»   » Pics : ಕಣ್ಮನ ಸೆಳೆಯುವ ಮಲ್ಲೂ ಬೆಡಗಿಯರು

Pics : ಕಣ್ಮನ ಸೆಳೆಯುವ ಮಲ್ಲೂ ಬೆಡಗಿಯರು

Posted By:
Subscribe to Filmibeat Kannada

ಮಲೆಯಾಳಂ ಚಿತ್ರರಂಗವೆಂದರೆ ನೀಲಿ ಚಿತ್ರಕ್ಕೆ ಅನ್ವರ್ಥ ನಾಮ ಎನ್ನುತ್ತಿದ್ದ ಕಾಲ ಮರೆಯಾಗಿದೆ. ತೆರೆ ಮೇಲೆ ಕಾಣಿಸಿಕೊಳ್ಳುವ ನಾಯಕಿ ನಟಿಯರು ತುಂಬು ಉಡುಗೆಯಲ್ಲೇ ರಸಿಕರ ಎದೆಗೆ ಕಚಗುಳಿ ಇಡುತ್ತಿದ್ದಾರೆ. ಗೌರಮ್ಮನ ಪಾತ್ರಗಳಲ್ಲೇ ಮಿಂಚಿ ಮರೆಯಾದ ನಟಿಯರೂ ಕೂಡಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಇದೆ

ಪದ್ಮಪ್ರಿಯ, ನವ್ಯಾ ನಾಯರ್, ನಯನತಾರಾ,ಶ್ವೇತಾ ಮೆನನ್, ಭಾವನಾ ಮೆನನ್ ಅಲ್ಲದೆ ಇತ್ತೀಚಿನ ರೀಮಾ ತನಕ ಬೆಡಗಿಯರು ಪಡ್ಡೆಗಳಿಂದ ಹಿಡಿದು ಮನೆ ಮಂದಿಗೆಲ್ಲ ಅಚ್ಚು ಮೆಚ್ಚಿನ ತಾರೆಯರಾಗಿದ್ದಾರೆ. ಪಾತ್ರಕ್ಕೆ ತಕ್ಕ ಹಾಗೆ ಗ್ಲಾಮರ್ ಉಳಿಸಿಕೊಂಡು ನಟನಾ ಪ್ರತಿಭೆಯಿಂದಲೇ ಬೆಳೆಯುವತ್ತಾ ಸಾಗಿದ್ದೇ ಇವರೆಲ್ಲರ ಏಳಿಗೆಯ ಸೂತ್ರ ಎನ್ನಬಹುದು.

ಹತ್ತು ಹಲವು ಚಿತ್ರಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಸಭ್ಯತೆಯ ಎಲ್ಲೆ ಮೀರದಂತೆ ಭಾವನೆಗಳನ್ನು ಕೆರಳಿಸುವ ಈ ಬೆಡಗಿಯರ ಕಿರು ಪರಿಚಯ ಮುಂದಿನ ಸ್ಲೈಡ್ ಗಳಲ್ಲಿ. ಸೂಚನೆ... ಇದು ಕಲಾರಸಿಕರಿಗೆ ಮಾತ್ರ...

ಭಾವನಾ ಮೆನನ್

ಕಾರ್ತಿಕಾ ಮೆನನ್(ಜನನ 6 ಜೂನ್ 1986) ಚಿತ್ರರಂಗದಲ್ಲಿ ಭಾವನಾ ಆಗಿ ಬೆಳಗುತ್ತಿದ್ದಾರೆ. ನಮ್ಮಲ್(2002) ಚಿತ್ರದಲ್ಲಿ ಕಾಣಿಸಿಕೊಂಡ ಈಕೆ ವಿಮರ್ಶಕರ ಪ್ರಶಸ್ತಿ ಗಳಿಸಿದ್ದಾಳೆ. ಕನ್ನಡದಲ್ಲಿ ವಿಷ್ಣುವರ್ಧನ ಅರಸಿಯಾಗಿ ಬಂದು ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ತೆಲುಗು, ತಮಿಳು ಚಿತ್ರರಂಗದಲ್ಲೂ ಈಕೆ ಪರಿಚಿತಳು.

ಗೀತು ಮೋಹನ್ ದಾಸ್

ಗೀತು ಮೋಹನ್ ದಾಸ್(1981ರಲ್ಲಿ ಜನನ) ಬಾಲನಟಿಯಾಗಿ ಚಿತ್ರರಂಗ ಪ್ರವೇಶ. ಹಲವಾರು ಮಲೆಯಾಳಂ ಚಿತ್ರಗಳಲ್ಲಿ ನಟನೆ, ತಮಿಳಿನಲ್ಲಿ ಮಾಧವನ್ ಜೊತೆ ಒಂದು ಚಿತ್ರದಲ್ಲಿ ಪ್ರಮುಖ ಪಾತ್ರ

ಗೋಪಿಕಾ

26 ಆಗಸ್ಟ್ 1982 ರಲ್ಲಿ ಜನಸಿದ ಗೋಪಿಕಾ ಮೂಲ ನಾಮ ಗಿರ್ಲಿ ಆಂಟೋ, 17 ಜುಲೈ 2008ರಲ್ಲಿ ಡಾ. ಅಜಿಲೇಶ್ ಚಾಕೋ ಮದುವೆ ಉತ್ತರ ಐರ್ಲೆಂಡ್ ನಲ್ಲಿ ವಾಸ. ಮದುವೆ ನಂತರ ಮತ್ತೆ ಚಿತ್ರರಂಗಕ್ಕೆ ಪ್ರವೇಶ ಹಲವು ಚಿತ್ರಗಳಲ್ಲಿ ನಟಿಸುವ ಬಯಕೆ

ಜೋತಿರ್ಮಯಿ

ನಿಶಾಂತ್ ಕುಮಾರ್ ಎಂಬುವವರನ್ನು ಸೆಪ್ಟೆಂಬರ್ 6,2004ರಲ್ಲಿ ಮದುವೆಯಾದ ಜೋತಿರ್ಮಯಿ, ಅಕ್ಟೋಬರ್ 1, 2011ರಲ್ಲಿ ವಿವಾಹ ವಿಚ್ಛೇದನ ಪಡೆದರು.

ಕಾವ್ಯ ಮಾಧವನ್

ಸ್ಥೂಲಕಾಯವುಳ್ಳ ಕಾವ್ಯ ಕಣ್ಣುಗಳಲ್ಲೇ ಭಾವನೆ ವ್ಯಕ್ತಪಡಿಸಬಲ್ಲ ಪ್ರಬುದ್ಧ ನಟಿ, ಫೆ.5, 2009ರ ಕುವೈಟ್ ನಲ್ಲಿ ನಿಶ್ಚಲ್ ಚಂದ್ರರನ್ನು ಮದುವೆಯಾಗಿ ಅಲ್ಲೇ ನೆಲೆಸಿದ್ದರು. ಆದರೆ, ಅದೇ ವರ್ಷ ಜೂನ್ ನಲ್ಲಿ ತವರಿಗೆ ವಾಪಸ್, ಮೇ 30, 2011ರಲ್ಲಿ ವಿಚ್ಛೇದನ ಪಡೆದರು.

ಲಕ್ಷ್ಮಿ ರೈ

ಬೆಳಗಾವಿ ಮೂಲದ ಲಕ್ಷ್ಮಿರೈ ಮೂಲತಃ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಪಕ್ಕಾ ನಟಿಯಾಗಿ, ಈಗ ಐಟಂ ಗರ್ಲ್ ಸ್ಥಿತಿಗೆ ಬಂದು ಬಿಟ್ಟಿದ್ದಾಳೆ. ಅನ್ನನ್ ತಂಬಿ, ಹರಿಹರ್ ನಗರ್, ಚಟ್ಟಂಬಿನಾಡು, ಇವಿಡಂ ಸ್ವರ್ಗಮಾನು, ಒರು ಮರುಭೂಮಿಕ್ಕಥಾ ಮುಂತಾದ ಚಿತ್ರಗಳಲ್ಲಿ ಆಕೆ ಅಭಿನಯ, ಗ್ಲಾಮರ್ ಇನ್ನೂ ಹಸಿರಾಗಿದೆ.

