ಮಲೆಯಾಳಂ ನಟಿ ಮೇಲೆ ಲೈಂಗಿಕ ದೌರ್ಜನ್ಯ: ಘಟನೆ ಹಿಂದೆ ಖ್ಯಾತನಾಮರ ಕೈವಾಡ.!

By Harshitha

ಕನ್ನಡ ಚಿತ್ರಗಳಲ್ಲೂ ನಟಿಸಿರುವ ಬಹುಭಾಷಾ ನಟಿಯನ್ನ ಅಪಹರಿಸಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಪಲ್ಸರ್ ಸುನಿ ಚಿತ್ರರಂಗದ ಖ್ಯಾತನಾಮರ ಹೆಸರನ್ನು ಬಾಯಿಬಿಟ್ಟಿದ್ದಾನೆ. ಈ ಇಡೀ ಪ್ರಕರಣ ಹಿಂದೆ 'ಮೆಗಾಸ್ಟಾರ್' ಇದ್ದಾರೆ ಎಂದು ಪಲ್ಸರ್ ಸುನಿ ಬಹಿರಂಗ ಪಡಿಸಿದ್ದಾನೆ.

ಮಲಯಾಳಂ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 'ಮೆಗಾಸ್ಟಾರ್' ಹಾಗೂ ಪ್ರಖ್ಯಾತ ನಿರ್ದೇಶಕರೊಬ್ಬರು ಭಾಗಿಯಾಗಿದ್ದಾರೆ ಎಂದು ಪಲ್ಸರ್ ಸುನಿ ಹೇಳಿಕೆ ನೀಡಿರುವುದರಿಂದ ಈ ಹೈಪ್ರೋಫೈಲ್ ಕೇಸ್ ಗೆ ರೋಚಕ ತಿರುವು ಸಿಕ್ಕಂತಾಗಿದೆ. ಮುಂದೆ ಓದಿರಿ...

ಸುನಿ ಬಾಯ್ಬಿಟ್ಟ ರೋಚಕ ಸಂಗತಿ

ಸುನಿ ಬಾಯ್ಬಿಟ್ಟ ರೋಚಕ ಸಂಗತಿ

ಚಿತ್ರರಂಗದ ಘಟಾನುಘಟಿಗಳು ತನ್ನನ್ನು ಈ ಕೃತ್ಯದಲ್ಲಿ ಬಳಸಿಕೊಂಡಿದ್ದಾರೆ ಎಂದು ಪಲ್ಸರ್ ಸುನಿ, ಜೈಲುಪಾಲಾಗಿರುವ ಮತ್ತೊಬ್ಬ ಅಪರಾಧಿ ಜಿನ್ಸೆ ಎದುರು ಒಪ್ಪಿಕೊಂಡಿದ್ದಾನೆ ಎಂದು ವರದಿ ಆಗಿದೆ.

ಬಾಡಿಗೆಗೆ ಪಡೆದಿದ್ದ 'ಮೆಗಾಸ್ಟಾರ್'

ಬಾಡಿಗೆಗೆ ಪಡೆದಿದ್ದ 'ಮೆಗಾಸ್ಟಾರ್'

ನಟಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಚಿತ್ರರಂಗದ 'ಮೆಗಾಸ್ಟಾರ್' ತನ್ನನ್ನು ಬಾಡಿಗೆಗೆ ಪಡೆದಿದ್ದರು ಎಂಬ ಶಾಕಿಂಗ್ ಸಂಗತಿಯನ್ನು ಜಿನ್ಸೆ ಎದುರು ಪಲ್ಸರ್ ಸುನಿ ಹೊರ ಹಾಕಿದ್ದಾನೆ.

ಮಲಯಾಳಂ ನಟಿ ಅತ್ಯಾಚಾರ : ಆ ಮೆಗಾಸ್ಟಾರ್ ಯಾರು?

ವಿಚಾರಣೆ ಸಾಧ್ಯತೆ

ವಿಚಾರಣೆ ಸಾಧ್ಯತೆ

ಲೈಂಗಿಕ ದೌರ್ಜನ್ಯ ಎಸೆಗಲು 'ಮೆಗಾಸ್ಟಾರ್' ತನ್ನನ್ನು ಬಾಡಿಗೆಗೆ ಪಡೆದಿದ್ದರೆ, 'ಖ್ಯಾತ ನಿರ್ದೇಶಕ' ಆಕೆಯ ಪ್ರಯಾಣದ ರೂಪುರೇಷೆಗಳನ್ನು ಸಿದ್ದಪಡಿಸಿದ್ದರು ಎಂದು ಪಲ್ಸರ್ ಸುನಿ ಹೇಳಿದ್ದಾನೆ. ಜೊತೆಗೆ, ಆ ಮಲೆಯಾಳಂ ನಟಿ 'ಎಂಗೇಜ್' ಆಗಿದ್ದರಿಂದ, ಪೊಲೀಸ್ ಗೆ ದೂರು ನೀಡುವುದಿಲ್ಲ ಎಂಬ ನಂಬಿಕೆ 'ಆ' ಮೆಗಾಸ್ಟಾರ್ ಗೆ ಇತ್ತು ಎಂದಿದ್ದಾನೆ. ಸುನಿ ಹೇಳಿಕೆಯ ಆಧಾರದ ಮೇಲೆ 'ಮೆಗಾಸ್ಟಾರ್' ಹಾಗೂ 'ಖ್ಯಾತ ನಿರ್ದೇಶಕ'ರನ್ನ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಅಂದು ನಡೆದಿದ್ದೇನು.?

ಅಂದು ನಡೆದಿದ್ದೇನು.?

ಫೆಬ್ರವರಿ 17 ರಂದು ರಾತ್ರಿ 9.30 ರ ಸುಮಾರಿಗೆ, ಕೇರಳದ ಕೊಚ್ಚಿ ಇಂದ ತ್ರಿಶೂರ್ ಗೆ ತೆರಳುತ್ತಿದ್ದ ಮಲೆಯಾಳಂ ನಟಿಯನ್ನು ಐದು ಜನ ದುಷ್ಕರ್ಮಿಗಳ ತಂಡ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ್ದರು. ಇಡೀ ಘಟನೆಯನ್ನ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡು, ಕಾರಿನಲ್ಲಿಯೇ ನಟಿಯನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ತದನಂತರ ತಮಗೆ ಪರಿಚಯವಿದ್ದ ನಿರ್ಮಾಪಕರೊಬ್ಬರ ಮನೆಗೆ ತೆರಳಿದ ನಟಿ ಪೊಲೀಸರಿಗೆ ದೂರು ನೀಡಿದ್ದರು.

More from Filmibeat

English summary
Pulsar Suni, the prime accused in the Malayalam actress molestation case is said to have confessed about industry bigwigs hiring him. Suni is said to have revealed details of the 'megastar' who hired him to assault the actress to his jailmate who will now be questioned in the case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X