»   » ಶಿವರಾಜ್ ಕುಮಾರ್ 'ಕವಚ' ಚಿತ್ರಕ್ಕೆ ಹೊಸ ನಾಯಕಿಯ ಆಗಮನ

ಶಿವರಾಜ್ ಕುಮಾರ್ 'ಕವಚ' ಚಿತ್ರಕ್ಕೆ ಹೊಸ ನಾಯಕಿಯ ಆಗಮನ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಕವಚ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಬೆಂಗಳೂರಿನ ಸುತ್ತಾ ಮುತ್ತಾ ಚಿತ್ರದ ಶೂಟಿಂಗ್ ಶುರುವಾಗಿದ್ದು, ಇಶಾ ಕೊಪ್ಪಿಕರ್ ಅವರ ಸೀನ್ ಗಳನ್ನ ಚಿತ್ರೀಕರಿಸುವುದರಲ್ಲಿ ನಿರ್ದೇಶಕರು ಬ್ಯುಸಿಯಾಗಿದ್ದಾರೆ.

'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ನಿರ್ಮಾಣ ಮಾಡಿದ್ದ ಸುಧೀಂದ್ರ ಈ ಚಿತ್ರವನ್ನ ಪ್ರೊಡ್ಯುಸ್ ಮಾಡುತ್ತಿದ್ದಾರೆ. ಪೊಲೀಸ್ ಆಧಿಕಾರಿಯ ಪಾತ್ರದಲ್ಲಿ ಇಶಾ ಕೊಪ್ಪಿಕರ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಹದಿನೈದು ವರ್ಷಗಳ ನಂತರ ಶಿವರಾಜ್ ಕುಮಾರ್ ರೀಮೇಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು, 'ಕವಚ' ಮಲಯಾಳಂ ನ 'ಒಪ್ಪಂ' ಸಿನಿಮಾದ ರೀಮೇಕ್.

Malayalam actress Ithi Acharya female lead in Kavacha movie

ಸದ್ಯ, ಇಶಾ ಕೊಪ್ಪಿಕರ್ ಜೊತೆಯಲ್ಲಿ 'ಕವಚ' ಚಿತ್ರಕ್ಕೆ ಮತ್ತೊಬ್ಬ ನಾಯಕಿ ಸೇರಿಕೊಂಡಿದ್ದಾರೆ. 'ಧ್ವನಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಇತಿ ಆಚಾರ್ಯ, ಕವಚ ಚಿತ್ರದ ಮತ್ತೊರ್ವ ನಾಯಕಿ. ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿರುವ ಕವಚ ಚಿತ್ರದಲ್ಲಿ ಇತಿ ಪಂಜಾಬಿ ಹುಡುಗಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ

Malayalam actress Ithi Acharya female lead in Kavacha movie

ಕವಚ ಸಿನಿಮಾದಲ್ಲಿ ಶಿವಣ್ಣ ಇದೇ ಮೊದಲ ಬಾರಿಗೆ ಕುರುಡನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ ವಶಿಷ್ಠ ಸಿಂಹ, ತಬಲ ನಾಣಿ, ಲಯೇಂದ್ರ, ರವಿ ಕಾಳೆ ಇನ್ನೂ ಅನೇಕರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಗೋಪಾಲ್ ವರ್ಮ ಜೊತೆಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ವಾಸು ಕವಚ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

English summary
Malayalam film actress Ithi Acharya playing female lead in Kavacha movie, Shivaraj Kumar is playing a blind man in the film.The shooting of a kavacha film is taking place in Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X