For Quick Alerts
  ALLOW NOTIFICATIONS  
  For Daily Alerts

  ಅವಕಾಶ ಬೇಕು ಅಂದ್ರೆ ರಾಜಿಯಾಗು ಎಂದಿದ್ದರಂತೆ: ಯುವ ನಟಿ ಆರೋಪ

  |

  ಸಿನಿ ಇಂಡಸ್ಟ್ರಿಯಲ್ಲಿ ನಡೆದ ಹಾಗೂ ನಡೆಯುತ್ತಿರುವ ಲೈಂಗಿಕ ಕಿರುಕುಳಗಳ ಬಗ್ಗೆ ಈಗಾಗಲೇ ಅನೇಕ ನಟಿಯರು ಬಹಿರಂಗಪಡಿಸಿದ್ದಾರೆ. ತಮಿಳು, ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂ ಇಂಡಸ್ಟ್ರಿ ಸೇರಿದಂತೆ ಬಹುತೇಕ ಎಲ್ಲ ಚಿತ್ರರಂಗದಲ್ಲು ಇಂತಹ ಸಮಸ್ಯೆಗಳಿವೆ ಎಂದು ನಟಿಯರು ಹೇಳಿಕೊಂಡಿದ್ದರು.

  ಮೀಟೂ ಅಭಿಯಾನದ ಅಡಿ ಅನೇಕ ನಟ, ನಿರ್ಮಾಪಕ, ನಿರ್ದೇಶಕರ ಹೆಸರನ್ನ ಮಹಿಳಾ ಕಲಾವಿದರು ಬಿಚ್ಚಿಟ್ಟಿದ್ದರು. ಇವರಲ್ಲಿ ಅನೇಕರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿತ್ತು.

  ನಗ್ನ ಫೋಟೋ ಕಳಿಸು ಎಂದವನಿಗೆ ಶಾಕ್ ಕೊಟ್ಟ ಗಾಯಕಿ ಚಿನ್ಮಯಿ.! ನಗ್ನ ಫೋಟೋ ಕಳಿಸು ಎಂದವನಿಗೆ ಶಾಕ್ ಕೊಟ್ಟ ಗಾಯಕಿ ಚಿನ್ಮಯಿ.!

  ಇದೀಗ, ಮಲಯಾಳಂ ಚಿತ್ರರಂಗದ ಯುವನಟಿ ಗಾಯಿತ್ರಿ ಸುರೇಶ್ ಕೂಡ ಮೀಟೂ ಆರೋಪ ಮಾಡಿದ್ದಾರೆ. ತಾನು ಇಂಡಸ್ಟ್ರಿಗೆ ಬಂದ ಆರಂಭದಲ್ಲಿ ಹೇಗೆ ಕಿರುಕುಳ ಎದುರಿಸಿದೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ಈ ಗಾಯಿತ್ರಿ ಸುರೇಶ್ ಯಾರು? ಈಕೆಗೆ ಕಿರುಕುಳ ನೀಡಿದ್ದು ಯಾರು? ಮುಂದೆ ಓದಿ.....

  ರಾಜಿಯಾಗು ಎಂದು ಸಂದೇಶ

  ರಾಜಿಯಾಗು ಎಂದು ಸಂದೇಶ

  ಸಿನಿಮಾರಂಗಕ್ಕೆ ಆಗಷ್ಟೇ ಬಂದಿದ್ದ ಸಮಯ. ಅವಕಾಶಗಳಿಗಾಗಿ ಹುಡುಕುತ್ತಿದ್ದ ನಟಿ ಗಾಯಿತ್ರಿಗೆ ಕೆಲವು ನಿರ್ದೇಶಕ, ನಿರ್ಮಾಪಕರು ರಾಜಿ ಆಗ್ತೀಯಾ ಎಂದು ಬಗೆ ಬಗೆಯ ರೀತಿ ಮೆಸೆಜ್ ಮಾಡಿ ಒತ್ತಾಯ ಮಾಡುತ್ತಿದ್ದರಂತೆ. ಹೀಗಂತ ಸ್ವತಃ ನಟಿ ಗಾಯಿತ್ರಿ ಸುರೇಶ್ ಹೇಳಿಕೊಂಡಿದ್ದಾರೆ.

  ಫೋಟೋಶೂಟ್ ನಂತರ ನಟಿಯನ್ನ ಮಂಚಕ್ಕೆ ಕರೆದ ಫೋಟೋಗ್ರಾಫರ್.!ಫೋಟೋಶೂಟ್ ನಂತರ ನಟಿಯನ್ನ ಮಂಚಕ್ಕೆ ಕರೆದ ಫೋಟೋಗ್ರಾಫರ್.!

  ನಟಿಗೆ ಒತ್ತಾಯಿಸಿದ ಅವರು ಯಾರು?

  ನಟಿಗೆ ಒತ್ತಾಯಿಸಿದ ಅವರು ಯಾರು?

  ಗಾಯಿತ್ರಿ ಸುರೇಶ್ ಅವರಿಗೆ ಮೆಸೆಜ್ ಮಾಡಿ ಕಾಂಪ್ರೊಮೈಸ್ ಆಗು, ಕಮಿಟ್ಮೆಂಟ್ ಗೆ ಒಪ್ಪಿಕೋ ಎಂದು ಮೆಸೆಜ್ ಮಾಡಿದವರು ಯಾರು ಎಂಬುದನ್ನ ಆ ನಟಿ ಬಿಟ್ಟುಕೊಟ್ಟಿಲ್ಲ. ಆದರೆ, ಬಹಳ ಜನ ಇದೇ ರೀತಿ ಅಪ್ರೋಚ್ ಮಾಡಿದ್ದರು ಎಂದಷ್ಟೇ ಹೇಳಿದ್ದಾರೆ.

  'ಅಡ್ಜೆಸ್ಟ್ ಮಾಡ್ಕೊಬೇಕು' ಎಂದ ಸಹ ನಿರ್ದೇಶಕನ ಕರ್ಮಕಾಂಡ ಬಯಲಿಗೆಳೆದ ನಟಿ 'ಅಡ್ಜೆಸ್ಟ್ ಮಾಡ್ಕೊಬೇಕು' ಎಂದ ಸಹ ನಿರ್ದೇಶಕನ ಕರ್ಮಕಾಂಡ ಬಯಲಿಗೆಳೆದ ನಟಿ

  ಬ್ಯಾಗ್ರೌಂಡ್ ಇಲ್ಲದೇ ಬಂದರೇ ಇದೇ ಕಥೆ

  ಬ್ಯಾಗ್ರೌಂಡ್ ಇಲ್ಲದೇ ಬಂದರೇ ಇದೇ ಕಥೆ

  ಯಾವುದೇ ಬ್ಯಾಗ್ರೌಂಡ್ ಇಲ್ಲದೇ ಸಿನಿಮಾ ಇಂಡಸ್ಟ್ರಿಗೆ ಬಂದವರಿಗೆ ಇಂತಹ ಸಮಸ್ಯೆಗಳು ಎದುರಾಗುವುದು ಸಹಜ ಎಂದು ಗಾಯಿತ್ರಿ ಸುರೇಶ್ ಹೇಳುತ್ತಾರೆ. ಎಷ್ಟೇ ಟಾರ್ಚರ್, ಬೇಡಿಕೆ, ಒತ್ತಾಯ ಎದುರಾದರೂ ಕೇವಲ ಟ್ಯಾಲೆಂಟ್ ಇಟ್ಟುಕೊಂಡು ಮಾತ್ರ ಮುಂದೆ ಹೋಗಬೇಕು ಎಂದು ಗಾಯಿತ್ರಿ ಸುರೇಶ್ ತಿಳಿಸಿದ್ದಾರೆ.

  'ಒಂದು ರಾತ್ರಿ ಕಾಂಪ್ರಮೈಸ್ ಆಗು' ಎಂದ ನಿರ್ಮಾಪಕನಿಗೆ ಚಳಿ ಬಿಡಿಸಿದ್ದ ನಟಿ ಶ್ರುತಿ ಮರಾಠೆ 'ಒಂದು ರಾತ್ರಿ ಕಾಂಪ್ರಮೈಸ್ ಆಗು' ಎಂದ ನಿರ್ಮಾಪಕನಿಗೆ ಚಳಿ ಬಿಡಿಸಿದ್ದ ನಟಿ ಶ್ರುತಿ ಮರಾಠೆ

  ಯಾರು ಈ ಗಾಯಿತ್ರಿ ಸುರೇಶ್?

  ಯಾರು ಈ ಗಾಯಿತ್ರಿ ಸುರೇಶ್?

  ಅಂದ್ಹಾಗೆ, ಗಾಯಿತ್ರಿ ಸುರೇಶ್ ಮಲಯಾಳಂ ಚಿತ್ರರಂಗದ ನಟಿ. 2014ರಲ್ಲಿ ಮಿಸ್ ಫೆಮಿನಾ ಕೇರಳ ಪ್ರಶಸ್ತಿ ಗೆದ್ದಿದ್ದ ಗಾಯಿತ್ರಿ ಮೂಲತಃ ಮಾಡೆಲ್. 2015ರಲ್ಲಿ ಜಮ್ನ ಪ್ಯಾರಿ ಚಿತ್ರದ ಮೂಲಕ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಪ್ರವೇಶ ಮಾಡಿದ ಗಾಯಿತ್ರಿ ಇಲ್ಲಿಯವರೆಗೂ ಸುಮಾರು 10ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.

  English summary
  Malayalam actress gayathri suresh opened about casting couch incidents. some producers was approached to gayatri for compromise in beginning days

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X