ಗ್ಲಾಮರ್ ಶೋ ಬಿಟ್ಟು ನೀವು ನಟಿಸೋದ್ಯಾವಾಗ? ನೆಟ್ಟಿಗನ ಪ್ರಶ್ನೆಗೆ ಮಾಳವಿಕಾ ಏನಂದ್ರು?
ಕೇರಳ ಕುಟ್ಟಿ ಮಾಳವಿಕಾ ಮೋಹನನ್ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಂದಾಸ್ ಬೆಡಗಿಗೆ ಒಳ್ಳೆ ಅವಕಾಶಗಳು ಮಾತ್ರ ಸಿಗುತ್ತಿಲ್ಲ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೊಶೂಟ್‌ಗಳ ಮೂಲಕ ಮಾಳವಿಕಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
ಮಾಳವಿಕಾ ಮೋಹನನ್ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಚಿಟ್‌ಚಾಟ್ ಮಾಡುತ್ತಾರೆ. ಇತ್ತೀಚೆಗೆ #Askmalavika ಎಂದು ಟ್ವಿಟರ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ನಟ, ನಟಿಯರು ತಮಗಿಷ್ಟವಾದ ಪ್ರಶ್ನೆಗಳಿಗೆ ಮಾತ್ರ ರಿಪ್ಲೇ ಮಾಡುತ್ತಾರೆ. ಕಸಿವಿಸಿ ಎನಿಸುವ ಪ್ರಶ್ನೆಗಳನ್ನು ನೋಡಿಯೂ ಸುಮ್ಮನಾಗುತ್ತಾರೆ.

ಮಾಳವಿಕಾ ಮಾತ್ರ ತಮ್ಮನ್ನು ಟ್ರೋಲ್ ಮಾಡಿ ಕೇಳಿದ ಪ್ರಶ್ನೆಗಳಿಗೂ ರಿಪ್ಲೇ ಮಾಡಿದ್ದಾರೆ. ನೀವು ಸ್ಕಿನ್ ಶೋ ಮಾಡುವುದು ಬಿಟ್ಟು ಯಾವಾಗ ನಟಿಸುತ್ತೀರಾ? ಎಂದು ನೆಟ್ಟಿಗರೊಬ್ಬರು ಕೇಳಿದ್ದು ಅದಕ್ಕೂ ಉತ್ತರ ಆಕೆ ಕೊಟ್ಟಿದ್ದಾರೆ. ಆ ಟ್ವೀಟ್ ಸಂಭಾಷಣೆಯ ಝಲಕ್ ಮುಂದೆ ಇದೆ ಓದಿ.
* 'ತಂಗಳಾನ್' ಸಿನಿಮಾ ಬಿಡುಗಡೆ ಯಾವಾಗ?
ಮಾಳವಿಕಾ: ನನಗೂ ಗೊತ್ತಿಲ್ಲ. ಶೀಘ್ರದಲ್ಲೇ ಘೋಷಣೆ ಆಗುತ್ತದೆ.
* ನಿಮ್ಮ ನೆಚ್ಚಿನ ತೆಲುಗು ನಟಿ?
ಮಾಳವಿಕಾ: ಅನುಷ್ಕಾ ಶೆಟ್ಟಿ, ಸಮಂತಾ
* ಸದಾ ಗ್ಲಾಮರಸ್ ಫೋಟೊಶೂಟ್ ಯಾಕೆ?
ಮಾಳವಿಕಾ: ನನಗೆ ಇಷ್ಟ. ಅದಕ್ಕೆ.
* ಸ್ಕಿನ್ ಶೋ ಬಿಟ್ಟು ನಟನೆ ಯಾವಾಗ ಮಾಡ್ತೀರಾ?
ಮಾಳವಿಕಾ: ಮಾಡಲ್ಲ. ನಿಮಗೇನಾದರೂ ಸಮಸ್ಯೆನಾ?
* ನಿಮ್ಮ ಮದುವೆ ಯಾವಾಗ?
ಮಾಳವಿಕಾ: ನನ್ನ ಮದುವೆ ನೋಡಲು ನಿಮಗೆ ಯಾಕೆ ಆತುರ?
* ನಿಮ್ಮ ಮೊದಲ ಸೆಲೆಬ್ರೆಟಿ ಕ್ರಶ್?
ಮಾಳವಿಕಾ: 'ಕಹೋ ನಾ ಪ್ಯಾರ್ ಹೈ' ಚಿತ್ರ ನೋಡಿದಾಗ ಹೃತಿಕ್ ರೋಷನ್.
* ಯಾವ ಜಾನರ್ ಸಿನಿಮಾ ನಿಮಗಿಷ್ಟ?
ಮಾಳವಿಕಾ: ಡ್ರಾಮಾ, ರೊಮ್-ಕಾಮ್, ಥ್ರಿಲ್ಲರ್
* ರಜನಿಕಾಂತ್ ಸರ್ ಜೊತೆ ನಟಿಸಿದ ಅನುಭವ?
ಮಾಳವಿಕಾ: ತಲೈವಾ ಅಂದ್ರೆ ಇಷ್ಟ. ಬಹಳ ಪ್ರೋತ್ಸಾಹ ನೀಡುತ್ತಾರೆ.
* ನಿಮ್ಮ ನೆಚ್ಚಿನ ಹೈದರಾಬಾದ್ ಫುಡ್?
ಮಾಳವಿಕಾ: ಖಾರವಾಗಿರುವ ಎಲ್ಲವೂ ಇಷ್ಟ.
* ಮೇಡಂ ನಿಮ್ಮ ಜೊತೆ ನನಗೊಂದು ಸೆಲ್ಫಿ ಬೇಕು.
ಮಾಳವಿಕಾ: ಆದಷ್ಟು ಬೇಗ ಫ್ಯಾನ್ಸ್ ಮೀಟ್ ಮಾಡೋಣ.
* ಇಷ್ಟದ ಐಪಿಎಲ್ ತಂಡ?
ಮಾಳವಿಕಾ: ನಾನು ಕ್ರಿಕೆಟ್ ನೋಡಲ್ಲ.

ಮಾಳವಿಕಾ ಮೋಹನನ್ ಕನ್ನಡದ 'ನಾನು ಮತ್ತು ವರಲಕ್ಷ್ಮಿ' ಚಿತ್ರದಲ್ಲಿ ನಟಿಸಿದ್ದರು. 'ಪೆಟ್ಟಾ', 'ಮಾಸ್ಟರ್', 'ಮಾರನ್' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಆಕೆ ಅದ್ಭುತ ಪಾತ್ರಗಳಲ್ಲಿ ನಟಿಸಿದ್ದಕ್ಕಿಂತ ಗ್ಲಾಮರ್ ಡಾಲ್ ಆಗಿ ಮಿಂಚಿರುವುದೇ ಹೆಚ್ಚು. ಅದ್ಯ ಬಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ.
ತೆಲುಗಿನಲ್ಲಿ ಪ್ರಭಾಸ್ ಜೋಡಿಯಾಗಿ 'ರಾಜಾ ಸಾಬ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಾರುತಿ ಈ ಹಾರರ್ ಕಾಮಿಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಯುದ್ರಾ' ಎನ್ನುವ ಸಿನಿಮಾ ಮೂಲಕ ಮಾಳವಿಕಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಮಾಲಿವುಡ್ ಖ್ಯಾತ ಛಾಯಾಗ್ರಾಹಕ ಕೆ.ಯು.ಮೋಹನನ್ ಮಗಳು ಮಾಳವಿಕಾ. ಕೇರಳದ ಪಯನ್ನೂರಿನಲ್ಲಿ ಹುಟ್ಟಿದ ಮಾಳವಿಕಾ ಓದಿ ಬೆಳೆದಿದ್ದು ಮುಂಬೈನಲ್ಲಿ. ಮಾಸ್ ಮೀಡಿಯಾ ಪದವಿ ಪಡೆದ ಮಾಳವಿಕಾ ಬಳಿಕ ತಂದೆಯ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಅಲ್ಲಿಂದ ಮುಂದೆ 'ಪಟ್ಟಂ ಪೊಲೆ' ಎನ್ನುವ ಮಲಯಾಳಂ ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು.


Click it and Unblock the Notifications