ಮಮತಾ ಮೋಹನ್ ದಾಸ್

Hodgkin's lymphoma ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಮತಾ ಕನ್ನಡದಲ್ಲಿ ಸುದೀಪ್ ಜೊತೆ ಗೂಳಿ ಚಿತ್ರದಲ್ಲಿ ನಟಿಸಿದ್ದಳು. ಪ್ರಜಿತ್ ಪದ್ಮನಾಭನ್ ಮದುವೆಯಾಗಿ ಬಹರೇನ್ ನಲ್ಲಿ ನೆಲೆಸಿದ್ದಳು, ಡಿ 28, 2011ರಲ್ಲಿ ಕೋಳಿಕೊಡ್ ನಲ್ಲಿ ಮದುವೆಯಾಗಿದ್ದು ಡಿ.12, 2012ರಲ್ಲಿ ವಿವಾಹ ವಿಚ್ಛೇದನದಲ್ಲಿ ಮುಕ್ತಾಯವಾಯಿತು

ಮೀರಾ ಜಾಸ್ಮಿನ್

ಅಪ್ಪು ಜೊತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಮೀರಾ ಕನ್ನಡಕ್ಕೆ ಚಿರಪರಿಚಿತಳು. ಮಲೆಯಾಳಂನಲ್ಲಿ 2004ರಲ್ಲೇ ರಾಷ್ಟ್ರಪ್ರಶಸ್ತಿ ಗಳಿಸಿದ್ದಲ್ಲದೆ, 2 ಬಾರಿ ರಾಜ್ಯ ಪ್ರಶಸ್ತಿ ಬಾಚಿದ ಪ್ರತಿಭಾವಂತೆ. ತಮಿಳಿನಲ್ಲಿ ಮಾಧವನ್ ಮುಂತಾದವರ ಜೊತೆ ಹಾಟ್ ಆಗಿ ಕಾಣಿಸಿಕೊಂಡಾಕೆ.

ನವ್ಯಾ ನಾಯರ್

ಧನ್ಯಾ ನಾಯರ್ (1985 ಜನನ) ನವ್ಯಾ ನಾಯರ್ ಆಗಿ ಚಿತ್ರರಂಗಕ್ಕೆ ಪರಿಚಯ. ಕನ್ನಡದಲ್ಲಿ ಗಜದಲ್ಲಿ ದರ್ಶನ್ ಜೊತೆ ಅಭಿನಯ. ಕೇರಳ ರಾಜ್ಯ ಪ್ರಶಸ್ತಿ ಗೆದ್ದಿರುವ ಉತ್ತಮ ನಟಿ ಕೂಡಾ.

ನಯನತಾರಾ

ನಯನತಾರಾ(ಮೂಲ ಹೆಸರು ಡಯಾನಾ ಮರಿಯಮ್ ಕುರಿಯನ್) 2003ರಲ್ಲಿ ಮನಸ್ಸಿನಕ್ಕರೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ನಂತರ ವಿಸ್ಮಯತುಂಬತು ನಲ್ಲಿ ನಟನೆ ನಂತರ ತಮಿಳು, ತೆಲುಗು ಚಿತ್ರರಂಗಕ್ಕೆ ಶಿಫ್ಟ್. ಕನ್ನಡಲ್ಲಿ ಸೂಪರ್ ಚಿತ್ರದಲ್ಲಿ ಉಪ್ಪಿ ಜೊತೆ ನಟನೆ. ಪ್ರಭುದೇವ ಜೊತೆ ಮದುವೆ ಮಾತುಕತೆ ಸೆಟ್ ಅಪ್ ಬ್ರೇಕ್ ಅಪ್

ನಿತ್ಯಾದಾಸ್

17 ಜೂನ್ 2007ರಲ್ಲಿ ನಿತ್ಯಾ ದಾಸ್ ಅವರು ಅರವಿಂದ್ ಸಿಂಗ್ ರನ್ನು ಮದುವೆಯಾದಳು. 2005ರಲ್ಲಿ ಚೆನ್ನೈಗೆ ವಿಮಾನದಲ್ಲಿ ಪ್ರಯಾಣಿಸುವಾಗ ವಿಮಾನ ಸಿಬ್ಬಂದಿಯಾಗಿದ್ದ ಅರವಿಂದ್ ಜೊತೆ ಸ್ನೇಹ, ನಂತರ ಮದುವೆ

ಪದ್ಮಪ್ರಿಯ

ಹದಿನಾರಾಣೆ ಗೌರಮ್ಮನ ರೀತಿ ಪಾತ್ರಧಾರಿಯಾಗಿದ್ದ ಪದ್ಮಪ್ರಿಯ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ. ತಮಿಳು, ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸದ್ಯಕ್ಕೆ ಐಟಂ ಸಾಂಗ್ಸ್ ಗೂ ಸೈ ಎಂದ ನಟಿ

ರಮ್ಯಾ ನಂಬೀಸನ್

ಸವ್ಹನಂ ಚಿತ್ರದ ಮೂಲಕ 2000 ರಲ್ಲಿ ಪ್ರವೇಶ ಪಡೆದ ರಮ್ಯಾ ನಂಬೀಸನ್ ಹಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಕೆ.ತಮಿಳು ಚಿತ್ರಗಳನ್ನು ಕಾಣಿಸಿಕೊಂಡು ಹೆಸರು ಗಳಿಸಿದ್ದಾಳೆ.

