲೆ ಫೈನಲ್‌ ಆಗೋದು ಎಂದು ಕೂಡ ಹೇಳಿದ್ದಾರೆ ಮಾಲತಿ ಸುಧೀರ್.

ಇನ್ನೂ ನಾನಿರುವಾಗಲೇ ಮಗನಿಗೆ ಮದುವೆ ಮಾಡಬೇಕು ಅನ್ನುವುದು ನನ್ನ ಆಸೆಯಾಗಿತ್ತು ಎಂದಿರುವ ಮಾಲತಿ ಸುಧೀರ್‌, ಆಗಸ್ಟ್‌ನಲ್ಲಿ ಮದುವೆ ಅನ್ನೋದು ಸುಳ್ಳು. ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಇನ್ನೂ ಕನ್‌ಫರ್ಮ್ ಆಗಿಲ್ಲ ಎಂದು ಹೇಳಿದ್ದಾರೆ. ದಾರಿಯಲ್ಲಿ ಹೋಗೋರನ್ನ ಕರೆದುಕೊಂಡು ಬಂದು ನನಗೆ ಇಷ್ಟ ಅಂದರೂ ನಾನು ಮದುವೆ ಮಾಡ್ತೀನಿ ಎಂದು ಕೂಡ ಮಾಲತಿ ಸುಧೀರ್‌ ಅವರು ಹೇಳಿದ್ದಾರೆ.

malathi-sudhir-reacts-to-the-wedding-rumors-involving-her-son-tarun-sudhir-and-sonal-monteiro

ಅಂದ್ಹಾಗೇ 'ಬನಾರಸ್' ಚಿತ್ರದ ಪ್ರಚಾರದ ಸಮಯದಲ್ಲಿ ಸೋನಾಲ್ ಮಂಥೆರೊ, ನನಗೆ ಈ ಹಿಂದೆ ಒಬ್ಬರ ಮೇಲೆ ಪ್ರೀತಿಯಾಗಿತ್ತು. ಆದರೆ ಆ ನಂತರ ಆ ಸಂಬಂಧ ಮುರಿದು ಬಿತ್ತು ಎಂದು ಹೇಳಿದ್ದರು. ನಾನು ಸಿಂಗಲ್ ಆಗಿ ತುಂಬಾ ಹ್ಯಾಪಿಯಾಗಿದ್ದೇನೆ ಎಂದು ಕೂಡ ಹೇಳಿದ್ದರು. ಇನ್ನೂ ಮೊನ್ನೆಯಷ್ಟೇ.. ಮಾಧ್ಯಮದವರಿಗೆ ಸಿಕ್ಕಾಗ ತರುಣ್ ಸುಧೀರ್ ಜೊತೆ ಮದ್ವೆಯಾಗುತ್ತಿರುವ ವಿಚಾರ ಕೇಳಿದಾಗ ನಾಚಿ ನೀರಾಗಿದ್ದರು ಸೋನಾಲ್ ಮಂಥೆರೊ.

ಉಳಿದಂತೆ ರಾಬರ್ಟ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಅನ್ನುವ ಸುದ್ದಿ ಇದೆ. ಇದೀಗ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಮದುವೆಗೆ ಮುಂದಾಗಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ತರುಣ್ ಸುಧೀರ್ ಮತ್ತು ಸೋನಾಲ್ ಮಂಥೆರೊ ಮದುವೆಯಾಗುವುದು ಖಚಿತ ಎಂದು ಮಾಲತಿ ಸುಧೀರ್ ಹೇಳಿದ್ದಾರೆ. ಆದರೆ ಯಾವತ್ತು ಅನ್ನುವುದಕ್ಕೆ ಸದ್ಯಕ್ಕೆ ಉತ್ತರ ಇಲ್ಲ. ಆದಷ್ಟು ಬೇಗ ಮದುವೆಯ ಬಂಧನಕ್ಕೊಳಗಾಗಲಿರುವ ಈ ಜೋಡಿಯ ಮೇಲೆ ನಿಮ್ಮ ಶುಭ ಹಾರೈಕೆಯೂ ಇರಲಿ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X