ಮಲಯಾಳಂ ನಟಿ ಕಿಡ್ನಾಪ್ ರೂವಾರಿ ಸುನೀಲ್: ಘಟನೆಯ ಪೂರ್ಣ ವಿವರ
ಮಲಯಾಳಂ ನಟಿಯನ್ನ ನಿನ್ನೆ (ಫೆಬ್ರವರಿ 17) 5 ಜನ ದುಷ್ಕರ್ಮಿಗಳ ತಂಡ ಅಪಹರಿಸಿ, ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಪೊಲೀಸರ ಮಾಹಿತಿ ಪ್ರಕಾರ ಈ ಅಪಹರಣದ ಪ್ರಮುಖ ರೂವಾರಿ ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ.
ಈ ಸುನೀಲ್ ಕುಮಾರ್ ಬೇರೆ ಯಾರು ಅಲ್ಲ. ಮಲಯಾಳಂ ನಟಿಯ ಮಾಜಿ ಕಾರು ಚಾಲಕ. ಇದು ಪಕ್ಕಾ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಕಳೆದ ಎರಡು ತಿಂಗಳ ಹಿಂದೆಯೇ ಸುನೀಲ್ ಕುಮಾರ್ ಈ ಯೋಜನೆಯನ್ನ ಹಾಕಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.[ಕನ್ನಡದಲ್ಲೂ ಅಭಿನಯಿಸಿದ್ದ ಬಹುಭಾಷಾ ನಟಿ ಅಪಹರಣ]
ಮಲಯಾಳಂ ನಟಿಯ ಕಿಡ್ನಾಪ್ ಪ್ರಕರಣದ ಪೂರ್ತಿ ವಿವರ ಮುಂದೆ ಓದಿ.

ಶೂಟಿಂಗ್ ಮುಗಿಸಿ ಬರುತ್ತಿದ್ದ ವೇಳೆ ಘಟನೆ
ಅದು ಸಮಯ ರಾತ್ರಿ 9.30 ಗಂಟೆ. ತಮ್ಮ ಹೊಸ ಚಿತ್ರದ ಚಿತ್ರೀಕರಣವನ್ನ ಮುಗಿಸಿದ ನಟಿ ಕೇರಳದ ಕೊಚ್ಚಿನ್ ನಿಂದ ತ್ರಿಶೂರ್ ನಗರಕ್ಕೆ ತಮ್ಮ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು.

ಮಾರ್ಗ ಮಧ್ಯೆ ಅಪಘಾತದ ನಾಟಕ
ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದ ನಟಿಗೆ ಮಾರ್ಗ ಮಧ್ಯದಲ್ಲಿ ಟೆಂಪೋ ಟ್ರಾವಲರ್ ಒಂದು ಡಿಕ್ಕಿ ಹೊಡೆಯುತ್ತೆ. ಈ ವೇಳೆ ಅಪಘಾತವಾಯಿತು ಎಂದು ಭಾವಿಸುವಷ್ಟರಲ್ಲಿ ಕಾರಿನಲ್ಲಿದ್ದ ನಟಿ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ಮಾಡುತ್ತೆ.

ನಟಿ ಮೇಲೆ ಲೈಂಗಿಕ ಕಿರುಕುಳ!
ನಟಿಯನ್ನ ಕಾರಿನಲ್ಲಿ ಅಪಹರಿಸಿದ ದುಷ್ಕರ್ಮಿಗಳು, ನಟಿ ಮೇಲೆ ದೈಹಿಕ ಹಲ್ಲೆ ಮಾಡಿ, ಲೈಂಗಿಕ ಕಿರುಕುಳ ಕೂಡ ನೀಡುತ್ತಾರೆ. ಈ ವೇಳೆ ಫೋಟೋ ಕ್ಲಿಕ್ಕಿಸಿ, ವಿಡಿಯೋ ಕೂಡ ಮಾಡಿದ್ದಾರಂತೆ.