ರೀಮಾ ಕಳ್ಳಿಂಗಲ್

2008ರ ಮಿಸ್ ಕೇರಳ ಸ್ಪರ್ಧೆಯ ರನ್ನರ್ ಅಪ್ ಅಗಿದ್ದ ರೀಮಾ, 2009 ರಲ್ಲಿ ರೀತು ಚಿತ್ರದ ಮೂಲಕ ನಟನೆಗೆ ಇಳಿದಳು. ನೀಲ ತಾಮರ ಹೆಸರು ತಂದುಕೊಟ್ಟ ಚಿತ್ರ.

ಸಂವೃತಾ ಸುನಿಲ್

ನವೆಂಬರ್ 1, 2012ರಲ್ಲಿ ಕೋಳಿಕಾಡ್ ನ ಇಂಜಿನಿಯರ್ ಅಖಿಲ್ ಜಯರಾಜ್ ಅವರೊಂದಿಗೆ ಮದುವೆ. ಯು ಎಸ್ ನಲ್ಲಿ ನೆಲೆಸಲು ವೀಸಾ ಪಡೆಯಲು ಜನವರಿ ತನಕ ಮದುವೆ ನೋಂದಣಿ ಮುಂದುವರಿಕೆ. ಸದ್ಯಕ್ಕೆ ಯು ಎಸ್ ನಲ್ಲಿ ಸೆಟಲ್

ಶ್ವೇತಾ ಮೆನನ್

1991ರಲ್ಲೇ ಚಿತ್ರಂಗ ಪ್ರವೇಶಿಸಿದ ಶ್ವೇತಾ ಹಿಂದಿ ಹಾಗೂ ಮಲೆಯಾಳಂ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು. ಮಾಡೆಲ್, ಕಾರ್ಯಕ್ರಮ ನಿರೂಪಕಿಯಾಗಿ ಜನಪ್ರಿಯತೆ. Rathinirvedam ಚಿತ್ರದಲ್ಲಿ ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಾಕೆ. ಇತ್ತೀಚೆಗೆ ತನ್ನ ಪ್ರಸವವನ್ನು ಲೈವ್ ಆಗಿ ಟೆಲಿಕಾಸ್ಟ್ ಮಾಡಿಸಿ ಸುದ್ದಿಯಾಗಿದ್ದಳು.

ಸಿಂಧು ಮೆನನ್

ಬೆಂಗಳೂರು ಬೆಡಗಿ ಸಿಂಧು ಮೆನನ್ ಮೂಲತಃ ಮಲೆಯಾಳಿ. ಯುಕೆ ಮೂಲಕದ ತಂತ್ರಜ್ಞ ಪ್ರಬಭು ಜೊತೆ ಏಪ್ರಿಲ್ 2010ರಲ್ಲಿ ಮದುವೆ.

ನಿತ್ಯಾ ಮೆನನ್

ಕನ್ನಡದಲ್ಲಿ ಸೆವೆನ್ ಓ ಕ್ಲಾಕ್, ಜೋಶ್ ಹಾಗೂ ಇತ್ತೀಚಿನ ಮೈನಾದಲ್ಲಿ ನಟಿಸಿರುವ ನಿತ್ಯಾ ತೆಲುಗು, ತಮಿಳು ಚಿತ್ರರಂಗದಲ್ಲಿ ಜನಪ್ರಿಯ. ಮಲೆಯಾಳಂನಲ್ಲಿ ಆಕಾಶ ಗೋಪುರಂ, ಉರುಮಿ ಸೇರಿದಂತೆ ಹಲವು ಚಿತ್ರದಲ್ಲಿ ನಟನೆ, ಗಾಯಕಿಯಾಗಿ ಕೂಡಾ ಪರಿಚಿತ

English summary
The Malayalam film industry is filled with beauties who scorch the screen with their good looks, great looking, well toned body and innate acting skills.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada