ಅವಕಾಶ ಬೇಕು ಅಂದ್ರೆ ರಾಜಿಯಾಗು ಎಂದಿದ್ದರಂತೆ: ಯುವ ನಟಿ ಆರೋಪ
ಸಿನಿ ಇಂಡಸ್ಟ್ರಿಯಲ್ಲಿ ನಡೆದ ಹಾಗೂ ನಡೆಯುತ್ತಿರುವ ಲೈಂಗಿಕ ಕಿರುಕುಳಗಳ ಬಗ್ಗೆ ಈಗಾಗಲೇ ಅನೇಕ ನಟಿಯರು ಬಹಿರಂಗಪಡಿಸಿದ್ದಾರೆ. ತಮಿಳು, ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂ ಇಂಡಸ್ಟ್ರಿ ಸೇರಿದಂತೆ ಬಹುತೇಕ ಎಲ್ಲ ಚಿತ್ರರಂಗದಲ್ಲು ಇಂತಹ ಸಮಸ್ಯೆಗಳಿವೆ ಎಂದು ನಟಿಯರು ಹೇಳಿಕೊಂಡಿದ್ದರು.
ಮೀಟೂ ಅಭಿಯಾನದ ಅಡಿ ಅನೇಕ ನಟ, ನಿರ್ಮಾಪಕ, ನಿರ್ದೇಶಕರ ಹೆಸರನ್ನ ಮಹಿಳಾ ಕಲಾವಿದರು ಬಿಚ್ಚಿಟ್ಟಿದ್ದರು. ಇವರಲ್ಲಿ ಅನೇಕರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿತ್ತು.
ಇದೀಗ, ಮಲಯಾಳಂ ಚಿತ್ರರಂಗದ ಯುವನಟಿ ಗಾಯಿತ್ರಿ ಸುರೇಶ್ ಕೂಡ ಮೀಟೂ ಆರೋಪ ಮಾಡಿದ್ದಾರೆ. ತಾನು ಇಂಡಸ್ಟ್ರಿಗೆ ಬಂದ ಆರಂಭದಲ್ಲಿ ಹೇಗೆ ಕಿರುಕುಳ ಎದುರಿಸಿದೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ಈ ಗಾಯಿತ್ರಿ ಸುರೇಶ್ ಯಾರು? ಈಕೆಗೆ ಕಿರುಕುಳ ನೀಡಿದ್ದು ಯಾರು? ಮುಂದೆ ಓದಿ.....

ರಾಜಿಯಾಗು ಎಂದು ಸಂದೇಶ
ಸಿನಿಮಾರಂಗಕ್ಕೆ ಆಗಷ್ಟೇ ಬಂದಿದ್ದ ಸಮಯ. ಅವಕಾಶಗಳಿಗಾಗಿ ಹುಡುಕುತ್ತಿದ್ದ ನಟಿ ಗಾಯಿತ್ರಿಗೆ ಕೆಲವು ನಿರ್ದೇಶಕ, ನಿರ್ಮಾಪಕರು ರಾಜಿ ಆಗ್ತೀಯಾ ಎಂದು ಬಗೆ ಬಗೆಯ ರೀತಿ ಮೆಸೆಜ್ ಮಾಡಿ ಒತ್ತಾಯ ಮಾಡುತ್ತಿದ್ದರಂತೆ. ಹೀಗಂತ ಸ್ವತಃ ನಟಿ ಗಾಯಿತ್ರಿ ಸುರೇಶ್ ಹೇಳಿಕೊಂಡಿದ್ದಾರೆ.

ನಟಿಗೆ ಒತ್ತಾಯಿಸಿದ ಅವರು ಯಾರು?
ಗಾಯಿತ್ರಿ ಸುರೇಶ್ ಅವರಿಗೆ ಮೆಸೆಜ್ ಮಾಡಿ ಕಾಂಪ್ರೊಮೈಸ್ ಆಗು, ಕಮಿಟ್ಮೆಂಟ್ ಗೆ ಒಪ್ಪಿಕೋ ಎಂದು ಮೆಸೆಜ್ ಮಾಡಿದವರು ಯಾರು ಎಂಬುದನ್ನ ಆ ನಟಿ ಬಿಟ್ಟುಕೊಟ್ಟಿಲ್ಲ. ಆದರೆ, ಬಹಳ ಜನ ಇದೇ ರೀತಿ ಅಪ್ರೋಚ್ ಮಾಡಿದ್ದರು ಎಂದಷ್ಟೇ ಹೇಳಿದ್ದಾರೆ.

ಬ್ಯಾಗ್ರೌಂಡ್ ಇಲ್ಲದೇ ಬಂದರೇ ಇದೇ ಕಥೆ
ಯಾವುದೇ ಬ್ಯಾಗ್ರೌಂಡ್ ಇಲ್ಲದೇ ಸಿನಿಮಾ ಇಂಡಸ್ಟ್ರಿಗೆ ಬಂದವರಿಗೆ ಇಂತಹ ಸಮಸ್ಯೆಗಳು ಎದುರಾಗುವುದು ಸಹಜ ಎಂದು ಗಾಯಿತ್ರಿ ಸುರೇಶ್ ಹೇಳುತ್ತಾರೆ. ಎಷ್ಟೇ ಟಾರ್ಚರ್, ಬೇಡಿಕೆ, ಒತ್ತಾಯ ಎದುರಾದರೂ ಕೇವಲ ಟ್ಯಾಲೆಂಟ್ ಇಟ್ಟುಕೊಂಡು ಮಾತ್ರ ಮುಂದೆ ಹೋಗಬೇಕು ಎಂದು ಗಾಯಿತ್ರಿ ಸುರೇಶ್ ತಿಳಿಸಿದ್ದಾರೆ.

ಯಾರು ಈ ಗಾಯಿತ್ರಿ ಸುರೇಶ್?
ಅಂದ್ಹಾಗೆ, ಗಾಯಿತ್ರಿ ಸುರೇಶ್ ಮಲಯಾಳಂ ಚಿತ್ರರಂಗದ ನಟಿ. 2014ರಲ್ಲಿ ಮಿಸ್ ಫೆಮಿನಾ ಕೇರಳ ಪ್ರಶಸ್ತಿ ಗೆದ್ದಿದ್ದ ಗಾಯಿತ್ರಿ ಮೂಲತಃ ಮಾಡೆಲ್. 2015ರಲ್ಲಿ ಜಮ್ನ ಪ್ಯಾರಿ ಚಿತ್ರದ ಮೂಲಕ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಪ್ರವೇಶ ಮಾಡಿದ ಗಾಯಿತ್ರಿ ಇಲ್ಲಿಯವರೆಗೂ ಸುಮಾರು 10ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.


Click it and Unblock the Notifications











