ಮಲಯಾಳಂ ಚಿತ್ರನಟ ಕ್ಯಾಪ್ಟನ್ ರಾಜು ಇನ್ನಿಲ್ಲ

ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟ ಕ್ಯಾಪ್ಟನ್ ರಾಜು ಕೊನೆಯುಸಿರೆಳೆದಿದ್ದಾರೆ. 68 ವರ್ಷ ವಯಸ್ಸಿನ ಕ್ಯಾಪ್ಟನ್ ರಾಜು ಕಳೆದ ಸೋಮವಾರ (ಸೆಪ್ಟೆಂಬರ್ 17) ಕೇರಳದ ಕೊಚ್ಚಿಯಲ್ಲಿರುವ ನಿವಾಸದಲ್ಲಿ ನಿಧನರಾದರು.

ಮೂರು ತಿಂಗಳ ಹಿಂದೆಯಷ್ಟೇ, ಅಂದ್ರೆ ಜೂನ್ ನಲ್ಲಿ ಯು.ಎಸ್ ಗೆ ಪ್ರಯಾಣ ಮಾಡುತ್ತಿದ್ದಾಗ, ಫ್ಲೈಟ್ ನಲ್ಲಿಯೇ ಅವರಿಗೆ ಸ್ಟ್ರೋಕ್ ಆಗಿತ್ತು. ತಕ್ಷಣ ಮಸ್ಕಟ್ ನಲ್ಲಿನ ಆಸ್ಪತ್ರೆಗೆ ಅವರನ್ನ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಬಳಿಕ ಜುಲೈ 2 ರಂದು ಕ್ಯಾಪ್ಟನ್ ರಾಜು ಕೊಚ್ಚಿಗೆ ಮರಳಿದರು.

ಡಯಾಬಿಟೀಸ್ ಹಾಗೂ ಹೈಪರ್ ಟೆನ್ಷನ್ ನಿಂದ ಬಳಲುತ್ತಿದ್ದ ಕ್ಯಾಪ್ಟನ್ ರಾಜು ಮೊನ್ನೆ ಇಹಲೋಕ ತ್ಯಜಿಸಿದರು.

Malayalam Actor Captain Raju passes away

ಕ್ಯಾಪ್ಟನ್ ರಾಜು ಅವರ ನಿಜನಾಮ ರಾಜು ಡೇನಿಯಲ್. ಭಾರತೀಯ ಸೇನೆಯಲ್ಲಿ ಕೆಲಸ ನಿರ್ವಹಿಸಿದ ಇವರು ಬಳಿಕ ಬಣ್ಣದ ಲೋಕ ಪ್ರವೇಶಿಸಿದರು. ಹೀಗಾಗಿ, ಇವರು 'ಕ್ಯಾಪ್ಟನ್' ರಾಜು ಎಂದೇ ಪ್ರಖ್ಯಾತಿ ಪಡೆದರು.

ಮಲಯಾಳಂ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕ್ಯಾಪ್ಟನ್ ರಾಜು ಅಭಿನಯಿಸಿದ್ದಾರೆ. 2017 ರಲ್ಲಿ ತೆರೆಕಂಡ ಮಲಯಾಳಂನ 'ಮಾಸ್ಟರ್ ಪೀಸ್' ಇವರು ಬಣ್ಣ ಹಚ್ಚಿದ ಕೊನೆಯ ಚಿತ್ರ. ನಟನೆ ಜೊತೆಗೆ 'ಮಿಸ್ಟರ್.ಪವನಾಯಿ 99.99' ಹಾಗೂ 'ಇಥ ಒರು ಸ್ನೇಹಗತಾ' ಚಿತ್ರಗಳಿಗೆ ಕ್ಯಾಪ್ಟನ್ ರಾಜು ಆಕ್ಷನ್ ಕಟ್ ಕೂಡ ಹೇಳಿದ್ದರು.

ಕ್ಯಾರೆಕ್ಟರ್ ರೋಲ್ ಹಾಗೂ ವಿಲನ್ ಪಾತ್ರಗಳಿಂದ ಪ್ರಸಿದ್ಧಿ ಪಡೆದಿದ್ದ ಕ್ಯಾಪ್ಟನ್ ರಾಜು ಇಂದು ನೆನಪು ಮಾತ್ರ.

More from Filmibeat

English summary
Malayalam Actor Captain Raju (68) passed away on Monday (September 17) in Kochi, Kerala.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X