»   » ನಟ ದಿಲೀಪ್ ಬಂಧನದ ಹಿಂದಿರುವ ಸಾಕ್ಷಿಗಳೇನು?

ನಟ ದಿಲೀಪ್ ಬಂಧನದ ಹಿಂದಿರುವ ಸಾಕ್ಷಿಗಳೇನು?

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ಸೂಪರ್ ಸ್ಟಾರ್ ನಟ ದಿಲೀಪ್ ಅವರನ್ನ ಕೇರಳ ಪೋಲಿಸರು ಬಂಧಿಸಿದ್ದರು. ನಂತರ ಅಂಗಮಾಲೈ ನ ಮ್ಯಾಜಿಸ್ಟೇಟ್ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದ್ದ ದಿಲೀಪ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಒಂದು ವಾರದ ಹಿಂದೆ ದಿಲೀಪ್ ಅವರನ್ನ ಬರೋಬ್ಬರಿ 13 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಆದ್ರೆ, ವಿಚಾರಣೆ ವೇಳೆ, ನನ್ನದು ಯಾವ ಪಾತ್ರವೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿ ಬಿಟ್ಟಿದ್ದರು ದಿಲೀಪ್. ಆಗ ದಿಲೀಪ್ ಅವರನ್ನ ಬಿಟ್ಟು ಸುಮ್ಮನಾಗಿದ್ದ ಪೊಲೀಸರು ಈಗ ಆಧಾರ ಸಮೇತ ಬಂಧಿಸಿದ್ದಾರೆ.

ಅಷ್ಟಕ್ಕೂ, ಬಹುಭಾಷಾ ನಟಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲವೆಂದಿದ್ದ ದಿಲೀಪ್ ಅವರನ್ನ ಪೊಲೀಸರು ಬಂಧಿಸಿದ್ದೇಕೆ? ದಿಲೀಪ್ ಅವರ ಕೈವಾಡ ಇದೆ ಎಂಬ ಆಧಾರ ಪೊಲೀಸರಿಗೆ ಸಿಕ್ಕಿದ್ದು ಹೇಗೆ? ಆ ಆಧಾರಗಳು ಯಾವುದು ಎಂಬ ಮಾಹಿತಿ ಮುಂದೆ ನೀಡಲಾಗಿದೆ ಓದಿ......

ಪಲ್ಸರ್ ಸುನಿಗೂ ನನಗೂ ಸಂಬಂಧವಿಲ್ಲ

ಬಹುಭಾಷಾ ನಟಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳ ನಟ ದಿಲೀಪ್ ಅವರ ಹೆಸರು ಕೇಳಿ ಬಂದಿತ್ತು. ಹೀಗಾಗಿ, ಕಳೆದ ವಾರ ಪೊಲೀಸರು ದಿಲೀಪ್ ಅವರನ್ನ ವಿಚಾರಣೆ ನಡೆಸಿದ್ದರು. ಈ ವೇಳೆ ನಟಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ 1ನೇ ಆರೋಪಿ ಆಗಿ ಜೈಲು ಸೇರಿರುವ ಪಲ್ಸರ್ ಸುನಿಗೂ ನನಗೂ ಯಾವುದೇ ಪರಿಚಯವಿಲ್ಲ, ಮತ್ತು ಸಂಬಂಧವಿಲ್ಲವೆಂದು ದಿಲೀಪ್ ಪೊಲೀಸರಿಗೆ ಹೇಳಿಕೆ ನೀಡಿದ್ದರು.

ಬಹುಭಾಷಾ ನಟಿ ಲೈಂಗಿಕ ಪ್ರಕರಣ: ನಟ ದಿಲೀಪ್ ಬಂಧನ

ಪಲ್ಸರ್ ಸುನಿ ಜೊತೆ ದಿಲೀಪ್ ಫೋಟೋ

ಪಲ್ಸರ್ ಸುನಿಗೂ ನನಗೂ ಪರಿಚಯವಿಲ್ಲವೆಂದು ಹೇಳಿದ್ದ ದಿಲೀಪ್ ಅವರನ್ನ ಪೊಲೀಸರು ಫೋಟೋ ಆಧಾರದ ಮೇಲೆ ಬಂಧಿಸಿದ್ದಾರೆ. ಈ ಫೋಟೋದಲ್ಲಿ ಪಲ್ಸರ್ ಸುನಿ ಜೊತೆ ದಿಲೀಪ್ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಪಲ್ಸರ್ ಸುನಿ ಪರಿಚಯವಿಲ್ಲವೆಂದು ಹೇಳಿದ್ದರು, ಆದ್ರೆ, ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ಅನುಮಾನದಿಂದ ದಿಲೀಪ್ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಲಯಾಳಂ ನಟ ದಿಲೀಪ್ ವಿರುದ್ಧ ಗುಡುಗಿದ ಬಹುಭಾಷಾ ನಟಿ

ಪಲ್ಸರ್ ಸುನಿ ಸಹ ಖೈದಿ ಬಾಯ್ಬಿಟ್ಟ ಸತ್ಯ

ಇನ್ನು ಪಲ್ಸರ್ ಸುನಿ ಜೊತೆ ಜೈಲಿನಲ್ಲಿದ್ದ ಸಹ ಖೈದಿಯೊಬ್ಬ ಈ ಪ್ರಕರಣದ ರೂವಾರಿ ನಟ ದಿಲೀಪ್ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರಂತೆ. ಈ ವಿಷ್ಯವನ್ನ ಸ್ವತಃ ಪಲ್ಸರ್ ಸುನಿ, ತನ್ನ ಸಹ ಖೈದಿಯೊಂದಿಗೆ ಹೇಳಿಕೊಂಡಿದ್ದನಂತೆ. ಪಲ್ಸರ್ ಸುನಿ ಸಹ ಖೈದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನಂತೆ.

ಬಹುಭಾಷಾ ನಟಿ ಲೈಂಗಿಕ ಪ್ರಕರಣ: ನಟ ದಿಲೀಪ್ ಗೆ ಬ್ಲ್ಯಾಕ್ ಮೇಲ್ ಕರೆ.!

ದಿಲೀಪ್ ವಿರುದ್ಧ ಎರಡು ಸಾಕ್ಷಿಗಳು

ಒಂದು ಫೋಟೋ ಮತ್ತು ಪಲ್ಸರ್ ಸುನಿಯ ಸಹ ಖೈದಿಯ ಹೇಳಿಕೆ, ಇವರೆಡನ್ನ ಪರಿಗಣಿಸಿ ನಟ ದಿಲೀಪ್ ಅವರನ್ನ ಬಂಧಿಸಲಾಗಿದೆಯಂತೆ. ಸದ್ಯ, ದಿಲೀಪ್ ಅವರನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತನಿಖೆ ವೇಳೆ ಮತ್ತಷ್ಟು ಸತ್ಯ ಸಂಗತಿಗಳು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Malayalam film star Dileep has been remanded to 14 days judicial custody. The actor who was arrested on charges of conspiracy on Monday evening was taken to a magistrate's house in Angamali on Tuesday morning where he was sent to judicial custody.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada