»   » ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಪಲ್ಸರ್ ಸುನಿಯಿಂದ ಸ್ಫೋಟಕ ಸಂಗತಿ ಬಯಲು

ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಪಲ್ಸರ್ ಸುನಿಯಿಂದ ಸ್ಫೋಟಕ ಸಂಗತಿ ಬಯಲು

Posted By:
Subscribe to Filmibeat Kannada
Pulsur suni says Kavya Madhavan is `my madam' | Filmibeat Kannada

ಕನ್ನಡ ಚಿತ್ರಗಳಲ್ಲೂ ಅಭಿನಯಿಸಿದ್ದ ದಕ್ಷಿಣ ಭಾರತದ ಖ್ಯಾತ ನಟಿಯ ಲೈಂಗಿಕ ಕಿರುಕುಳ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಯಾರು ಎಂಬ ಸ್ಫೋಟಕ ಮಾಹಿತಿಯನ್ನು ಪಲ್ಸರ್ ಸುನಿ ಬಯಲು ಮಾಡಿದ್ದಾನೆ.

ಮಲಯಾಳಂ ನಟಿಯ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತಾಪಿಸಿದ 'ಮೇಡಂ' ಯಾರು ಎಂಬುದನ್ನ ಪ್ರಥಮ ಆರೋಪಿ ಪಲ್ಸರ್ ಸುನಿ ಬಹಿರಂಗ ಪಡಿಸಿದ್ದಾನೆ.

'ಮೇಡಂ' ಕಾವ್ಯ ಮಾಧವನ್

ಮಲಯಾಳಂ ನಟಿಯ ಲೈಂಗಿಕ ಕಿರುಕುಳ ಪ್ರಕರಣದ 'ಮಾಸ್ಟರ್ ಮೈಂಡ್' ನಟಿ ಕಾವ್ಯ 'ಮೇಡಂ' ಎಂದು ಪಲ್ಸರ್ ಸುನಿ ಬಾಯ್ಬಿಟ್ಟಿದ್ದಾನೆ. ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ರವರ ಪತ್ನಿಯೇ ಈ ಕಾವ್ಯ ಮಾಧವನ್.

ಮಲೆಯಾಳಂ ನಟಿ ಮೇಲೆ ಲೈಂಗಿಕ ದೌರ್ಜನ್ಯ: ಘಟನೆ ಹಿಂದೆ ಖ್ಯಾತನಾಮರ ಕೈವಾಡ.!

ಕಾವ್ಯ ನನ್ನ ಮೇಡಂ.!

''ನನ್ನ ಮೇಡಂ ಕಾವ್ಯ ಮಾಧವನ್. ಈಗಾಗಲೇ ಈ ಬಗ್ಗೆ ನಾನು ಹೇಳಿಕೆ ನೀಡಿದ್ದೇನೆ'' ಎಂದು ಎರ್ನಾಕುಳಂ ನ್ಯಾಯಾಲಯಕ್ಕೆ ಹೋಗುವ ವೇಳೆ ಮಾಧ್ಯಮಗಳಿಗೆ ಮುಂದೆ ಪಲ್ಸರ್ ಸುನಿ ಹೇಳಿದ್ದಾನೆ.

ಮಲಯಾಳಂ ನಟಿ ಕಿಡ್ನಾಪ್ ರೂವಾರಿ ಸುನೀಲ್: ಘಟನೆಯ ಪೂರ್ಣ ವಿವರ

ಸುನಿ ಯಾರು ಅಂತಲೇ ಗೊತ್ತಿಲ್ಲ.!

'ಕಾವ್ಯ ನನ್ನ ಮೇಡಂ' ಎಂದು ಪಲ್ಸರ್ ಸುನಿ ಹೇಳಿದ್ರೂ, ಸುನಿ ಯಾರು ಅಂತ ನನಗೆ ಗೊತ್ತೇ ಇಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ ನಟಿ ಕಾವ್ಯ ಮಾಧವನ್.

ದುಡ್ಡು ಕೊಟ್ಟಿದ್ದು ಕಾವ್ಯ.!

ಕೆಲ ವರದಿಗಳ ಪ್ರಕಾರ, ಈ ಹಿಂದೆ ನಟಿ ಕಾವ್ಯ ಮಾಧವನ್ ಬಳಿ ಪಲ್ಸರ್ ಸುನಿ ಕಾರ್ ಡ್ರೈವರ್ ಆಗಿ ಕೆಲಸ ಮಾಡಿದ್ದ. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ಫೋನ್ ನಿಂದ ದಿಲೀಪ್ ಗೆ ಸುನಿ ಕರೆ ಮಾಡಿದ್ದ. ಹಾಗೂ ದಿಲೀಪ್ ಹೇಳಿದಂತೆ ಸುನಿಗೆ ಇಪ್ಪತ್ತೈದು ಸಾವಿರ ರೂಪಾಯಿ ನೀಡಿದ್ದೆ ಎಂದು ಸ್ವತಃ ಕಾವ್ಯ ಮಾಧವನ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದರಂತೆ.

ಸುನಿ ಹೇಳಿದ್ದೂ ಅದೇ.!

''ಹೀನ ಕೃತ್ಯ ಎಸಗಲು ನನಗೆ ದುಡ್ಡು ಕೊಟ್ಟಿದ್ದೇ ಕಾವ್ಯ ಮೇಡಂ'' ಎಂದು ಪಲ್ಸರ್ ಸುನಿ ಕೂಡ ಹೇಳಿದ್ದಾನೆ.

ನಟ ದಿಲೀಪ್ ಬಂಧನದ ಹಿಂದಿರುವ ಸಾಕ್ಷಿಗಳೇನು?

ಪಲ್ಸರ್ ಸುನಿ ಕೊಟ್ಟ ಹೇಳಿಕೆಯಿಂದ ಬಂಧಿತನಾದ ದಿಲೀಪ್

''ಲೈಂಗಿಕ ಕಿರುಕುಳ ಪ್ರಕರಣದ ರುವಾರಿ ನಟ ದಿಲೀಪ್'' ಎಂದು ತನ್ನ ಸಹ ಖೈದಿಗೆ ಪಲ್ಸರ್ ಸುನಿ ಮಾಹಿತಿ ನೀಡಿದ್ದ. ಇದನ್ನ ಬೆನ್ನಟ್ಟಿದ ಪೊಲೀಸರು ನಟ ದಿಲೀಪ್ ರನ್ನ ವಿಚಾರಣೆಗೆ ಒಳಪಡಿಸಿ, ಕೆಲ ಸಾಕ್ಷಿಗಳನ್ನು ಕಲೆಹಾಕಿ ಬಂಧಿಸಿದರು. ಸದ್ಯ ಕಂಬಿ ಎಣಿಸುತ್ತಿರುವ ನಟ ದಿಲೀಪ್ ಗೆ ಜಾಮೀನು ನೀಡಲು ಕೋರ್ಟ್ ಕೂಡ ನಿರಾಕರಿಸಿದೆ.

ನಟಿ ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್ ಗೆ 12 ತಾಸು ವಿಚಾರಣೆ

ವೈಯುಕ್ತಿಕ ದ್ವೇಷ ಕಾರಣ

ನಟಿ ಕಾವ್ಯ ಮಾಧವನ್ ಜೊತೆ ದಿಲೀಪ್ ಗೆ ಸಂಬಂಧ ಇದೆ ಎಂಬುದನ್ನ ದಿಲೀಪ್ ಪತ್ನಿ ಮಂಜು ವಾರಿಯರ್ ಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ನಟಿ ಮಾಹಿತಿ ನೀಡಿದ್ದರಂತೆ. ಇದೇ ಕಾರಣಕ್ಕೆ ಮಲಯಾಳಂ ನಟಿಯ ಮೇಲೆ ದಿಲೀಪ್ ಹಾಗೂ ಕಾವ್ಯ ಮಾಧವನ್ ಗೆ ಕೋಪ ಇತ್ತು. ಆ ಸೇಡಿನಿಂದ 2013 ರಲ್ಲಿಯೇ 'ಆ' ನಟಿಯನ್ನು ಅಪಹರಣ ಮಾಡಲು ದಿಲೀಪ್ ಸಂಚು ರೂಪಿಸಿದ್ದರು ಎನ್ನಲಾಗಿದೆ. ನಟಿ ಮಂಜು ವಾರಿಯರ್ ಹಾಗೂ ದಿಲೀಪ್ ವಿವಾಹ ಸಂಬಂಧ ಮುರಿದು ಬಿದ್ದು, ಇತ್ತೀಚೆಗಷ್ಟೇ ಕಾವ್ಯ ಮಾಧವನ್ ರನ್ನ ದಿಲೀಪ್ ವರಿಸಿದ್ದರು. ಮಂಜು ವಾರಿಯರ್ ಗೆ ದಿಲೀಪ್ ವಿಚ್ಛೇದನ ನೀಡುವ ಸಂದರ್ಭದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ನಟಿ ಮಂಜು ಪರ ನಿಂತಿದ್ದರು. ಇದರಿಂದ ದಿಲೀಪ್, ಕಾವ್ಯ ಹಾಗೂ 'ಆ' ನಟಿ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿತ್ತು.

ಬಹುಭಾಷಾ ನಟಿಯ ಲೈಂಗಿಕ ದೌರ್ಜನ್ಯಕ್ಕೆ ಕಾರಣವೇನು? ಸತ್ಯ ಹೊರಬಿತ್ತು..

ಫೆಬ್ರವರಿ 17 ರಂದು ನಡೆದಿದ್ದ ಘಟನೆ

ಫೆಬ್ರವರಿ 17 ರಂದು ರಾತ್ರಿ 9.30 ರ ಸುಮಾರಿಗೆ, ಕೇರಳದ ಕೊಚ್ಚಿ ಇಂದ ತ್ರಿಶೂರ್ ಗೆ ತೆರಳುತ್ತಿದ್ದ ಮಲೆಯಾಳಂ ನಟಿಯನ್ನು ಐದು ಜನ ದುಷ್ಕರ್ಮಿಗಳ ತಂಡ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ್ದರು. ಇಡೀ ಘಟನೆಯನ್ನ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡು, ಕಾರಿನಲ್ಲಿಯೇ ನಟಿಯನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ತದನಂತರ ತಮಗೆ ಪರಿಚಯವಿದ್ದ ನಿರ್ಮಾಪಕರೊಬ್ಬರ ಮನೆಗೆ ತೆರಳಿದ ನಟಿ ಪೊಲೀಸರಿಗೆ ದೂರು ನೀಡಿದ್ದರು.

English summary
Pulsar Suni, the prime accused in the Malayalam actress molestation case has revealed that the madam, who allegedly masterminded the crime, was actor Dileep's wife and actress Kavya Madhavan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada