'ನ್ಯಾಷನಲ್ ಕ್ರಶ್' ಆಗಿರುವ ಪ್ರಿಯಾ ಆಡಿರುವ ಮಾತು ಮಿಸ್ ಮಾಡದೆ ಕೇಳಿ
Recommended Video

ಮಲೆಯಾಳಂ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ. ಆದರೆ ಈ ಚಂದದ ಹುಡುಗಿ ಒಂದೇ ಒಂದು ಹಾಡಿನ ಸಣ್ಣ ತುಣುಕಿನ ಮೂಲಕ ಇಂದು ದೇಶಾದ್ಯಂತ ಫೇಮಸ್ ಆಗಿದ್ದಾಳೆ.
ಪ್ರಿಯಾ ಪ್ರಕಾಶ್ ವಾರಿಯರ್ 'ಒರು ಅಡಾರ್ ಲವ್' (Ooru adaar love) ಎಂಬ ಮಲೆಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರಿಯಾ ಕಾಲಿಟ್ಟಿದ್ದಾರೆ. ಪ್ರಿಯಾ ಮೊದಲ ಸಿನಿಮಾದ ಮೊದಲ ಹಾಡಿನ ದೃಶ್ಯದಿಂದಲೇ ಈಗ ಸಖತ್ ಫೇಮಸ್ ಆಗಿದೆ. ಯೂ ಟ್ಯೂಬ್ ನಲ್ಲಿ ಪ್ರಿಯಾ ಮೊದಲ ಸಿನಿಮಾದ ಮೊದಲ ಹಾಡು ನಿನ್ನೆಯಿಂದ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂ 1ನಲ್ಲಿ ಇದೆ. 4 ಮಿಲಿಯನ್ ಜನರು ಈ ಹಾಡನ್ನು ಈಗಾಗಲೇ ವೀಕ್ಷಿಸಿದ್ದಾರೆ.
ಅಂದಹಾಗೆ, ಈ ಮಟ್ಟದ ಜನಪ್ರಿಯತೆ ಗಳಿಸಿದ ನಂತರ ನಟಿ ಪ್ರಿಯಾ ತಮ್ಮ ಬಗ್ಗೆ ನೇರವಾಗಿ ಫ್ಯಾನ್ಸ್ ಜೊತೆಗೆ ಮಾತನಾಡಿದ್ದಾರೆ. ಅವರ ಮಾತುಗಳು ಮುಂದಿದೆ ಓದಿ...

ಫೇಸ್ ಬುಕ್ ಖಾತೆಯಲ್ಲಿ ಲೈವ್
ತಮ್ಮ ವಿಡಿಯೋಗಳು ಎಲ್ಲಡೆ ವೈರಲ್ ಆಗುವುದನ್ನು ಕಂಡು ಬೆರಗಾದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತಕ್ಷಣ ಫೇಸ್ ಬುಕ್ ಲೈವ್ ಬಂದು ತನ್ನ ಬಗ್ಗೆ ಅಭಿಮಾನಿಗಳಿಗೆ ಪರಿಚಯ ಮಾಡಿಕೊಂಡಿದ್ದಾರೆ.

ಪ್ರಿಯಾ ಪ್ರಕಾಶ್ ವಾರಿಯರ್ ಮಾತು
''ಹಾಯ್... ನಾನು ಪ್ರಿಯಾ. ಎಲ್ಲರೂ ನಮ್ಮ ಸಿನಿಮಾದ ಹಾಡನ್ನು ನೋಡಿ ಇಷ್ಟ ಪಟ್ಟಿದಕ್ಕೆ ಥ್ಯಾಂಕ್ಯು. ಈಗಾಗಲೇ ನನ್ನ ಅನೇಕ ಫೇಕ್ ಅಕೌಂಟ್ ಗಳು ಫೇಸ್ ಬುಕ್ ನಲ್ಲಿ ಬಂದಿದೆ. ಆದರೆ ಇದು ನನ್ನ ಅಫೀಷಿಯಲ್ ಫೇಸ್ ಬುಕ್ ಪೇಜ್. ಎಲ್ಲರೂ ಈ ಪೇಜ್ ಅನ್ನು ಫಾಲೋ ಮಾಡಿ. ನಿಮ್ಮ ಪ್ರೀತಿ, ಸಪೋರ್ಟ್ ಗೆ ಥ್ಯಾಂಕ್ಯು.'' - ಪ್ರಿಯಾ ಪ್ರಕಾಶ್ ವಾರಿಯರ್, ನಟಿ

ಶುರುವಿನಿಂದ ಆಕ್ಟಿಂಗ್ ಕ್ರೇಜ್ ನನಗೆ ಇತ್ತು.
''ನಮ್ಮ ಸಿನಿಮಾ ಎಪ್ರಿಲ್ ನಲ್ಲಿ ರಿಲೀಸ್ ಆಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಇದೇ ರೀತಿ ಸಪೋರ್ಟ್ ಮಾಡಿ. ಶುರುವಿನಿಂದ ನನಗೆ ಆಕ್ಟಿಂಗ್ ಕ್ರೇಜ್ ಇತ್ತು. ಸ್ಕೂಲ್ ನಲ್ಲಿ ಡ್ಯಾನ್ಸ್, ಡ್ರಾಮಾ ಮಾಡುತ್ತಿದ್ದೆ. ಶಾರ್ಟ್ ಫಿಲ್ಮ್ ಗಳನ್ನು ಮಾಡಿದ್ದೇನೆ. ಕಾಲೇಜಿನಲ್ಲಿ ಫ್ಯಾಷನ್ ಶೋ ಮತ್ತು ರಾಂಪ್ ಶೋ ಗಳಲ್ಲಿಯೂ ಭಾಗವಹಿಸಿದ್ದೇನೆ'' - ಪ್ರಿಯಾ ಪ್ರಕಾಶ್ ವಾರಿಯರ್, ನಟಿ

ಆಡಿಷನ್ ಮೂಲಕ ಆಯ್ಕೆ ಆದೆ
''ಈ ಸಿನಿಮಾದ ಆಡಿಷನ್ ಇದ್ದಾಗ ಹೋಗಿ ಸುಮ್ಮನೆ ಪ್ರಯತ್ನ ಮಾಡಿದೆ. ಆಮೇಲೆ ಚಿತ್ರತಂಡದಿಂದ ಕಾಲ್ ಬಂತು. ಈ ಪಾತ್ರ ಮಾಡುತ್ತೀಯ ಅಂದಾಗ ಓಕೆ ಅಂದೆ. ಈ ರೀತಿ ನಾನು 'ಒರು ಅಡಾರ್ ಲವ್' (Ooru adaar love) ಸಿನಿಮಾಗೆ ಆಯ್ಕೆ ಆದೆ.'' - ಪ್ರಿಯಾ ಪ್ರಕಾಶ್ ವಾರಿಯರ್, ನಟಿ

18 ವರ್ಷದ ಹುಡುಗಿ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿರುವ ಈ ಹುಡುಗಿಯ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್. 18 ವರ್ಷದ ಈ ಹುಡುಗಿ ಕೇರಳದ ತ್ರಿಶೂರ್ ನಲ್ಲಿರುವ ವಿಮಲ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾಳೆ.


Click it and Unblock the Notifications











