ರಿಷಿಗಾಗಿ ಖುಷಿಯಿಂದ ಕನ್ನಡಕ್ಕೆ ಬಂದ ಕೇರಳ ಕುವರಿ
Recommended Video

ನಟ ರಿಷಿ 'ಆಪರೇಷನ್ ಅಲಮೇಲಮ್ಮ' ಚಿತ್ರದ ನಂತರ ಪುನೀತ್ ರಾಜ್ ಕುಮಾರ್ ಅವರ 'ಕವಲುದಾರಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತಮಿಳು ನಟ ಧನುಷ್ ಕನ್ನಡದಲ್ಲಿ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ ಸಹ ರಿಷಿ ಆಯ್ಕೆ ಆಗಿದ್ದರು. ಆದರೆ ಈಗ ಈ ಚಿತ್ರಕ್ಕೆ ಒಬ್ಬ ನಾಯಕಿಯ ಆಗಮನ ಆಗಿದೆ.
ರಿಷಿಗೆ ಜೋಡಿಯಾಗಿ ಮಲೆಯಾಳಂ ಚಲುವೆ ರೆಬಾ ಮೋನಿಕಾ ಜಾನ್ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾವಾಗಿದ್ದು, ಈ ಹಿಂದೆ ಮಲೆಯಾಳಂ ನಲ್ಲಿ ಎರಡು ಚಿತ್ರ ಹಾಗೂ ತಮಿಳು ಭಾಷೆಯ ಎರಡು ಚಿತ್ರಗಳಲ್ಲಿ ರೆಬಾ ನಟಿಸಿದ್ದರು. ನಿವಿನ್ ಪೌಲಿ ಜೊತೆ 'ಕಾಕೊಬಿಂಟೆ ಸ್ವರ್ಗರಾಜ್ಯಂ' ಎಂಬ ಸಿನಿಮಾದಲ್ಲಿ ರೆಬಾ ಗಮನ ಸೆಳೆದಿದ್ದರು.

24 ವರ್ಷದ ನಟಿ ರೆಬಾ ಓದಿದ್ದು ಬೆಂಗಳೂರಿನಲ್ಲಿಯೇ. ಜ್ಯೋತಿ ನಿವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ರೆಬಾ ನಂತರ ಕೆಲ ಜಾಹಿರಾತುಗಳಲ್ಲಿ ಮಿಂಚಿದರು. 2016 ರಲ್ಲಿ ಮಾಲಿವುಡ್ ನಲ್ಲಿ ತಮ್ಮ ಸಿನಿ ಜರ್ನಿ ಶುರು ಮಾಡಿದರು. ಅಂದಹಾಗೆ, ನಿತ್ಯಾ ಮೆನನ್ ಪಾರ್ವತಿ ಮೆನನ್ ರೀತಿ ಈಗ ಮತ್ತೊಬ್ಬ ಮಲೆಯಾಳಂ ನಟಿ ರೆಬಾ ಕೂಡ ಕನ್ನಡಕ್ಕೆ ಬಂದಿದ್ದಾರೆ.

ಅಂದಹಾಗೆ, ರಿಷಿ ಮತ್ತು ರೆಬಾ ಜೋಡಿಯನ್ನು ಒಂದು ಮಾಡಿರುವುದು ನಿರ್ದೇಶಕ ಇಸ್ಲಾವುದ್ದೀನ್. ಧನುಷ್ ಜೊತೆಗೆ ಪುನೀತ್ ಅವರ 'ಪೃಥ್ವಿ' ಚಿತ್ರ ಖ್ಯಾತಿಯ ನಿರ್ದೇಶಕ ಜೇಕಬ್ ವರ್ಗೀಸ್ ಸಹ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕಳೆದ ಸೋಮವಾರ ಚಿತ್ರದ ಮುಹೂರ್ತ ನಡೆದಿದ್ದು, ಶೂಟಿಂಗ್ ಶುರು ಆಗಿದೆ.


Click it and Unblock the Notifications











