ನಟಿ ಮೈಥಿಲಿ ವೈಯಕ್ತಿಕ ಫೋಟೋಗಳು ಲೀಕ್, ಆರೋಪಿ ಬಂಧನ
ಮಲಯಾಳಂ ನಟಿ ಮೈಥಿಲಿ ರವರ ವೈಯಕ್ತಿಕ ಫೋಟೋಗಳು ಆನ್‌ಲೈನ್ ನಲ್ಲಿ ಲೀಕ್ ಆಗಿವೆ. ಈ ಹಿನ್ನೆಲೆಯಲ್ಲಿ ಒಟ್ಟಪ್ಪಾಳಂ ಮೂಲದ ಚಿತ್ರ ನಿರ್ಮಾಣ ಕಾರ್ಯನಿರ್ವಾಹಕ ಕಿರಣ್ ಕುಮಾರ್ ಎಂಬುವರನ್ನು ನಟಿ ನೀಡಿದ್ದ ದೂರಿನ ಆಧಾರದಲ್ಲಿ ಕೇರಳ ಪೊಲೀಸರು ಬಂಧಿಸಿದ್ದಾರೆ.
ಒಟ್ಟಪ್ಪಾಳಂ ಮೂಲದ ಚಿತ್ರ ನಿರ್ಮಾಣ ಕಾರ್ಯನಿರ್ವಾಹಕ ಕಿರಣ್ ಕುಮಾರ್, ನಟಿ ಮೈಥಿಲಿ ಕೆಲವು ಬೇಡಿಕೆಗಳನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರ ವೈಯಕ್ತಿಕ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಎಂಬ ಆರೋಪದಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

'ಮೈಥಿಲಿ ರವರು 2008 ರಿಂದ ಕಿರಣ್ ಕುಮಾರ್ ಜೊತೆ ಸ್ನೇಹ ಸಂಬಂಧ ಹೊಂದಿದ್ದರು. ಆದರೆ ಆತನಿಗೆ ಮದುವೆ ಆಗಿದೆ ಎಂದು ತಿಳಿದ ನಂತರ ತಮ್ಮ ಸ್ನೇಹ ಸಂಬಂಧವನ್ನು ಅಂತ್ಯಗೊಳಿಸಲು ತೀರ್ಮಾನಿಸಿದ್ದರು. ಕಿರಣ್ ರವರು ನಟಿಯನ್ನು ಮದುವೆ ಆಗುವುದಾಗಿ ಮಾತು ಸಹ ನೀಡಿದ್ದರು' ಎಂಬುದು ಮಾಧ್ಯಮ ವರದಿಗಳ ಮೂಲಕ ತಿಳಿದಿದೆ.
ನಟಿಯೂ ಆರೋಪಿ ಕಿರಣ್ ಕುಮಾರ್ ಜೊತೆಗಿನ ಸಂಬಂಧವನ್ನು ಅಂತ್ಯಗೊಳಸಿಲು ತೀರ್ಮಾನಿಸಿದಾಗ ಆಕೆಯಲ್ಲಿ 75 ಲಕ್ಷ ರೂ ಹಣ ಬೇಡಿಕೆ ಇಟ್ಟು, ಕೊಡದಿದ್ದಲ್ಲಿ ಇಬ್ಬರು ತೆಗೆಸಿಕೊಂಡಿದ್ದ ಹಲವು ಫೋಟೋಗಳನ್ನು ಲೀಕ್ ಮಾಡುವುದಾಗಿ ಕಿರಣ್ ಬೆದರಿಕೆ ನೀಡಿದ್ದರಂತೆ. ಅಲ್ಲದೇ ಹಲವು ಬಾರಿ ಶೂಟಿಂಗ್ ಸ್ಪಾಟ್‌ಗಳಿಗೂ ಭೇಟಿ ನೀಡಿ ಬೆದರಿಗೆ ಹಾಕಿದ್ದರಂತೆ. ಇದರಿಂದ ನೊಂದ ನಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಂಧಿತ ಆರೋಪಿ ಕಿರಣ್ ಕುಮಾರ್ ನಟಿಯ ಕೆಲವು ಅವಹೇಳನಕಾರಿ ಫೋಟೋಗಳನ್ನು ಇಂಟರ್‌ನೆಟ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ಚಿತ್ರಗಳು ವೈರಲ್ ಆಗಿದ್ದವು. ಈ ವಿಷಯ ತಿಳಿದ ಮೈಥಿಲಿ ರವರು ಕಿರಣ್ ಕುಮಾರ್ ವಿರುದ್ಧ ಸೈಬರ್ ಅಪರಾಧ ಮತ್ತು ಮಹಿಳಾ ನಿಂದನಾತ್ಮಕ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ನಟಿ ನೀಡಿರುವ ದಾಖಲೆ ಆಧಾರದಲ್ಲಿ ಪೊಲೀಸರು ಇತರರು ಯಾರಾದರು ಫೋಟೋ ಪೋಸ್ಟ್ ಮಾಡಿದ್ದಾರಾ ಎಂದು ತಿಳಿಯಲು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ವೈರಲ್ ಆಗಿರುವ ನಟಿಯ ವೈಯಕ್ತಿಕ ಫೋಟೋಗಳನ್ನು ಶೇರ್ ಮಾಡಿರುವವರ ವಿರುದ್ಧವೂ ಜಾಮೀನು ರಹಿತ ದೂರು ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟಿ ಮೈಥಿಲಿ ರವರು ಮಲಯಾಳಂನ ಕ್ರೈಂ ಥ್ರಿಲ್ಲರ್ ಸಿನಿಮಾ 'Paleri Manikyam: Oru Pathirakolapathakathinte Katha' ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲದೇ ಹಲವು ಮಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











