'ಒಂದು ರಾತ್ರಿಗೆ 2 ಲಕ್ಷ ಕೊಡುವೆ' ಎಂದ ಕಾಮುಕನಿಗೆ ಚಳಿ ಬಿಡಿಸಿದ ಮಲಯಾಳಂ ನಟಿ.!

ಚಿಟಿಕೆ ಹೊಡೆಯುವಷ್ಟರಲ್ಲಿ ಹೆಚ್ಚು ಜನರನ್ನು ತಲುಪಲು ಸೋಷಿಯಲ್ ಮೀಡಿಯಾ ಅತ್ಯಂತ ಸಹಕಾರಿ. ಪ್ರಬಲ ಮಾಧ್ಯಮವಾಗಿ ಬೆಳೆದಿರುವ ಸಾಮಾಜಿಕ ಜಾಲತಾಣಗಳಿಂದ ಉಪಯೋಗ ಪಡಿಯುವುದು ಬಿಟ್ಟು, ದುರುಪಯೋಗ ಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಕೂಡ ಕಮ್ಮಿ ಏನಿಲ್ಲ.

ಫೇಸ್ ಬುಕ್, ಇನ್ಸ್ಟಾಗ್ರಾಮ್ ನಿಂದ ನಟ-ನಟಿಯರು ದಿನೇ ದಿನೇ ತಮ್ಮ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ತಿದ್ದಾರೆ ಅನ್ನೋದೇನೋ ನಿಜ. ಆದ್ರೆ, ನಟಿಯರಿಗೆ ಮಾತ್ರ ಸೋಷಿಯಲ್ ಮೀಡಿಯಾದಲ್ಲೂ ನೆಮ್ಮದಿ ಇಲ್ಲ. ಫೇಸ್ ಬುಕ್ ನಲ್ಲಿ ನಟಿಯರಿಗೆ ಕಿರುಕುಳ ಕೊಡುವ ವಿಕೃತಕಾಮಿಗಳೂ ಇದ್ದಾರೆ.

ಫೇಸ್ ಬುಕ್ ನಲ್ಲಿ ಅಸಭ್ಯ, ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಕಾಮುಕರ ವಿರುದ್ಧ ಕೆಲವು ನಟಿಯರು ಸಿಡಿದೆದ್ದಿದ್ದರು. ಇದೀಗ ಅದೇ ಸಾಲಿಗೆ ಮಲಯಾಳಂ ನಟಿ ಗಾಯತ್ರಿ ಅರುಣ್ ಸೇರ್ಪಡೆಗೊಂಡಿದ್ದಾರೆ. ಮುಂದೆ ಓದಿರಿ...

ಡರ್ಟಿ ಮೆಸೇಜ್

ಡರ್ಟಿ ಮೆಸೇಜ್

''ನನ್ನ ಜೊತೆ ಒಂದು ರಾತ್ರಿ ಬರ್ತಿಯಾ.. ಎರಡು ಲಕ್ಷ ಕೊಡುವೆ. ಈ ವಿಷಯ ನಮ್ಮಿಬ್ಬರ ನಡುವೆಯೇ ಇರಲಿದೆ. ಕೇವಲ ಒಂದು ಗಂಟೆಗೆ ಎರಡು ಲಕ್ಷ ಕೊಡುವೆ'' ಎಂದು ಕಾಮುಕನೊಬ್ಬ ಮಲಯಾಳಂ ನಟಿ ಗಾಯತ್ರಿ ಅರುಣ್ ಗೆ ಸಂದೇಶ ಕಳುಹಿಸಿದ್ದ.

ತಿರುಗೇಟು ಕೊಟ್ಟ ಗಾಯತ್ರಿ ಅರುಣ್

ಇದನ್ನ ನೋಡಿ ಸುಮ್ಮನೆ ಕೂರದ ಗಾಯತ್ರಿ ಅರುಣ್ ''ಮಿಸ್ಟರ್ ರೋಹನ್ ಕುರಿಯಾಕೋಸ್... ನಿನ್ನ ತಾಯಿ/ಸಹೋದರಿಯ ಸುರಕ್ಷತೆ ಬಗ್ಗೆ ಪ್ರಾರ್ಥಿಸಲು ನಾನು ಖಂಡಿತ ನೆನಪಿಸಿಕೊಳ್ಳುವೆ'' ಎಂದು ಚಳಿ ಬಿಡಿಸಿದ್ದಾರೆ.

ನಾನ್ಯಾಕೆ ಭಯ ಪಡಲಿ.?

ನಾನ್ಯಾಕೆ ಭಯ ಪಡಲಿ.?

''ಅಸಭ್ಯ ಸಂದೇಶ ಕಳುಹಿಸುವವರಿಗೆ ಭಯ ಇಲ್ಲದೇ ಇರುವಾಗ, ಅದನ್ನ ಬಹಿರಂಗ ಪಡಿಸಲು ನಾನ್ಯಾಕೆ ಭಯ ಪಡಲಿ.? ಆ ಯುವಕನಿಗೆ ಇನ್ನೂ 17 ವರ್ಷ. ಪೊಲೀಸ್ ಕಂಪ್ಲೇಂಟ್ ಕೊಡದಂತೆ ಆತನ ತಂದೆ-ತಾಯಿ ಮನವಿ ಮಾಡಿದ್ರಿಂದ, ಸುಮ್ಮನಾಗಿದ್ದೀನಿ'' ಎಂದು ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಂದರ್ಶನವೊಂದರಲ್ಲಿ ಗಾಯತ್ರಿ ಅರುಣ್ ಹೇಳಿದ್ದರು.

ಯಾರೀ ಗಾಯತ್ರಿ ಅರುಣ್.?

ಯಾರೀ ಗಾಯತ್ರಿ ಅರುಣ್.?

ಮಲಯಾಳಂ ನ 'ಪರಸ್ಪರಂ' ಧಾರಾವಾಹಿಯಲ್ಲಿ ದೀಪ್ತಿ ಆಗಿ ಅಭಿನಯಿಸುವ ಮೂಲಕ ಗಾಯತ್ರಿ ಅರುಣ್ ಜನಪ್ರಿಯತೆ ಗಳಿಸಿದರು. ಇದೇ ಪಾತ್ರದಿಂದ ಗಾಯತ್ರಿ ಅರುಣ್ ಗೆ ಪ್ರಶಸ್ತಿ ಕೂಡ ಲಭಿಸಿತು.

More from Filmibeat

English summary
Malayalam Actress Gayathri Arun gives befitting reply to a person who offered her Rs 2 lakhs for a night.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X