For Quick Alerts
  ALLOW NOTIFICATIONS  
  For Daily Alerts

  ನಟಿ ಮೇಘನಾಗೆ ವಿಶ್ ಮಾಡಿದ ಮಲಯಾಳಂ ಸುಂದರಿ ನಜ್ರಿಯಾ ನಜೀಮ್

  |

  ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಇಂದು ಹುಟ್ಟಿದ ದಿನ. ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಮೇಘನಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಮೇಘನಾ ರಾಜ್ ಆಪ್ತೆ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ನಜ್ರಿಯಾ ನಜೀಮ್ ಕ್ಯೂಟ್ ವಿಶ್ ಮಾಡಿದ್ದಾರೆ.

  ಮೇಘನಾ ಮತ್ತು ನಜ್ರಿಯಾ ಇಬ್ಬರು ಉತ್ತಮ ಸ್ನೇಹಿತರು. ಮೇಘನಾ ಮತ್ತು ಚಿರು ಮದುವೆಗೆ ಹಾಜರಾಗಿದ್ದ ನಜ್ರಿಯಾ ದಂಪತಿ ಬಳಿಕ ಮೇಘನಾ ಮುದ್ದಾದ ಮಗುವಿಗೆ ಜನ್ಮ ನೀಡಿದಾಗ ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮೇಘನಾ ಕುಟುಂಬದ ಜೊತೆ ಬಾಂಧವ್ಯ ಇಟ್ಟುಕೊಂಡಿರುವ ನಜ್ರಿಯಾ ಇಂದು ಗೆಳತಿಯ ಹುಟ್ಟುಹಬ್ಬದ ಪ್ರಯುಕ್ತ ಮೇಘನಾ ಮತ್ತು ಚಿರಂಜೀವಿ ಸರ್ಜಾ ಜೊತೆ ಇರುವ ಫೋಟೋವನ್ನು ಶೇರ್ ಮಾಡುವ ಮೂಲಕ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ...

  ಚಿರು ಇಲ್ಲದೇ ಮೇಘನಾ ಮೊದಲ ಹುಟ್ಟುಹಬ್ಬ: ಪುತ್ರನ ವಿಡಿಯೋ ಹಂಚಿಕೊಂಡ ನಟಿಚಿರು ಇಲ್ಲದೇ ಮೇಘನಾ ಮೊದಲ ಹುಟ್ಟುಹಬ್ಬ: ಪುತ್ರನ ವಿಡಿಯೋ ಹಂಚಿಕೊಂಡ ನಟಿ

  ನಜ್ರಿಯಾ ಪ್ರೀತಿಯ ವಿಶ್

  ನಜ್ರಿಯಾ ಪ್ರೀತಿಯ ವಿಶ್

  ಮೇಘನಾ ಮತ್ತು ಚಿರು ಜೊತೆ ನಗುತ್ತಿರುವ ಫೋಟೋ ಜೊತೆಗೆ 'ಹುಟ್ಟುಹಬ್ಬದ ಶುಭಾಶಯಗಳು ಸಹೋದರಿ, ಲವ್ ಯೂ ಲಾಂಗ್' ಎಂದು ಬರೆದುಕೊಂಡಿದ್ದಾರೆ. ನಜ್ರಿಯಾ ಪೋಸ್ಟ್ ಗೆ ಮೇಘನಾ ಪ್ರತಿಕ್ರಿಯೆ ನೀಡಿ, 'ಮೈ ಬೇಬಿ ಗರ್ಲ್, ಧನ್ಯವಾದಗಳು. ಲವ್ ಯೂ ಲಾಂಗ್ ಟೈಂ' ಎಂದು ಹೇಳಿದ್ದಾರೆ.

  ಅಭಿಮಾನಿಗಳ ಪ್ರೀತಿಯ ಕಾಮೆಂಟ್

  ಅಭಿಮಾನಿಗಳ ಪ್ರೀತಿಯ ಕಾಮೆಂಟ್

  ಈ ಪೋಸ್ಟ್ ಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಕಳುಹಿಸುತ್ತಿದ್ದಾರೆ. ನಿರ್ದೇಶಕ ಪನ್ನಗಾಭರಣ ಕೂಡ ಹಾರ್ಟ್ ಇಮೋಜಿ ಹಾಕಿದ್ದಾರೆ. ಮೇಘನಾ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಮಲಯಾಳಂನಲ್ಲಿ ಮೇಘನಾ ಅಪಾರ ಅಭಿಮಾನಿ ಬಳಗಹೊಂದಿದ್ದಾರೆ.

  ಮೇಘನಾ ಮದುವೆ ವಾರ್ಷಿಕೋತ್ಸವ

  ಮೇಘನಾ ಮದುವೆ ವಾರ್ಷಿಕೋತ್ಸವ

  ಮೇಘನಾ ರಾಜ್ ಜನ್ಮದಿನಕ್ಕೂ ಒಂದು ದಿನ ಮೊದಲು ಮದುವೆ ವಾರ್ಷಿಕೋತ್ಸವ. 2018, ಮೇ 2 ಮೇಘನಾ ಮತ್ತು ಚಿರಂಜೀವಿ ಸರ್ಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2020ರಲ್ಲಿ ಅಂದರೆ ಮದುವೆಯಾಗಿ ಎರಡು ವರ್ಷದಲ್ಲೇ ಪತಿ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಪತಿಯ ಹಠಾತ್ ನಿಧನ ಮೇಘನಾಗೆ ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  'ಮರಳಿ ಬಾ ಚಿರು...' ಎಂದು ಭಾವುಕರಾದ ನಟಿ ಮೇಘನಾ ರಾಜ್'ಮರಳಿ ಬಾ ಚಿರು...' ಎಂದು ಭಾವುಕರಾದ ನಟಿ ಮೇಘನಾ ರಾಜ್

  ಮನ ಮುಟ್ಟುವಂತಿದೆ ಚಿರು ಫೋಟೋ‌ ಮುಂದೆ ಮಗನ ಆಟದ ವಿಡಿಯೋ | Filmibeat Kannada
  ಪುತ್ರನ ವಿಡಿಯೋ ಹಂಚಿಕೊಂಡ ಮೇಘನಾ

  ಪುತ್ರನ ವಿಡಿಯೋ ಹಂಚಿಕೊಂಡ ಮೇಘನಾ

  ಮದುವೆ ವಾರ್ಷಿಕೋತ್ಸವ ಮತ್ತು ಹುಟ್ಟುಹಬ್ಬದ ಸಮಯದಲ್ಲಿ ಮೇಘನಾ ಮುದ್ದಿನ ಮಗ ಜೂ.ಚಿರು ಕ್ಯೂಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೂ.ಚಿರು ಅಪ್ಪ ಚಿರಂಜೀವಿ ಫೋಟೋ ಮುಂದೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುದ್ದಾದ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

  English summary
  Malayalam Actress Nazriya birthday wishes to Meghana raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X