'ವಿಷ್ಣುಪ್ರಿಯ' ಮೂಲಕ ಕನ್ನಡಕ್ಕೆ ಬಂದ ಪ್ರಿಯಾ ಪ್ರಕಾಶ್
ಕಣ್ಸನ್ನೆಯ ಮೂಲಕ ಖ್ಯಾತಿಗಳಿಸಿರುವ ಮಲಯಾಳಿ ಬೆಡಗಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಿಯಾ ಪ್ರಕಾಶ್ ಕನ್ನಡಕ್ಕೆ ಬರ್ತಾರೆ ಎನ್ನುವ ಸುದ್ದಿ ಸುಮಾರು ವರ್ಷದಿಂದನೆ ಕೇಳಿ ಬರುತ್ತಿತ್ತು. ಆದ್ರೀಗ ಪ್ರಿಯಾ ಸ್ಯಾಂಡಲ್ ವುಡ್ ಗೆ ಬರೋದು ಪಕ್ಕಾ ಆಗಿದೆ.
ಅಂದ್ಹಾಗೆ ಪಡ್ಡೆಹುಲಿ ಖ್ಯಾತಿಯ ನಟ ಶ್ರೇಯಸ್ ಮಂಜು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವಿಷ್ಣುಪ್ರಿಯ ಚಿತ್ರದ ಮೂಲಕ ಪ್ರಿಯಾ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದಲ್ಲಿ ಪ್ರಿಯಾ ನಾಯಕಿಯಾಗಿ ಮಿಂಚುವ ಮೂಲಕ ಕನ್ನಡಾಭಿಮಾನಿಗಳನ್ನು ರಂಜಿಸಲಿದ್ದಾರೆ.
ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಪಡ್ಡೆಹುಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕೆ ಮಂಜು ಮತ್ತು ಮಗ ಶ್ರೇಯಸ್ ಇಬ್ಬರು ವಿಷ್ಣುವರ್ಧನ್ ಅಪ್ಪಟ ಅಭಿಮಾನಿ. ಶ್ರೇಯಸ್ ಸಿನಿಮಾದಲ್ಲಿ ವಿಷ್ಣು ಛಾಯೆ ಕಾಣಿಸುತ್ತೆ. ಎರಡನೆ ಸಿನಿಮಾದಲ್ಲೂ ವಿಷ್ಣು ಹೆಸರು ಇಡುವ ಮೂಲಕ ವಿಷ್ಣುವರ್ಧನ್ ಮೇಲಿನ ಅಭಿಮಾನವನ್ನು ಮೆರೆಯುತ್ತಿದ್ದಾರೆ.

ಚಿತ್ರಕ್ಕೆ ಮಲಯಾಳಂನ ಖ್ಯಾತ ನಿರ್ದೇಶಕ ವಿ ಕೆ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನೈಜ್ಯ ಘಟನೆ ಆಧಾರಿತ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಧಾರವಾಡ ಮೂಲಕದ ಸಿಂಧು ಶ್ರೀ ಕಥೆ ಬರೆದಿದ್ದಾರೆ. ಮುಂದಿನ ತಿಂಗಳು ಸೆಪ್ಟಂಬರ್ 9ಕ್ಕೆ ಚಿತ್ರ ಸೆಟ್ಟೇರಲಿದೆ. ಅದಕ್ಕು ಮೊದಲು ಚಿತ್ರತಂಡ ವರ್ಕ್ ಶಾಪ್ ಮಾಡಲಿದ್ದು ಪ್ರಿಯಾ ಪ್ರಕಾಶ್ ಮುಂದಿನ ತಿಂಗಳೆ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.


Click it and Unblock the Notifications











