ನಿರ್ಭಯ ಕುರಿತು ಸಿನಿಮಾ ಮಾಡಿದ್ರೆ ಈ ಪಾತ್ರ ಮಾಳವಿಕಾಗೆ ಬೇಕಂತೆ
ನಿರ್ಭಯ ಅತ್ಯಾಚಾರಿಗಳಿಗೆ ಇಂದು ಗಲ್ಲಾಗಿದೆ. ಶಿಕ್ಷೆ ಪ್ರಕಟವಾಗಿ ಏಳು ವರ್ಷಗಳ ನಂತರ ಇಂದು ಬೆಳ್ಳಂಬೆಳಿಗ್ಗೆ ಶಿಕ್ಷೆ ಜಾರಿಯಾಗಿದೆ.
ನ್ಯಾಯಾಲಯದ ಅಂಗಳದಲ್ಲಿ ತಡವಾಗಬಹುದು ಆದರೆ ಅನ್ಯಾಯವಾಗುವುದಿಲ್ಲ ಎಂಬ ಮಾತನ್ನು ನೆನಪಿಸಿಕೊಂಡು, ತಡವಾದರೂ ಸಹ ಆ ನೊಂದ ಜೀವಕ್ಕೆ ಈಗಲಾದರೂ ನ್ಯಾಯ ದೊರಕಿತಲ್ಲ ಎಂದು ಸಂತೋಶ ಪಡಬೇಕಿದೆ.
ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಿದ್ದಕ್ಕೆ ದೇಶವೇ ಸಂಭ್ರಮ ವ್ಯಕ್ತಪಡಿಸಿದೆ. ಹಲವು ಸಿನಿಮಾ ಮಂದಿ ಸಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕನ್ನಡದ ನಟಿ ಮಾಳವಿಕಾ ಸಹ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಮಾಳವಿಕ ಸ್ವಾಗತ
ನಟಿ ಹಾಗೂ ರಾಜಕಾರಿಣಿಯಾಗಿಯೂ ಗುರುತಿಸಿಕೊಂಡಿರುವ ಮಾಳವಿಕಾ ಅವರು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕೊನೆಗೂ ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆ ಆಯಿತು ಎಂದು
ಹೇಳಿದ್ದಾರೆ.

ಆಶಾದೇವಿ ಪಾತ್ರ ನನಗೆ ಕೊಡಿ: ಮಾಳವಿಕ
ಅಷ್ಟೆ ಅಲ್ಲ ನಿರ್ಭಯಾ ಬಗ್ಗೆ ಯಾರಾದರೂ ಸಿನಿಮಾ ಮಾಡಿದರೆ ನಿರ್ಭಯಾ ತಾಯಿ ಆಶಾದೇವಿ ಪಾತ್ರವನ್ನು ನನಗೆ ಕೊಡಿ ನಾನು ಮಾಡುತ್ತೇನೆ ಎಂಬ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾರೆ.

ಸತತ ಹೋರಾಟ ಮಾಡಿದ ಆಶಾದೇವಿ
ಮಗಳಿಗೆ ಆದ ಅನ್ಯಾಯದ ವಿರುದ್ಧವಾಗಿ ಸತತವಾಗಿ ಹೋರಾಟ ಮಾಡುತ್ತಲೇ ಬಂದ ಆಶಾದೇವಿ ಕೊನೆಗೂ ಮಗಳಿಗೆ ನ್ಯಾಯ ದೊರಕುವಂತೆ ಮಾಡಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರು ವಿರಮಿಸಿದ್ದು ಬಹಳ ಕಡಿಮೆ.

ಆಶಾದೇವಿ ಅವರನ್ನು ಹೊಗಳಿದ ಮಾಳವಿಕ
ಆಶಾದೇವಿ ಅವರನ್ನು ಮನಃಪೂರ್ವಕವಾಗಿ ಹೊಗಳಿರುವ ಮಾಳವಿಕಾ, 'ಆಶಾದೇವಿ ಇಂದಿನ ರಾಷ್ಟ್ರೀಯ ಹೀರೋ, ಎಂಥಹಾ ತಾಯಿ..' ಎಂದಿದ್ದಾರೆ.


Click it and Unblock the Notifications