ಮಾರ್ಗ ಮಧ್ಯೆ ಬಿಟ್ಟು ಹೋದ ಅಪಹರಣಕಾರರು
ರಾತ್ರಿ 10.30 ಗಂಟೆಗೆ ಭಯಗೊಂಡ ದುಷ್ಕರ್ಮಿಗಳು 'ಪಲಾರಿವಿಟ್ಟೊಮ್ ವೃತ್ತ'ದ ಬಳಿ ನಟಿಯನ್ನ ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ತದ ನಂತರ ತಮಗೆ ಪರಿಚಯವಿದ್ದ ನಿರ್ಮಾಪಕರೊಬ್ಬರ ಮನೆಗೆ ತೆರಳಿದ ನಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಕೃತ್ಯದಲ್ಲಿ ಕಾರ್ ಚಾಲಕ ಭಾಗಿ
ನಟಿಯ ಕಿಡ್ನಾಪ್ ಕೃತ್ಯದಲ್ಲಿ, ಕಾರು ಚಾಲಕ 'ಮಾರ್ಟಿನ್' ಕೂಡ ಸೇರಿದ್ದ. ರಸ್ತೆ ಮಧ್ಯೆ ಅಪಘಾತವಾಗುವಂತೆ ನಾಟಕವಾಡಿ ಕಿಡ್ನಾಪ್ ಮಾಡುವ ಯೋಜನೆಯನ್ನ ಮೊದಲೇ ರೂಪಿಸಿ, ನಂತರ ಅಪಹರಣ ಮಾಡಲು ಮಾರ್ಟಿನ್ ಸಹಾಯ ಮಾಡಿದ್ದ.

ಅಪಹರಣದ ಮುಖ್ಯ ರೂವಾರಿ ಸುನೀಲ್ ಕುಮಾರ್
ಅಂದ್ಹಾಗೆ, ನಟಿಯ ಅಪಹರಣದ ಮುಖ್ಯ ರೂವಾರಿ ಸುನೀಲ್ ಕುಮಾರ್. ಸುನೀಲ್ ಈ ಹಿಂದೆ ಅದೇ ನಟಿ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದ್ರೆ, ಆ ನಟಿ ಸುನೀಲ್ ಕುಮಾರ್ ಅವರನ್ನ ಕೆಲಸದಿಂದ ತೆಗೆದು ಹಾಕಿದ್ದರು.

ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶ
ಕೆಲಸದಿಂದ ತೆಗೆದುಹಾಕಿದ್ದ ನಟಿ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ ಸುನೀಲ್, ನಟಿಯನ್ನ ಬ್ಲ್ಯಾಕ್ ಮೇಲ್ ಮಾಡಲು ಈ ಕೃತ್ಯ ಎಸೆಗಿದ್ದಾನೆ ಎಂದು ಕೇರಳ ಪೊಲೀಸರು, ಕೇರಳದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

'ಮಾರ್ಟಿನ್' ಅರೆಸ್ಟ್
ಸದ್ಯ, ಕಾರು ಚಾಲಕ 'ಮಾರ್ಟಿನ್' ಅವರನ್ನ ಬಂಧಿಸಲಾಗಿದೆ. ಸುನೀಲ್ ಎಲ್ಲಿದ್ದಾನೆ ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದ್ದು, ಆದಷ್ಟೂ ಬೇಗ ಸುನೀಲ್ ನ ಕೂಡ ಅರೆಸ್ಟ್ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನಟಿ ಈಗ ಎಲ್ಲಿದ್ದಾರೆ?
ಈ ಕಿಡ್ನಾಪ್ ನಿಂದ ನಟಿಗೆ ಕೆಲ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದ್ಯ, ಎರ್ನಾಕುಲಂ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇರಳದ ಮಾದ್ಯಮಗಳಲ್ಲಿ ವರದಿಯಾಗಿದೆ.


Click it and Unblock the Notifications











